Advertisement

ಕೊಲ್ಲೂರು ರಥೋತ್ಸವಕ್ಕೆ ಪುಷ್ಪ ರಾಶಿಯ ಸ್ವಾಗತದ ಮೆರುಗು

10:21 PM Mar 29, 2019 | Team Udayavani |

ಕೊಲ್ಲೂರು: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಮಾ. 28 ರಂದು ನಡೆದ ಸಂಭ್ರಮದ ರಥೋತ್ಸವದ ನಡುವೆ ರಥ ಸಂಚಾರ ದಾರಿಯಲ್ಲಿ ಉದ್ದಾನುದ್ದಕ್ಕೂ ಗುಲಾಬಿ ಹೂವಿನ ಎಸಳನ್ನು ನೆಲಕ್ಕೆ ಹಾಸಿ ಪುಷ್ಪ ರಾಶಿಯ ನಡುವೆ ಶ್ರೀ ದೇವಿಯ ಮೆರವಣಿಗೆ ನೆರೆದ ಭಕ್ತರನ್ನು ಪುಳಕಿತ ಗೊಳಿಸಿತು.

Advertisement

ಶ್ರೀ ದೇವಿಯ ಪರಮ ಭಕ್ತರಾಗಿರುವ ಉದ್ಯಮಿ ರಾಮಿ ರೆಡ್ಡಿ ಕಳೆದ 3 ವರುಷಗಳಿಂದ ರಥೋತ್ಸವದಂದು ಗುಲಾಬಿ ಹೂವಿನ ಸೇವೆ ನೀಡುತ್ತಿರುವ ಪರಂಪರೆ ನಡೆದು ಬಂದಿದೆ.

ದೇಗುಲದಿಂದ ಸುಮಾರು 1 ಕಿ.ಮೀ. ದೂರದ ವರೆಗೆ ಗುಲಾಬಿ ಹೂವಿನ ಎಸಳನ್ನು ಒಂದಿಷ್ಟೂ ವ್ಯರ್ಥವಾಗದೇ ಕ್ರಮಬದ್ಧವಾಗಿ ಜೋಡಿಸಿ ನೆಲಕ್ಕೆ ಹಾಸಿ ರಥೋತ್ಸವಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ ಶ್ರೀ ದೇವಿಯನ್ನು ಭಕ್ತಿಯಿಂದ ಧ್ಯಾನಿಸಿ ರಥ ಸಂಚಾರ ಚಾಲನೆ ನೀಡುವ ಪ್ರಕ್ರಿಯೆ ಹೊಸ ಆಯಾಮ ಸೃಷ್ಟಿಸಿವೆ. ಮಾ. 29 ರಂದು ರಾತ್ರಿ ದೇಗುಲದಲ್ಲಿ ಒಕುಳಿ ಹಾಗೂ ತೆಪ್ಪೋತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next