Advertisement
ಬ್ಯಾಡ್ಮಿಂಟನ್: ಸುಹಾಸ್, ತುಳಸೀಮತಿ ಸುಕಾಂತ್, ಪಲಕ್ ಗೆಲುವಿನ ಆರಂಭಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಈ ಬಾರಿ 13 ಮಂದಿ ಆ್ಯತ್ಲೀಟ್‌ಗಳು ಭಾಗಿಯಾಗಿದ್ದು, ಮೊದಲ ದಿನ 8 ಸ್ಪರ್ಧೆಗಳಲ್ಲಿ ಭಾರತ ಗೆದ್ದರೆ, 5 ಸ್ಪರ್ಧೆಗಳಲ್ಲಿ ಸೋಲು ಕಂಡಿದೆ. ಗುರುವಾರ ನಡೆದ ಪ್ಯಾರಾ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ (ಎಸ್‌ಎಲ್3-ಎಸ್‌ಯು5) ಗ್ರೂಪ್ ಹಂತದ ಸ್ಪರ್ಧೆಯಲ್ಲಿ ನಿತೀಶ್ ಕುಮಾರ್-ತುಳಸೀಮತಿ ಮುರುಗೇಶನ್ ಅವರನ್ನೊಳಗೊಂಡ ಜೋಡಿ, ಕನ್ನಡಿಗ ಸುಹಾಸ್ ಲಲಿನಾಕೆರೆ ಮತ್ತು ಪಾಲಕ್ ಕೊಹ್ಲಿ ಜೋಡಿಯನ್ನು 21-14, 21-17 ಅಂತರದಿಂದ ಸೋಲಿಸಿತು.
ಭಾರತದ ಪ್ಯಾರಾ ಆರ್ಚರ್ ಶೀತಲ್ ದೇವಿ ಅವರು ಗುರುವಾರ ನಡೆದ ಆರ್ಚರಿ ರ್‍ಯಾಂಕಿಂಗ್ ಸುತ್ತಿನಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇ ಶಿಸಿದ್ದಾರೆ. ರ್‍ಯಾಂಕಿಂಗ್ ಸುತ್ತಿನಲ್ಲಿ 703 ಅಂಕ ಪಡೆದುಕೊಂಡ ಶೀತಲ್ ಕೇವಲ 1 ಅಂಕದಿಂದ ವಿಶ್ವದಾಖಲೆ ನಿರ್ಮಾಣ ಮಾಡುವ ಅವಕಾಶ ತಪ್ಪಿಸಿ ಕೊಂಡರು. ಕಾಂಪೌಂಡ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯ ಶನಿವಾರ ನಡೆಯಲಿದೆ.
Related Articles
Advertisement
ಉಳಿದಂತೆ ಮಹಿಳಾ ವಿಭಾಗದಲ್ಲಿ 682 ಅಂಕ ಸಂಪಾದಿಸಿದ ಸರಿತಾ 9ನೇ ಸ್ಥಾನಿಯಾದರು. ಸರಿತಾ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾದ ನೂರ್ ಜನಾತನ್ ಅಬ್ದುಲ್ ಅವರನ್ನು ಎದುರಿಸಲಿದ್ದು ಈ ಪಂದ್ಯ ಶುಕ್ರವಾರ ನಡೆಯಲಿದೆ.
ಟೇಕ್ವಾಂಡೋ, ಸೈಕ್ಲಿಂಗ್ಪ್ಯಾರಾ ಟೇಕ್ವಾಂಡೋದ 44ರಿಂದ 47 ಕೆಜಿ ವಿಭಾಗದಲ್ಲಿ ಭಾರತದ ಅರುಣಾ ತನ್ವರ್ ಸೋಲನುಭವಿಸಿದರೆ, 3000 ಮೀ. ಪ್ಯಾರಾ ಸೈಕ್ಲಿಂಗ್‌ನಲ್ಲಿ ಜ್ಯೋತಿ ಗಡೇರಿಯಾ 10ನೇ ಸ್ಥಾನಿಯಾಗಿ ಹೊರಬಿದ್ದರು. ಭಾರತದ ಇಂದಿನ ಸ್ಪರ್ಧೆಗಳು
ಆ್ಯತ್ಲೆಟಿಕ್ಸ್
ಮಹಿಳೆಯರ ಡಿಸ್ಕಸ್ (ಫೈನಲ್): ಕರೀಮ್ ಜ್ಯೋತಿ ದಲಾಲ್, ಸಾಕ್ಷಿ ಕಸಾನ
ಸಮಯ: ಮ. 1.30
ಮಹಿಳೆಯರ 100 ಮೀ. (ಫೈನಲ್): ಪ್ರೀತಿ ಪಾಲ್
ಸಮಯ: ಸ. 4.45
ಬ್ಯಾಡ್ಮಿಂಟನ್
ಮಹಿಳೆಯರ ಸಿಂಗಲ್ಸ್ (ಗ್ರೂಪ್ ಹಂತ): ಮಾನಸಿ ಜೋಶಿ
ಸಮಯ: ಮ. 12.00
ಪುರುಷರ ಸಿಂಗಲ್ಸ್ (ಗ್ರೂಪ್ ಹಂತ): ಮನೋಜ್ ಸರ್ಕಾರ್
ಸಮಯ: ಮ. 1.20, ನಿತೀಶ್ ಕುಮಾರ್, ಸಮಯ: ಮ. 2.00
ಸುಹಾಸ್ ಯತಿರಾಜ್, ಸಮಯ: ಮ. 2.40
ಶೂಟಿಂಗ್
ಮಹಿಳೆಯರ 10 ಮೀ. ಏರ್ ರೈಫಲ್ (ಅರ್ಹತಾ ಸುತ್ತು): ಅವನಿ ಲೇಖರ
ಸಮಯ: ಮ. 12.30
ಪುರುಷರ 10 ಮೀ. ಏರ್ ಪಿಸ್ತೂಲ್: ರುದ್ರಾಂಶ್ ಖಂಡೇಲ್ವಾಲ್, ಮನೀಶ್ ನರ್ವಾಲ್
ಸಮಯ: ಮ. 2.45
ಮಿಶ್ರ 10 ಮೀ. ಏರ್ ರೈಫಲ್ (ಅರ್ಹತಾ ಸುತ್ತು): ಶ್ರೀಹರ್ಷ ದೇವರೆಡ್ಡಿ
ಸಮಯ: ಸ. 5.00
ರೋವಿಂಗ್
ಮಿಶ್ರ ಡಬಲ್ಸ್ ಸ್ಕಲ್ಸ್ (ಹೀಟ್): ಅನಿತಾ-ನಾರಾಯಣ ಕೊಂಗನಪಲ್ಲೆ
ಸಮಯ: ಮ. 3.00
ಟ್ರ್ಯಾಕ್ ಸೈಕ್ಲಿಂಗ್
ಪುರುಷರ ಅರ್ಹತಾ ಸ್ಪರ್ಧೆ: ಅರ್ಷದ್ ಶೈಕ್
ಸಮಯ: ಸ. 4.24