Advertisement

ಭಾರತ, ಚೀನಕ್ಕೆ ಹಿಂಜರಿತ ಕಮ್ಮಿ ; ವಿಶ್ವಸಂಸ್ಥೆಯ ವ್ಯಾಪಾರ, ಅಭಿವೃದ್ಧಿ ಸಮಿತಿ ವರದಿ ಉಲ್ಲೇಖ

09:29 AM Apr 02, 2020 | Hari Prasad |

ವಾಷಿಂಗ್ಟನ್‌: ಕೋವಿಡ್ 19 ವೈರಸ್ ನಿಂದಾಗಿ ವಿಶ್ವದ ಪ್ರಬಲ ರಾಷ್ಟ್ರಗಳು ಈ ವರ್ಷ ತೀವ್ರ ಆರ್ಥಿಕ ಹಿಂಜರಿತ ಕಾಣಲಿವೆ. ಆದರೆ, ಭಾರತ ಮತ್ತು ಚೀನದಲ್ಲಿ ಮಾತ್ರ ಆರ್ಥಿಕ ಹಿಂಜರಿತದ ಪ್ರಮಾಣ ಕಡಿಮೆ ಇರಲಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಿತಿಯ ವರದಿ ತಿಳಿಸಿದೆ.

Advertisement

ಕೋವಿಡ್ 19 ವೈರಸ್ ನಿಂದಾಗಿ ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಮುಂದಿನ 2 ವರ್ಷಗಳ ಅವಧಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ 2-3 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ನಷ್ಟು  ಕುಸಿತ ಕಂಡು ಬರಲಿದೆ. ಈಗಿನ ಆರ್ಥಿಕ ಹಿಂಜರಿತ 2009 ರಲ್ಲಿ ಕಂಡು ಬಂದ ಆರ್ಥಿಕ ಹಿಂಜರಿತಕ್ಕಿಂತಲೂ ಭೀಕರವಾಗಿರಲಿದೆ ಎಂದು ವರದಿ ತಿಳಿಸಿದೆ.

ಆರ್ಥಿಕ ಹಿಂಜರಿತದ ಪ್ರಮಾಣ ಭಾರತ ಮತ್ತು ಚೀನದಲ್ಲಿ ಕಡಿಮೆ ಇರಲಿದೆ ಎಂದು ವರದಿ ಹೇಳಿದೆಯಾದರೂ, ಈ ಎರಡೂ ರಾಷ್ಟ್ರಗಳು ಭೀಕರ ಆರ್ಥಿಕ ಹಿಂಜರಿತದಿಂದ ಪಾರಾಗುವುದು ಹೇಗೆ ಮತ್ತು ಅದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next