ಚೆನ್ನೈ: ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತೀಯ ಮೂಲದ ವಿನಿ ರಾಮನ್ ಅವರನ್ನು ವರಿಸಲಿದ್ದಾರೆ.
ಮಾ. 27 ರಂದು ತಮಿಳು ಸಂಪ್ರದಾಯದಂತೆ ಇಬ್ಬರೂ ಹಸೆಮಣೆ ಏರಲಿದ್ದಾರೆ. ಇದೀಗ ಈ ಜೋಡಿಯ ಮದುವೆ ಆಮಂತ್ರಣ ಪತ್ರ ವೈರಲ್ ಆಗಿದ್ದು ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಹೌದು ತಮಿಳುನಾಡು ಮೂಲದವರಾಗಿರುವ ವಿನಿ ರಾಮನ್ ಅವರು ತಮ್ಮ ವಿವಾಹ ಆಮಂತ್ರಣ ಪತ್ರವನ್ನು ತಮಿಳಿನಲ್ಲೇ ಮುದ್ರಿಸಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಕೇಳಿದವರಿಗೆ ಖಡಕ್ ಉತ್ತರ ನೀಡಿದ ನಾಯಕ ರೋಹಿತ್ ಶರ್ಮಾ
ಈ ಆಮಂತ್ರಣ ಪತ್ರದ ಫೋಟೋವನ್ನು ಕಸ್ತೂರಿ ಶಂಕರ್ ಎಂಬವರು ಟ್ವೀಟ್ ಮಾಡಿದ್ದು “ವಿನಿ ರಾಮನ್ ಅವರನ್ನು ಮ್ಯಾಕ್ಸ್‌ವೆಲ್ ವಿವಾಹವಾಗುತ್ತಿದ್ದಾರೆ. ಈ ಜೋಡಿಯ ಚೆಂದದ ತಮಿಳು ವಿವಾಹ ಪತ್ರಿಕೆ. ತಮಿಳು ಬ್ರಾಹ್ಮಣರ ಸಾಂಪ್ರದಾಯದಂತೆ ಇವರು ವಿವಾಹವಾಗಲಿದ್ದಾರೆ. ಅಭಿನಂದನೆ ಗ್ಲೆನ್ ಮತ್ತು ವಿನಿ’ ಎಂದು ಕಸ್ತೂರಿ ಶಂಕರ್ ಟ್ವೀಟ್ ಮಾಡಿದ್ದಾರೆ.