Advertisement

ಜಗತ್ತಿನಾದ್ಯಂತ ಜಿಮೇಲ್‌ ಆ್ಯಪ್‌ ಡೌನ್‌

12:28 AM Dec 11, 2022 | Team Udayavani |

ಹೊಸದಿಲ್ಲಿ: ಶನಿವಾರ ರಾತ್ರಿ ಸುಮಾರು 8 ಗಂಟೆಯಿಂದ ಭಾರತ ಸಹಿತ ಜಗತ್ತಿನಾದ್ಯಂತ ಜಿಮೇಲ್‌ ಡೌನ್‌ ಆಗಿತ್ತು. ಇ-ಮೇಲ್‌ಗ‌ಳು ಹೋಗುತ್ತಿಲ್ಲ, ಕಳುಹಿಸಲಾಗುತ್ತಿಲ್ಲ, ಸಂದೇಶಗಳು ಬರುತ್ತಿಲ್ಲ, ಜಿಮೇಲ್‌ ಆ್ಯಪ್‌ ಕೂಡ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಸಾವಿರಾರು ಮಂದಿ ಟ್ವೀಟ್‌ ಮಾಡಿದ್ದಾರೆ.

Advertisement

ಇದಕ್ಕೆ ಪ್ರತಿಕ್ರಿಯಿಸಿರುವ ಗೂಗಲ್‌, “ಜಿಮೇಲ್‌ನಲ್ಲಿ ಸಣ್ಣಮಟ್ಟಿಗೆ ಸಮಸ್ಯೆಯಾಗಿರುವುದು ನಿಜ. ಬಳಕೆದಾರರಿಗೆ ಇಮೇಲ್‌ ರವಾನೆಯಲ್ಲಿ ವಿಳಂಬವಾಗಬಹುದು. ನಮ್ಮ ಎಂಜಿನಿಯರಿಂಗ್‌ ತಂಡವು ಈ ಸಮಸ್ಯೆಯನ್ನು ಪರಿಹರಿಸುತ್ತಿದೆ. ಅಡಚಣೆಗೆ ಕ್ಷಮೆಯಿರಲಿ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next