Advertisement

ಕೋಟೆ :ವಯೋವೃದ್ಧರಿಗೆ ಊಟ ನೀಡುತ್ತಿರುವ ಗ್ರಾ.ಪಂ. ಅಧ್ಯಕ್ಷೆ

10:22 PM Mar 30, 2020 | Sriram |

ಕಟಪಾಡಿ: ಕೋವಿಡ್‌ 19 ವೈರಸ್‌ ವ್ಯಾಪಿಸದಂತೆ ಕರೆಯಲಾದ ಲಾಕ್‌ಡೌನ್‌ ಕರೆಯಿಂದ ಕೋಟೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಕೃತಿಕಾ ರಾವ್‌ ತಮ್ಮ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಇರುವ ಅಶಕ್ತರು, ವಯೋವೃದ್ಧರನ್ನು ಗುರುತಿಸಿ ಸ್ವತಃ ಅಡುಗೆ ಸಿದ್ಧಪಡಿಸಿ, ಊಟವನ್ನು ನೀಡುತ್ತಿದ್ದಾರೆ.

Advertisement

ಈಕೆ ಸಿದ್ಧ ಪಡಿಸಿದ ಅಡುಗೆಯಲ್ಲಿ ಪ್ರತಿಯೊಬ್ಬರಿಗೂ ಮಧ್ಯಾಹ್ನದ ಮತ್ತು ರಾತ್ರಿಯ ಸೇರಿ ಎರಡು ಹೊತ್ತಿನ ಊಟವನ್ನು ಕಳೆದ ಎರಡು ದಿನಗಳಿಂದ ನೀಡುತ್ತಾ ಬರುತ್ತಿದ್ದಾರೆ. ಸುಮಾರು 60ಕ್ಕೂ ಅಧಿಕ ಊಟವನ್ನು ಸಿದ್ಧಪಡಿಸಿ ಇದುವರೆಗೆ ವಿತರಿಸಿರುತ್ತಾರೆ. ಪರಿಸ್ಥಿತಿ ತಿಳಿಗೊಳ್ಳುವವರೆಗೆ ಮುಂದುವರಿಸುವ ಇರಾದೆಯನ್ನು ವ್ಯಕ್ತಪಡಿಸಿರುತ್ತಾರೆ.
ಈ ಭಾಗದ ಅಶಕ್ತ ವಯೋವೃದ್ಧರು ಇಂತಹ ತುರ್ತು, ಸಂದಿಗ್ಧ ಪರಿಸ್ಥಿಯನ್ನು ಅರಿತ ಹೆಣ್ಣು ಮಗಳು ಈ ರೀತಿಯಾಗಿ ವಯೋವೃದ್ಧರಾದ ನಮಗೆ ಕೈಯಡುಗೆ ಊಟ ನೀಡುತ್ತಿದ್ದು ಬಹಳಷ್ಟು ಶ್ರೇಷ್ಠ ಕೆಲಸ ಎಂದು ಹರಸಿದ್ದು, ಈಕೆಯ ಈ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.ಕೋಟೆ ಗ್ರಾ.ಪಂ. ಸದಸ್ಯರಾದ ರತ್ನಾಕರ ಕೋಟ್ಯಾನ್‌, ಲಲಿತಾ ಸೇರಿಗಾರಿ, ಆಶಾ ಕಾರ್ಯಕರ್ತೆ ಚಂದ್ರಕಲಾ, ಪ್ರಸನ್ನ ಭಟ್‌, ನಿತಿನ್‌, ಸಂತೋಷ್‌ ಮೆಂಡನ್‌ ಜೊತೆಗಿದ್ದು ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next