Advertisement
ಬಸವಕಲ್ಯಾಣದ ಬಸವ ಮಹಾಮನೆ ಪರಿಸರದಲ್ಲಿ 20ನೇ ಕಲ್ಯಾಣ ಪರ್ವದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ “ಧರ್ಮ ಚಿಂತನ’ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆಯ ಸಂದೇಶ ಸಾರಿದ ಬಸವಾದಿ ಶರಣರ ಈ ನೆಲ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಭೂಮಿಯಾಗಿದೆ. ಶರಣರ ತತ್ವ, ಚಿಂತನೆಗಳನ್ನು ವಿಶ್ವಮಾನ್ಯವಾಗಿಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಎಂದು ಕರೆ ನೀಡಿದರು.
Related Articles
Advertisement
ಶ್ರೀ ಜಗದ್ಗುರು ಬಸವಕುಮಾರ ಸ್ವಾಮೀಜಿ ಮತ್ತು ಜಗದ್ಗುರು ಮಾತೆ ಜ್ಞಾನೇಶ್ವರಿ ನೇತೃತ್ವ ತೆಲಂಗಾಣಾ ಬಸವ ದಳದ ರಾಜ್ಯಾಧ್ಯಕ್ಷ ಶಂಕ್ರೆಪ್ಪ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತೆಲಂಗಾಣಾದ ವಿಎಲ್‌ಎಲ್‌ಬಿಎಸ್ ಗೌರವಾಧ್ಯಕ್ಷ ವೆನ್ನು ಈಶ್ವರಪ್ಪ ಗುರು ಬಸವ ಪೂಜೆ ನೆರವೇರಿಸಿದರು. ಅಧ್ಯಕ್ಷ ಪಿ. ಸಂಗಮೇಶ್ವರ, ಜಾಗತಿಕ ಲಿಂಗಾಯತ ಮಹಾ ಸಭಾದ ರಾಜ್ಯ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಬಿಕೆಡಿಬಿ ಮಾಜಿ ಸದಸ್ಯ ಶಿವರಾಜ ನರಶೆಟ್ಟಿ, ಮಹಾರಾಷ್ಟ್ರದ ಬಸವ ಬ್ರಿàಗೆಡ್ ಸಂಸ್ಥಾಪಕ ಅವಿನಾಶ ಭೋಶಿಕರ್, ತೆಲಂಗಾಣಾದ ದಿನೇಶ ಪಾಟೀಲ, ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಹಾವಶೆಟ್ಟಿ ಪಾಟೀಲ ಇನ್ನಿತರರಿದ್ದರು.
ಬಸವಣ್ಣನ ಪುತ್ಥಳಿ ಸ್ಥಾಪನೆ
ಬಸವ ತತ್ವ ಪ್ರಸಾರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಲಿಂ| ಮಾತೆ ಮಹಾದೇವಿ ಅವರ ಸಾಧನೆ ಅಪೂರ್ವವಾದದ್ದು. ಹೈದ್ರಾಬಾದ್ ಟ್ಯಾಂಕ್ ಬಾಂಡ್ ಮೇಲೆ ತೆಲಂಗಾಣ ಸರ್ಕಾರದ 2 ಕೋಟಿ ರೂ. ವೆಚ್ಚದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸಿದೆ. ಹೈದ್ರಾಬಾದ್‌ನಲ್ಲಿ ಬಸವ ಭವನಕ್ಕಾಗಿ 1 ಎಕರೆ ಸ್ಥಳವೂ ಮಂಜೂರಾಗಿದ್ದು, ಕಟ್ಟಡಕ್ಕಾಗಿ 10 ಕೋಟಿ ರೂ. ಸರ್ಕಾರ ಮಂಜೂರು ಮಾಡಿದೆ. ಶೀಘ್ರ ಕಾಮಗಾರಿಗೆ ಚಾಲನೆ ಸಿಗಲಿದೆ. -ಬಿ.ಬಿ. ಪಾಟೀಲ, ಜಹೀರಾಬಾದ್ ಸಂಸದ
ಸ್ವತಂತ್ರ ಧರ್ಮ, ಒಳ ಪಂಗಡ ಒಂದಾಗಲಿ ಲಿಂಗಾಯತ ಧರ್ಮದ ಎಲ್ಲ ಒಳ ಪಂಗಡದವರು ಒಂದಾಗಿ ಹೋರಾಟ ಮಾಡಿದಾಗ ಮಾತ್ರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿನ ಹೋರಾಟ ಯಶಸ್ವಿಯಾಗಲು ಸಾಧ್ಯ. ಲಿಂಗಾಯತ ಧರ್ಮದಲ್ಲಿ 102 ಒಳಪಂಗಡಗಳಿವೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರು ಮೀಸಲಾತಿ ಬೇಡಿಕೆ ಹೋರಾಟ ಮಾಡಲಿ. ಇದು ಅವರ ಹಕ್ಕೂ ಆಗಿದೆ. ಇದಕ್ಕೆ ನಮ್ಮ ಅಕ್ಷೇಪವಿಲ್ಲ. ಬೆಂಬಲವಿದೆ. ಆದರೆ ಲಿಂಗಾಯತ ಸ್ವಾತಂತ್ರ ಧರ್ಮದ ವಿಷಯ ಬಂದಾಗ ಒಳಪಂಗಡವರು ಒಂದಾಗಬೇಕಿದೆ. ಮಹಾರಾಷ್ಟ್ರದ ಪರಭಾನಿಯಲ್ಲಿ ಅ. 24ರಂದು ಲಿಂಗಾಯತ ಸ್ವಾತಂತ್ರ ಧರ್ಮದ ಮಾನ್ಯತೆಗಾಗಿ ಬೃಹತ್ ರ್ಯಾಲಿ ನಡೆಯಲಿದೆ. ಮುಂದೆ ತೆಲಂಗಾಣಾದಲ್ಲಿಯೂ ರ್ಯಾಲಿ ನಡೆಸಲಾಗುವುದು. ಚನ್ನಬಸವಾನಂದ ಸ್ವಾಮೀಜಿ, ಬೆಂಗಳೂರು