ಧಾರವಾಡ: ಆರೋಗ್ಯ, ಆರ್ಥಿಕತೆ ಮತ್ತು ಆಧ್ಯಾತ್ಮ ಈ ಮೂರನ್ನು ಸದೃಢವಾಗಿಡುವ ಶಕ್ತಿ ಗೋ ಸಂಪತ್ತಿನಲ್ಲಿದ್ದು, ಶತಾಯ ಗತಾಯ ಗೋಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಗೋರಕ್ಷಾ ಅಭಿಯಾನದ ಹಿರಿಯ ಕಾರ್ಯಕರ್ತ ದತ್ತಾತ್ರೇಯ ಭಟ್ ಹೇಳಿದರು.
ದೇವರ ಹುಬ್ಬಳ್ಳಿಯ ಸಿದ್ದಾಶ್ರಮದಲ್ಲಿ ಪಂಚಾಕ್ಷರಿ ಭಜನಾ ಸಪ್ತಾಹದ ಅಂಗವಾಗಿ ಗೋ ಮಹಿಮಾ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದಗವ್ಯೋತ್ಪನ್ನ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇಂದು ಗೋ ಸಂಪತ್ತು ನಶಿಸುತ್ತಿದ್ದು, ಭೂಮಿಗೆ ರಾಸಾಯನಿಕ ಗೊಬ್ಬರಸೇರಿಕೊಂಡಿದೆ.
ಅದರಲ್ಲಿ ಬೆಳೆದ ಆಹಾರ ತಿಂದ ನಮ್ಮ ದೇಶಕ್ಕೂ ಕಲ್ಮಶ ಸೇರಿಕೊಂಡಿದೆ. ಸದ್ಯಕ್ಕೆ ಗೋಮೂತ್ರ, ಗೋಮೇಧದಿಂದ ಸಾಕಷ್ಟು ಉತ್ಪನ್ನಗಳನ್ನು ಸಿದ್ಧಪಡಿಸಬಹುದು. ಎಲ್ಲರೂಅವುಗಳ ಉಪಯೋಗ ಮಾಡಬೇಕು. ಹೀಗಾಗಿ ಗೋಸಂಪತ್ತಿಗೆ ಎಲ್ಲರ ಆರೋಗ್ಯ, ಆರ್ಥಿಕತೆ ಮತ್ತು ಜನರಲ್ಲಿ ಪವಿತ್ರ ಭಾವವನ್ನು ಬಿತ್ತುವ ಶಕ್ತಿ ಅಡಗಿದೆ ಎಂದರು.
ದೇಶಿ ಹಸು ಉಳಿಸಿ: ಸಿಂಧೋಗಿ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ರೈತಕುಲ ಮತ್ತು ಕೃಷಿ ಉಳಿಯುವುದು ಕೇವಲ ಗೋಸಂಪತ್ತಿನಿಂದ ಮಾತ್ರ. ಇದನ್ನು ಎಲ್ಲರೂ ಅರಿಯಬೇಕು. ಭೂಮಾಲಿನ್ಯ, ಜಲಮಾಲಿನ್ಯ, ವಾಯುಮಾಲಿನ್ಯ ಎಲ್ಲವನ್ನೂ ಸರಿಪಡಿಸುವ ಶಕ್ತಿ ಗೋಉತ್ಪನ್ನಗಳಿಗೆ ಇದೆ.
ರೈತರು ಸೋಮಾರಿಗಳಾಗದೇ ದೇಶಿ ಹಸುಗಳನ್ನು ಉಳಿಸಿಕೊಳ್ಳಬೇಕು. ಅವುಗಳ ಮೂತ್ರ ಮತ್ತು ಸಗಣಿಯನ್ನು ಯಥೇಚ್ಯವಾಗಿ ಹೊಲಗಳಿಗೆ ಬಳಸುವುದರಿಂದ ಹೊಲದ ಸಾಮರ್ಥ್ಯ ಅಧಿಕವಾಗಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಸಿದ್ದಾಶ್ರಮದ ಶ್ರೀ ಸಿದ್ಧಶಿವಯೋಗಿಗಳು ಮಾತನಾಡಿ, ನಿಸರ್ಗವೇ ಇಂದು ಬೇರೆ ಬೇರೆ ಕಾರಣಗಳಿಗಾಗಿ ಮಲೀನಗೊಂಡಿದೆ. ಅದನ್ನು ಶುದ್ಧಗೊಳಿಸಲು ಗೋಸಂಪತ್ತು ಹೆಚ್ಚಬೇಕಿದೆ. ರೈತರು ತಮ್ಮಬುದ್ಧಿಗೆ ಕೆಲಸ ಕೊಡಬೇಕು. ದೇಶಿ ಹಸುಗಳ ಮಹತ್ವ ಅರಿತು ಆ ಸಂತತಿ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾ.ಗೋ.ಪ್ರೊಡೆಕ್ಟ್ಲಿ.ನ, ಎಸ್.ಸುಲೋಚನಾ ಗವ್ಯೋತ್ಪನ್ನಗಳ ಸಿದ್ಧತೆ ಮಾಡುವ ಕುರಿತು ಇಡೀ ದಿನ ತರಬೇತಿ ನೀಡಿದರು. 200 ಕ್ಕೂ ಹೆಚ್ಚು ರೈತರು ಇಡೀ ದಿನ ಗವೋತ್ಪನ್ನ ತರಬೇತಿ ಪಡೆದರು. ನಿಂಗಪ್ಪ ಮಡಿವಾಳರ ಕಾರ್ಯಕ್ರಮ ನಿರೂಪಿಸಿದರು.