Advertisement

ಪುದುವೆಟ್ಟು ಶಾಲೆಯಲ್ಲಿ ಜಾಗತಿಕ ಗಂಟೆ!

03:32 PM Sep 19, 2017 | Team Udayavani |

ಬೆಳ್ತಂಗಡಿ : ಈ ಶಾಲೆಯ ಮಕ್ಕಳು ಕುಳಿತಲ್ಲೇ ಅಮೆರಿಕದವರು ಈಗೇನು ಮಾಡುತ್ತಿರಬಹುದು ಎಂದು ಅಂದಾಜಿಸಬಲ್ಲರು. ಆಸ್ಟ್ರೇಲಿಯಾದಲ್ಲಿ ಜನತೆಯ ಚಟುವಟಿಕೆ ಏನಿರಬಹುದು ಎಂದು ಊಹಿಸಬಲ್ಲರು. ಏಕೆಂದರೆ ಇವರು ಕುಳಿತಲ್ಲೇ ನಾನಾ ದೇಶಗಳ ಸಮಯ ಕಾಣಬಲ್ಲರು.

Advertisement

ಜಾಗತಿಕ ಸಮಯ 
ಪುದುವೆಟ್ಟಿನಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ದೇಶಗಳ ಕಾಲಮಾನ ಪ್ರದರ್ಶಿಸುವ ಗಡಿಯಾರಗಳನ್ನು ತೂಗು ಹಾಕಲಾಗಿದೆ.  ಶಾಲಾ ಮಟ್ಟದಲ್ಲಿ ಇದು ಹೊಸ ಪ್ರಯೋಗ. ಜತೆಗೆ ಆಯಾ ಗಡಿಯಾರದ ಕೆಳಗೆ ಆಯಾ ದೇಶಗಳ ಹೆಸರು ಪ್ರಕಟಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಭಾರತದಲ್ಲಿ ಬೆಳಗ್ಗೆ 10 ಗಂಟೆಯಾದಾಗ ಅಮೆರಿಕದಲ್ಲಿ ಎಷ್ಟು ಗಂಟೆ?ಕೆನಡಾದ ಸಮಯವೆಷ್ಟು ಎಂದು ಕೂಡಲೇ ತಿಳಿಯಬಹುದು. ಈ ಕಲ್ಪನೆಯ ಸಾಕಾರಮೂರ್ತಿ ಶಾಲಾ ಮುಖ್ಯ ಶಿಕ್ಷಕ ವಸಂತ ಭಟ್‌.

ಎಲ್ಲ ವಿವರ
ಇದಿಷ್ಟಕ್ಕೇ ಸುಮ್ಮನಾಗಿಲ್ಲ. ಸಮಯ ವನ್ನು ಯಾವುದಕ್ಕೆ ಸರಿಯಾಗಿ ಹೊಂದಿಸ ಲಾಗುತ್ತದೆ. ಭೂಮಧ್ಯ ರೇಖೆ, ಇಂಡಿಯನ್‌ ಸ್ಟಾಂಡರ್ಡ್‌ ಟೈಮ್‌ಇತ್ಯಾದಿ ಎಲ್ಲ ವಿವರಗಳನ್ನು ಮಕ್ಕಳಿಗೆ ತಿಳಿ ಹೇಳಿ ಅಮೆರಿಕ ಹಾಗೂ ಭಾರತದ ಸಮಯಕ್ಕೆ ಯಾಕೆ ವ್ಯತ್ಯಾಸ ಎನ್ನುವುದನ್ನು ಮಕ್ಕಳಿಗೆ ಮನದಟ್ಟು ಮಾಡ ಲಾಗುತ್ತದೆ ಎನ್ನುತ್ತಾರೆ ಶಿಕ್ಷಕ ಜೋಸೆಫ್‌.

ಲೋಕಾರ್ಪಣೆ
ಧರ್ಮೋತ್ಥಾನ ಟ್ರಸ್ಟ್‌ ಕಾರ್ಯದರ್ಶಿ ಎ. ವೀರು ಶೆಟ್ಟಿ ಅವರು ಇದನ್ನು ಲೋಕಾರ್ಪಣೆ ಮಾಡಿ ಸಮಯ ಪರಿಪಾಲನೆಯ ಮಹತ್ವವವನ್ನು ಮಕ್ಕಳಿಗೆ ಹೇಳಿದರು.ಪತ್ರಕರ್ತ ಧನಕೀರ್ತಿ ಆರಿಗ ಮತ್ತಿತರರು ಉಪಸ್ಥಿತರಿದ್ದರು.

ಸೌಲಭ್ಯ ವಂಚಿತ
ಇದು ಪಟ್ಟಣಕ್ಕೆ ಹತ್ತಿರವಿದ್ದರೂ ಒಂದರ್ಥದಲ್ಲಿ ಹಿಂದುಳಿದ ಪ್ರದೇಶ. ಧರ್ಮಸ್ಥಳದಿಂದ 7-8 ಕಿ.ಮೀ. ದೂರದಲ್ಲಿ ಇದ್ದರೂ  ಮೊಬೈಲ್‌ ನೆಟ್‌ವರ್ಕ್‌, ರಸ್ತೆ ಅವ್ಯವಸ್ಥೆ, ಸಂಚಾರ ಸಾರಿಗೆ ಸಮಸ್ಯೆ ಸೇರಿದಂತೆ ಹತ್ತು ಹಲವು ಸೌಲಭ್ಯಗಳಿಂದ ವಂಚಿತವಾಗಿ ಹಿಂದುಳಿದಿದೆ. ಇಲ್ಲಿನ ಮಕ್ಕಳಿಗೆ ಹಳ್ಳಿ ಮಕ್ಕಳು ಎಂಬ ಭಾವನೆ ಬರಬಾರದು ಎಂದೇ ಶಾಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬೇರೆ ಬೇರೆ ಚಟುವಟಿಕೆಗಳ ಮೂಲಕ ಮಕ್ಕಳ ಜ್ಞಾನದ ವಿಸ್ತಾರಕ್ಕೆ ಪ್ರಯತ್ನಿಸಲಾಗುತ್ತಿದೆ.

Advertisement

ಆಧುನಿಕ ತಂತ್ರಜ್ಞಾನದ ಮಾಹಿತಿ
ಗ್ರಾಮಾಂತರ ಪ್ರದೇಶದ ಮಕ್ಕಳುಜಾಗತಿಕ ತಿಳಿವಳಿಕೆಯಲ್ಲಿ ಹಿಂದುಳಿಯಬಾರದು ಎಂಬ ನಿಟ್ಟಿನಲ್ಲಿಈ ಪ್ರಯೋಗ ಮಾಡಲಾಗಿದೆ.ಕಂಪ್ಯೂಟರ್‌ ಅಳವಡಿಕೆ ಮೂಲಕ ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ನೀಡಲಾಗುತ್ತಿದೆ.
ವಸಂತ ಭಟ್‌, ಮುಖ್ಯ ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next