Advertisement

2022ರ ಹೊರಳು ನೋಟ; ಸಿಲಿಕಾನ್‌ ಸಿಟಿ ಜಲಾವೃತ

10:04 AM Dec 21, 2022 | Team Udayavani |

ಸಿಲಿಕಾನ್‌ ಸಿಟಿ ಜಲಾವೃತ
ಸೆ.4ರ ರಾತ್ರಿ ಸುರಿದ ಮಳೆಗೆ ರಾಜಧಾನಿ ಬೆಂಗಳೂರಿನ ಅರ್ಧ ಭಾಗ ಮುಳುಗಡೆಯಾಗಿತ್ತು. ನಗರದಾದ್ಯಂತ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ವಾಗಿತ್ತು. ಸುಮಾರು 60ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತಗೊಂಡಿದ್ದವು.  23 ವರ್ಷದ ಬಳಿಕ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಹೊಸ ದಾಖಲೆ ಸೃಷ್ಟಿಯಾಗಿತ್ತು.

Advertisement

ಸಚಿವ ಉಮೇಶ್‌ ಕತ್ತಿ ನಿಧನ
ರಾಜ್ಯದ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ್‌ ಕತ್ತಿ ಸೆ.6ರಂದು ರಾತ್ರಿ ನಿಧನ ಹೊಂದಿದ್ದರು. ಬೆಂಗಳೂರಿನ ನಿವಾಸದಲ್ಲಿದ್ದ ಅವರು ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದರು. ಕುಟುಂಬಸ್ಥರು ತತ್‌ಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲ ನೀಡದೆ ಅವರು ಸಾವನ್ನಪ್ಪಿದ್ದರು.

ಬಿಜೆಪಿ ಜನ ಸ್ಪಂದನ ಸಭೆ
ದೊಡ್ಡಬಳ್ಳಾಪರದಲ್ಲಿ ಸೆ.10ರಂದು ಜನಸ್ಪಂದನ ಸಮಾವೇಶವನ್ನು ನಡೆಸುವ ಮೂಲಕ ರಾಜ್ಯದ ಆಡಳಿತಾರೂಢ ಬಿಜೆಪಿ ಸರಕಾರ ತನ್ನ ಮೂರು ವರ್ಷಗಳ ಸಾಧನೆಯನ್ನು ಜನರ ಮುಂದೆ ತೆರೆ ದಿಟ್ಟಿತು. ಇದೇ ವೇಳೆ ರಾಜ್ಯ ಬಿಜೆಪಿಯ ಉನ್ನತ ನಾಯಕರೆಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿ ಕೊಳ್ಳುವ ಮೂಲಕ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ದರು.  ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪಾಲ್ಗೊಂ ಡಿದ್ದ  ಈ ಸಮಾವೇಶದಲ್ಲಿ  ಬಿಜೆಪಿ ಮುಂದಿನ ಚುನಾವಣೆಯಲ್ಲಿ  ಈ ಭಾಗದಲ್ಲಿ ಹೆಚ್ಚಿನ   ಸ್ಥಾನಗಳಲ್ಲಿ ಜಯಗಳಿಸುವ ಸಂಕಲ್ಪ ತೊಟ್ಟಿತು.

ಸಿಇಟಿ ಪರಿಷ್ಕೃತ ಫ‌ಲಿತಾಂಶ ಪ್ರಕಟ 
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೈಕೋರ್ಟ್‌ನ ಆದೇಶದಂತೆ ಅ.1ರಂದು ಸಿಇಟಿ-2022ರ ಪರಿ ಷ್ಕೃತ ಫ‌ಲಿತಾಂಶ ಪ್ರಕಟಿಸಿತು. ಇದರಿಂದಾಗಿ ಸಾವಿ ರಾರು ವಿದ್ಯಾರ್ಥಿಗಳ ರ್‍ಯಾಂಕ್‌ಗಳಲ್ಲಿ ಏರುಪೇರಾ ಯಿತು. ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪರಿ ಷ್ಕೃತ ರ್‍ಯಾಂಕ್‌ ಪಟ್ಟಿ ಸಂತಸ ತಂದರೆ ಪ್ರಸಕ್ತ ಸಾಲಿನ ಉನ್ನತ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಒಂದಿಷ್ಟು  ನಿರಾಸೆ ಮೂಡಿಸಿತು.

