Advertisement
ಚೀನದ ವುಹಾನ್‌ನ ಮಾಂಸ ಮಾರುಕಟ್ಟೆ ಕೋವಿಡ್-19 ವೈರಸ್ ಹರಡಲು ಕಾರಣ ಎಂದು ಹೇಳಲಾಗಿದೆ. ಜೀವಂತ ಮತ್ತು ಸತ್ತ ಪ್ರಾಣಿಗಳನ್ನು ಮಾನವ ಬಳಕೆಗಾಗಿ ಮಾರಾಟ ಮಾಡುವ “ವೆಟ್ ಮಾರುಕಟ್ಟೆಗಳನ್ನು” ನಿಷೇಧಿಸಬೇಕು ಎಂದು ಯುಎನ್ ಜೈವಿಕ ವೈವಿಧ್ಯದ ಸಮಾವೇಶದ ಕಾರ್ಯಕಾರಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಲಿಜಬೆತ್ ಮಾರುಮಾ ಮ್ರೆಮಾ ಮನವಿ ಮಾಡಿದ್ದಾರೆ. ಈ ಮೂಲಕ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ದೇಶಗಳು ಮುಂದಾಗಬೇಕು ಎಂದು ಎಂದಿದ್ದಾರೆ.
Related Articles
Advertisement
ಚೀನದ ವುಹಾನ್ ನಗರದಲ್ಲಿ ವೆಟ್ ಮಾರುಕಟ್ಟೆಯಿದ್ದು ಅಲ್ಲಿ ಸಜೀವ ಮತ್ತು ಸತ್ತ ಪ್ರಾಣಿಗಳನ್ನು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ರೂಪುಗೊಳಿಸಿ ಕೊಡಲಾಗುತ್ತದೆ. ಕೊರೊನಾ ವೈರಸ್‌ನ ಮೂಲ ಈ ವೆಟ್ ಮಾರುಕಟ್ಟೆ ಎಂದೇ ಹೇಳ ಲಾ ಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರವು ಕೋವಿಡ್-19 ಸೋಂಕು ಹರಡುತ್ತಿದ್ದಂತೆ ಕೂಡಲೇ ಆ ಮಾರು ಕಟ್ಟೆಯನ್ನು ಮುಚ್ಚಿತ್ತು. ಈಗಲೂ ತಾತ್ಕಾಲಿಕ ನಿಷೇಧ ವನ್ನು ಮುಂದುವರಿಸಿದೆ. ಇಂಥ ಮಾರುಕಟ್ಟೆಯನ್ನು ಮುಚು cವು ದರಿಂದ ಭವಿಷ್ಯದಲ್ಲಿ ಸಾಮಾಜಿಕ ಆರೋಗ್ಯದ ಮೇಲೆ ಬೀರ ಬಹುದಾದ ದುಷ್ಪರಿಣಾಮವನ್ನು ತಡೆಯಬಹುದು ಎಂಬುದು ವಿಶ್ವಸಂಸ್ಥೆಯ ಲೆಕ್ಕಾಚಾರವಾಗಿದೆ.