Advertisement
ಇನ್ನು ಐದು ದಿನಗಳ ಕಾಲ ಆಳ್ವಾಸ್ ವಿದ್ಯಾಗಿರಿಯ ಆವರಣದ ಉದ್ದಗಲಕ್ಕೆ ವೈವಿಧ್ಯಮಯ ವಿಷಯಗಳನ್ನು ಹುಡುಕಿ ಬರುವ ಕಂಗಳಿಗೆ ಈ ವಿರಾಸತ್ ಎನ್ನುವ ರಥ ಭರಪೂರ ಮನರಂಜನೆ, ಖುಷಿ, ಮಾಹಿತಿಯ ಷಡ್ರಸೋಪೇತ ಭೋಜನವನ್ನು ಉಣಿಸಲಿದೆ.ಆಳ್ವಾಸ್ ವಿರಾಸತ್ ಡಿ.10ರ ಸಂಜೆ ಚಾಲನೆ ಪಡೆದುಕೊಂಡು, 15ರ ರಾತ್ರಿ ವರೆಗೆ ನಡೆಯಲಿದೆ.
Related Articles
Advertisement
11ರಂದು ಪ್ರಶಸ್ತಿ ಪ್ರದಾನಡಿ.11ರಂದು ಸಂಜೆ 5.45ರಿಂದ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ನಡೆಯಲಿದ್ದು, ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರದಾನ ಮಾಡಲಾಗುವುದು. 6.35ರಿಂದ ಅವರು ಹಿಂದೂಸ್ಥಾನಿ ಗಾಯನ ನಡೆಸಿಕೊಡವರು. 7.45ರಿಂದ ಗುಜರಾತ್ನ ರಂಗ್ ಮಲಹರ್ ದಿ ´ೋಕ್ ಆರ್ಟ್ಸ್ ತಂಡದಿಂದ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ 9ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ದಿನವೂ ಸಾಂಸ್ಕೃತಿಕ ವೈವಿಧ್ಯ
ಡಿ.12ರ ಸಂಜೆ 6ರಿಂದ 8ರ ವರೆಗೆ ಗುಜರಾತ್ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ 8.15ರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಉಡುಪಿ ಕೊಡವೂರಿನ ನೃತ್ಯ ನಿಕೇತನ, ಬೆಂಗಳೂರು ಚಿಗುರು ನೃತ್ಯಾಲಯ, ಮಂಗಳೂರಿನ ಸನಾತನ ನಾಟ್ಯಾಲಯ, ಕುಂದಾಪುರದ ನೃತ್ಯ ವಸಂತ ನಾಟ್ಯಾಲಯ, ಮಂಗಳೂರಿನ ಗಾನ ನೃತ್ಯ ಅಕಾಡೆಮಿ, ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಕಲಾವಿದರಿಂದ ನೃತ್ಯವೈವಿಧ್ಯ, 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈವಿಧ್ಯ ಇರಲಿದೆ. ಡಿ.13ರಂದು ಸಂಜೆ 6ರಿಂದ ನೀಲಾದ್ರಿ ಕುಮಾರ್ ಮತ್ತು ತಂಡದಿಂದ “ಸೌಂಡ್ ಆಫ್ ಇಂಡಿಯಾ’ ಹಾಗೂ 8.15ರಿಂದ ಕೋಲ್ಕತಾದ ಆಶೀಮ್ ಬಂಧು ಚಟರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ. ರಾತ್ರಿ 9ರಿಂದ “ನೃತ್ಯೋಲ್ಲಾಸ’ ಹಾಗೂ ಬೆಂಗಳೂರು ಶ್ರೀ ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ. ಡಿ.14ರಂದು ಸಂಜೆ 6ರಿಂದ ಚೆನ್ನೈ ಸ್ಟೆಕೇಟೋದ ಕಲಾವಿದರಿಂದ “ಸಂಗೀತ ರಸದೌತಣ’ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನ ನಡೆಯಲಿದೆ. ಡಿ.15ರಂದು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ ಎಲ್ಲ ಮೇಳಗಳು, ಪ್ರದರ್ಶನ ಮಾರಾಟವನ್ನು ಆಸ್ವಾದಿಸಬಹುದು. ಪ್ರವೇಶ ಉಚಿತ
ವಿರಾಸತ್ಗೆ ಪ್ರವೇಶ ಸಂಪೂರ್ಣ ಉಚಿತ. ಕಾರ್ಯಕ್ರಮ ಗಳು ಕ್ಲಪ್ತ ಸಮಯಕ್ಕೆ ಆರಂಭಗೊಳ್ಳಲಿವೆ. ಸುಮಾರು 40 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು, ವಾಹನ ಪಾರ್ಕಿಂಗ್ಗೆ ವಿಶಾಲ ವ್ಯವಸ್ಥೆ ಇರುತ್ತದೆ. ವಿದ್ಯಾಗಿರಿಯಲ್ಲಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದರೆ, ಸಮೀಪದ ಕೃಷಿಸಿರಿ, ನೀಟ್ ಕಟ್ಟಡ, ಅರಮನೆ ಮೈದಾನ ಸಹಿತ ಸುತ್ತಲಿನ ಆವರಣದಲ್ಲಿ ಕೃಷಿಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತವೆ. ತುಳುನಾಡಿನ ಗುತ್ತಿನ ಮನೆಯ ಪರಿ ಕಲ್ಪನೆಯಲ್ಲಿ ಕೃಷಿಸಿರಿ ಮೇಳಗಳ ಆವರಣವನ್ನು ಸಜ್ಜುಗೊಳಿ ಸಲಾಗಿದ್ದು, ಈ ಬಾರಿ 650 ಮಳಿಗೆಗಳಿವೆ. ಸುಮಾರು 2.5 ಲಕ್ಷಕ್ಕೂ ಅಧಿಕ ಹೂವಿನ ಗಿಡಗಳು, 500ಕ್ಕೂ ಹೆಚ್ಚು ಕಲಾ ಕೃತಿ ಗಳು ವಿರಾಸತ್ ರಾಜಮಾರ್ಗದ ಅಂದವನ್ನೂ ಹೆಚ್ಚಿಸಿವೆ.