ಜೆಇಇ ಅಡ್ವಾನ್ಸ್‌ ಫ‌ಲಿತಾಂಶ: ಬೆಂಗಳೂರಿನ ಶಿಶಿರ್‌ ದೇಶಕ್ಕೇ ಮೊದಲಿಗ
ಜೆಇಇ-ಅಡ್ವಾನ್ಸ್‌ ಪ್ರವೇಶ ಪರೀಕ್ಷೆಯ ಫ‌ಲಿತಾಂಶ ಸೆ.11ರಂದು ಪ್ರಕಟವಾಗಿದ್ದು ಬೆಂಗಳೂರಿನ ಆರ್‌.ಕೆ. ಶಿಶಿರ್‌ ದೇಶಕ್ಕೆ  ಪ್ರಥಮ ಸ್ಥಾನಿಯಾಗಿದ್ದರು. ಅಷ್ಟೇ ಅಲ್ಲದೆ ಟಾಪ್‌ 10ರಲ್ಲಿ ರಾಜ್ಯದಲ್ಲಿ ವ್ಯಾಸಂಗ ಮಾಡಿದ ಇಬ್ಬರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದೇ ಮೊದಲ ಬಾರಿಗೆ ರಾಜ್ಯದ ವಿದ್ಯಾರ್ಥಿಯೊಬ್ಬರು ಜೆಇಇ-ಅಡ್ವಾನ್ಸ್‌$x ನಲ್ಲಿ ಮೊದಲ ಸ್ಥಾನ ಪಡೆದಿದ್ದರು.

Advertisement

 ಮತಾಂತರ ನಿಷೇಧ ಮಸೂದೆ ಮೇಲ್ಮನೆ ಅಸ್ತು
“ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣ ಮಸೂದೆ’ (ಮತಾಂತರ ನಿಷೇಧ)ಯು ವಿಪಕ್ಷ ಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ವಿರೋಧ, ಸಭಾತ್ಯಾಗದ ನಡುವೆ ಸೆ.15ರಂದು ಮೇಲ್ಮನೆಯಲ್ಲಿ ಅಂಗೀಕಾರಗೊಂಡಿತ್ತು. ಮತಾಂ ತರ ನಿಷೇಧ ಕಾಯ್ದೆಗೆ ವಿಪಕ್ಷಗಳೆರಡೂ ಒಕ್ಕೊರಲಿನ ವಿರೋಧ ವ್ಯಕ್ತಪಡಿಸಿದ್ದವು. ಆದರೆ  ಸರಕಾರ ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡಿತ್ತು.

ಬಿಜೆಪಿ ಜನಸಂಕಲ್ಪ ಯಾತ್ರೆ
2023ರ ವಿಧಾನಸಭೆ ಚುನಾವಣೆಗೆ ಪೂರ್ವ ಭಾವಿಯಾಗಿ ಬಿಜೆಪಿ ಹಮ್ಮಿಕೊಂಡಿದ್ದ ಜನಸಂಕಲ್ಪ ಯಾತ್ರೆಗೆ ಅ. 11ರಂದು ರಾಯಚೂರಿನಲ್ಲಿ ಚಾಲನೆ ನೀಡಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಜಂಟಿಯಾಗಿ ಯಾತ್ರೆಗೆ ಶ್ರೀಕಾರ ಹಾಡುವ ಮೂಲಕ ಚುನಾವಣ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದರು.

