ಬೆಂಗಳೂರು: ಜಾಗತಿಕ ವಿಶ್ವವಿದ್ಯಾನಿಲಯಗಳ 2025ನೇ ಸಾಲಿನ ರ್‍ಯಾಂಕಿಂಗ್ ಅನ್ನು ದಿ ಟೈಮ್ಸ್ ಹೈಯರ್ ಎಜುಕೇಶನ್ ಸಂಸ್ಥೆಯು ಪ್ರಕಟಿಸಿದ್ದು, ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) 251ರಿಂದ 300ರ ವರೆಗಿನ ರ್‍ಯಾಂಕಿಂಗ್ ಪಡೆದಿರುವ ಜಾಗತಿಕ ವಿ.ವಿ.ಗಳ ಪೈಕಿ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿರುವ ಭಾರತದ ಅಗ್ರ ವಿ.ವಿ. ಎಂಬ ಗೌರವಕ್ಕೂ ಪಾತ್ರವಾಗಿದೆ.
ಕರ್ನಾಟಕದ ಮಾಹೆ (ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್)ಗೆ 801ರಿಂದ 1,000ದ ಕೆಟಗರಿಯಲ್ಲಿ ಸ್ಥಾನ ದೊರೆತಿದ್ದು, ಜೈಪುರದ ಮಣಿಪಾಲ್ ವಿ.ವಿ.ಯು 1,201ರಿಂದ 1,500 ರ್‍ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಐಐಎಸ್‌ಸಿ ಭಾರತದ ವಿ.ವಿ.ಗಳ ಪೈಕಿ ಮೊದಲ ಸ್ಥಾನ ಪಡೆದಿದ್ದರೂ ಜಾಗತಿಕ ಮಟ್ಟದಲ್ಲಿ ಕಳೆದ ಸಾಲಿಗಿಂತಲೂ ಕಡಿಮೆ ಶ್ರೇಯಾಂಕ ಗಳಿಸಿದೆ. 2024ರಲ್ಲಿ ಬೆಂಗಳೂರಿನ ಐಐಎಸ್‌ಸಿ 201ರಿಂದ 250ರ ಪಟ್ಟಿಯಲ್ಲಿರುವ ವಿ.ವಿ.ಗಳ ಪೈಕಿ
ಸ್ಥಾನ ಪಡೆದಿತ್ತು. ಜಗತ್ತಿನಾದ್ಯಂತ ಇರುವ2,000 ವಿ.ವಿ.ಗಳಿಗೆ ಟೈಮ್ಸ್ ಹೈಯರ್ ಎಜುಕೇಶನ್ ರ್‍ಯಾಂಕಿಂಗ್ ನೀಡಿದೆ.