Advertisement

ಜಾಗತಿಕ ಜಲ ಕಣ್ಗಾವಲು ಉಪಗ್ರಹ; ನಾಸಾದಿಂದ ಸ್ವಾಟ್‌ ಉಪಗ್ರಹ ಉಡಾವಣೆ ಯಶಸ್ವಿ

01:03 AM Dec 17, 2022 | Team Udayavani |

ಜಗತ್ತಿನ ಎಲ್ಲ ಸಮುದ್ರಗಳು, ಸರೋವರಗಳು ಮತ್ತು ನದಿಗಳ ಮೇಲೆ ನಿಗಾ ಇಡಬಲ್ಲಂಥ ಉಪಗ್ರಹವೊಂದನ್ನು ನಾಸಾ ಶುಕ್ರವಾರ ಉಡಾವಣೆ ಮಾಡಿದೆ. ಅಮೆರಿಕ-ಫ್ರಾನ್ಸ್‌ ಸಹಯೋಗದಲ್ಲಿ ಕ್ಯಾಲಿಫೋರ್ನಿಯಾದಿಂದ “ಸ್ವಾಟ್‌’ (ಸರ್‌ಫೇಸ್‌ ವಾಟರ್‌ ಆ್ಯಂಡ್‌ ಓಷಿಯನ್‌ ಟೋಪೋಗ್ರಫಿ) ಉಪಗ್ರಹವನ್ನು ಹೊತ್ತು ಸ್ಪೇಸ್‌ಎಕ್ಸ್‌ ರಾಕೆಟ್‌ ನಭಕ್ಕೆ ಚಿಮ್ಮಿದೆ.

Advertisement

ಸಾಮರ್ಥ್ಯವೇನು?
ಎಸ್‌ಯುವಿ ಗಾತ್ರದ ಈ ಉಪಗ್ರಹವು ಭೂಮಿಯ ಮೇಲ್ಮೆ„ಯಲ್ಲಿನ ಶೇ.90ಕ್ಕೂ ಹೆಚ್ಚು ಭಾಗದಲ್ಲಿರುವ ನೀರಿನ ಎತ್ತರವನ್ನು ಅಳೆಯಬಲ್ಲದು. ಈ ಮೂಲಕ ನೀರಿನ ಹರಿವನ್ನು ಟ್ರ್ಯಾಕ್‌ ಮಾಡಿ, ಸಂಭಾವ್ಯ ಅಪಾಯದ ಪ್ರದೇಶಗಳನ್ನು ಕಂಡುಹಿಡಿಯಲು ವಿಜ್ಞಾನಿಗಳಿಗೆ ನೆರವಾಗಬಲ್ಲದು. ಕೋಟ್ಯಂತರ ಸರೋವರಗಳು ಹಾಗೂ 2.1 ದಶಲಕ್ಷ ಕಿ.ಮೀ.ನಷ್ಟು ನದಿಗಳನ್ನೂ ಸರ್ವೇ ಮಾಡಲಬಲ್ಲದು.

ಉಪಗ್ರಹದ ಕೆಲಸಗಳು
ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ಜಗತ್ತಿನ ಸಮುದ್ರ, ನದಿ, ಸರೋವರಗಳ ಮೇಲೆ ಕಣ್ಗಾವಲಿಡುತ್ತದೆ.
ಜಗತ್ತಿನ ಶುದ್ಧ ನೀರಿನ ವ್ಯವಸ್ಥೆಯ ಬಗ್ಗೆ ಮೊದಲ ಬಾರಿಗೆ ಜಾಗತಿಕ ಸರ್ವೇ ನಡೆಸಲಿದೆ.
ನೀರು ಎಲ್ಲಿದೆ, ಎಲ್ಲಿಂದ ಬರುತ್ತಿದೆ, ಎಲ್ಲಿಗೆ ಸಾಗುತ್ತಿದೆ ಎಂಬುದನ್ನು ತಿಳಿಸುತ್ತದೆ.
ಸಮುದ್ರಮಟ್ಟ ಏರಿಕೆಯ ವೇಗ ಮತ್ತು ಪ್ರದೇಶವನ್ನು ಕಂಡುಹಿಡಿಯುತ್ತದೆ.
ಕರಾವಳಿ ತೀರಗಳಲ್ಲಿನ ಬದಲಾವಣೆಯನ್ನು ಪತ್ತೆಹಚ್ಚಿ, ಜನರ ಜೀವ ಹಾಗೂ ಆಸ್ತಿಪಾಸ್ತಿ ರಕ್ಷಿಸಲು ನೆರವಾಗುತ್ತದೆ.
ಪ್ರವಾಹ, ಬರಗಾಲದಂಥ ಪ್ರಾಕೃತಿಕ ವಿಕೋಪಗಳ ಬಗ್ಗೆ ಮಾಹಿತಿ ನೀಡಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next