ಕರುನಾಡಿನ 67 ಕಣ್ಮಣಿಗಳಿಗೆ ರಾಜ್ಯೋತ್ಸವ ಕಿರೀಟ
2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅ.30ರಂದು ರಾಜ್ಯ ಸರಕಾರ ಪ್ರಕಟಿಸಿತ್ತು. ಇಸ್ರೋದ ಮಾಜಿ ನಿರ್ದೇಶಕ ಕೆ. ಶಿವನ್‌, ಸಾಹಿತಿ ಅ.ರಾ. ಮಿತ್ರ, ಅಂಗವಿಕಲ ಈಜುಪಟು ರಾಘವೇಂದ್ರ ಅಣೆÌàಕರ್‌, ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌ ಸಹಿತ 67 ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿ ದ್ದರು. ಇವರಲ್ಲಿ ಕರಾವಳಿ ಜಿಲ್ಲೆಗಳ ಹದಿನಾಲ್ಕು ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.

ಪ್ರಮುಖ ಘಟನೆಗಳು
ಸೆಪ್ಟಂಬರ್‌

ಸೆ. 1: ಚಿತ್ರದುರ್ಗದಲ್ಲಿ ಮುರುಘಾ ಶ್ರೀ ಬಂಧನ

ಸೆ. 6: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: 33 ಕಡೆ ಎನ್‌ಐಎ ದಾಳಿ: ಮಹತ್ವದ ದಾಖಲೆ ವಶ

ಸೆ. 7: ಹಿರಿಯ ಕಲಾವಿದರಿಗೆ 2 ಸಾವಿರ ರೂ. ಮಾಸಾಶನ: ಸರಕಾರದ ಆದೇಶ

ಸೆ. 11: ಅರಣ್ಯ ಹುತಾತ್ಮರಿಗೆ 50 ಲಕ್ಷರೂ. ಪರಿಹಾರ: ಸಿಎಂ ಘೋಷಣೆ

ಸೆ. 12: ತಟರಕ್ಷಕ ಪಡೆ ಕಮಾಂಡರ್‌ಆಗಿ ಕಾರವಾರದ ಮನೋಜ್‌ ನೇಮಕ

ಸೆ. 16: ಆರ್‌ಟಿಒ ಕಚೇರಿಗಳಲ್ಲಿ ಕೋಟ್ಯಂತರ ತೆರಿಗೆ ವಂಚನೆ: ಸಿಐಡಿ ತನಿಖೆಗೆ ಆದೇಶ

ಸೆ.17: ಕಲ್ಯಾಣ ಕರ್ನಾಟಕಕ್ಕೆ ಹೆಚ್ಚುವರಿ 2 ಸಾವಿರ ಕೋ.ರೂ.: ಸಿಎಂ ಘೋಷಣೆ

ಸೆ. 19: 11,133 ಪೌರ ಕಾರ್ಮಿಕರನ್ನು ಸರಕಾರಿ ನೌಕರರೆಂದು ಪರಿಗಣಿಸಲು ಸಂಪುಟ ತೀರ್ಮಾನ

ಸೆ. 21: ಬಿಜೆಪಿ-ಕಾಂಗ್ರೆಸ್‌ ನಡುವೆ ಪೋಸ್ಟರ್‌ ಸಮರ

ಸೆ. 22: ಕನ್ನಡ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದವರಿಗೆ ದಂಡ: ವಿವಿಧ ಜಾರಿ ಪ್ರಾಧಿಕಾರಗಳಿಗೆ ಅಧಿಕಾರ

ಸೆ. 23: ಮೈಸೂರು ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ ಹಾಡಲು ನಿರ್ಧಾರ; 2 ನಿಮಿಷ 30 ಸೆಕೆಂಡ್‌ಗಳ ಕಾಲಮಿತಿ ನಿಗದಿ

ಸೆ. 24: ರೈತರ ಆಸ್ತಿ ಪಾಸ್ತಿ ಜಪ್ತಿಗೆ ತಡೆ: ಸಿಎಂ ಘೋಷಣೆ

ಸೆ. 26: ಮೈಸೂರು ದಸರಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಲನೆ

ಸೆ. 27: ರಾಜ್ಯಾದ್ಯಂತ ಪಿಎಫ್ಐ, ಎಸ್‌ಡಿಪಿಐ ಗುರಿಯಾಗಿಸಿ ದಾಳಿ: 100ಕ್ಕೂ ಹೆಚ್ಚು ಮಂದಿ ವಶಕ್ಕೆ

ಸೆ. 29: ರಾಜ್ಯಾದ್ಯಂತ 44 ಕಡೆ ಪಿಎಫ್ಐ ಕಚೇರಿಗೆ ಬೀಗ; ನಿಷೇಧ ಬೆನ್ನಲ್ಲೇ ಕಠಿನ ಕ್ರಮ

ಅಕ್ಟೋಬರ್‌
ಅ. 1: ಕಾಶ್ಮೀರದ ದೇಗುಲಕ್ಕೆ ಶೃಂಗೇರಿಯಿಂದ ಶಾರದಾ ವಿಗ್ರಹ ಹಸ್ತಾಂತರ

ಅ. 3: ಮುಸ್ಲಿಂ ಸಮುದಾಯದ ಯುವಕರ ಸೆಳೆಯಲು ಪಿಎಫ್ಐ, ಸಿಎಫ್ಐನಿಂದಪ್ರ ಚೋದನಕಾರಿ ಪೋಸ್ಟ್‌ ಬಳಕೆ ಪ್ರಕರಣ ಬಯಲಿಗೆ

ಅ. 5: ಮೈಸೂರು ದಸರೆಗೆ ವೈಭವದ ತೆರೆ

ಅ.6: ಬೆಂಗಳೂರಿನ “ಶ್ರೀ ಕಂಠೀರವ ಸ್ಟೇಡಿಯಂ’ನಲ್ಲಿ ಪ್ರೊ ಕಬಡ್ಡಿ 9ನೇ ಸೀಸನ್‌ ಆರಂಭ.

ಅ.7: ಮೀಸಲಾತಿ: ನ್ಯಾ| ದಾಸ್‌ ಸಮಿತಿ ವರದಿ ಜಾರಿಗೆ ಒಪ್ಪಿಗೆ

ಅ.11: ಕರ್ನಾಟಕ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ| ಪ್ರಸನ್ನ ಬಾಲಚಂದ್ರ ವರಾಲೆ ನೇಮಕ

ಅ.14: ಹಸುಗಳ ಚರ್ಮಗಂಟು ರೋಗ ನಿವಾರಣೆ 13 ಕೋ.ರೂ. ಬಿಡುಗಡೆ; ಸಿಎಂ ಘೋಷಣೆ

ಅ.15: ಗಡಿನಾಡು ಬಳ್ಳಾರಿಯಲ್ಲಿ ಕಾಂಗ್ರೆಸ್‌ ಬೃಹತ್‌ ಸಮಾವೇಶ

ರಾಯಚೂರು: 30 ತಾಲೂಕುಗಳಲ್ಲಿ ಆಡಳಿತ ಭವನ; ಸಚಿವ ಆರ್‌.ಅಶೋಕ್‌

ಅ.16: ಬಾಣಾವರದಲ್ಲಿ ಸರಣಿ ಅಪಘಾತ; ಒಂದೇ ಕುಟುಂಬದ 9 ಮಂದಿ ಸಾವು

ಅ.19: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ

ಅ.20: ಕಾರ್ಯಾದೇಶ ಮೂಲಕ ಎಸ್ಸಿ , ಎಸ್ಟಿ ಮೀಸಲು ಹೆಚ್ಚಳಕ್ಕೆ ಸಂಪುಟ ಅಸ್ತು

ಅ.28: ಕೋಟಿ ಕಂಠಗಳಲ್ಲಿ ಮೊಳಗಿದ ಕನ್ನಡ ಡಿಂಡಿಮ

ಅ.29: ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್‌ ರಹಿತ ದಿನ: ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next