Advertisement

ಗಾಳಿಯಲ್ಲಿ ನಿಲ್ಲುವ ಗ್ಲಾಸುಗಳು

10:09 AM Jan 24, 2020 | mahesh |

ಚಮತ್ಕಾರ ಇಲ್ಲದೆ ಇದ್ದರೆ ಜಾದು ಮಜ ಇರೋಲ್ಲ. ಕುತೂಹಲ ಇರಲೇಬೇಕು.ನೋಡುಗ ಕಣ್ಣನ್ನು ಆಗಾಗ ದಾರಿ ತಪ್ಪಿಸುತ್ತಲೇ ಇರಬೇಕು. ಅದಕ್ಕೆ ನಾನಾ ತಂತ್ರಗಳನ್ನು ಹೆಣೆಯ ಬೇಕು. ಅದರಲ್ಲಿ ಈ ಗ್ಲಾಸುಗಳ ಜಾದೂ ಇದೆಯಲ್ಲ, ಅದು ಪ್ರಮುಖ ಬತ್ತಳಿಕೆ. ಜಾದೂಗಾರ ಒಂದು ಪುಸ್ತಕವನ್ನು ಕರವಸ್ತ್ರದಿಂದ ಮುಚ್ಚುತ್ತಾನೆ. ಅದರ ಮೇಲೆ ಎರಡು ಗ್ಲಾಸುಗಳನ್ನು ತಲೆಕೆಳಗಾಗಿ ಇಡುತ್ತಾನೆ. ಪುಸ್ತಕವನ್ನು ಕರವಸ್ತ್ರ ಹಾಗೂ ಗ್ಲಾಸುಗಳೊಂದಿಗೆ ಉಲ್ಟಾ ಮಾಡುತ್ತಾನೆ. ನೋಡಿದರೆ, ಅರೆ, ಗ್ಲಾಸುಗಳು ಕೆಳಗೆ ಬೀಳುವುದೇ ಇಲ್ಲ !!

Advertisement

ಹೀಗಾದಾಗ, ಯಾರಿಗೆ ತಾನೇ ಆಶ್ಚರ್ಯವಾಗೋಲ್ಲ?
ಇದೆಲ್ಲಾ ಹೇಗೆ ಸಾಧ್ಯ? ಈ ರಹಸ್ಯದ ಬಗ್ಗೆ ಇಲ್ಲಿ ಹೇಳ್ತೀನಿ. ಒಂದು ದಾರದಿಂದ ಎರಡು ಮಣಿಗಳನ್ನು ಕಟ್ಟಬೇಕು. ಇವುಗಳ ನಡುವೆ ನಿಮ್ಮ ಹೆಬ್ಬೆಟ್ಟು ಸರಿಯಾಗಿ ಕೂರುವಂತಿರಬೇಕು. ಮಣಿಗಳನ್ನು ಕರವಸ್ತ್ರದ ಅಂಚಿನಲ್ಲಿ ಮಧ್ಯಕ್ಕೆ ಬರುವಂತೆ ತೂರಿಸಿರಬೇಕು. (ಮೊದಲನೇ ಚಿತ್ರದಲ್ಲಿ ಕರವಸ್ತ್ರದ ಕೆಳಭಾಗದಲ್ಲಿ ಮಣಿಗಳನ್ನು ಗಮನಿಸಿ). ನಂತರ ಕರವಸ್ತ್ರವನ್ನು ಪುಸ್ತಕದ ಸುತ್ತ ಸುತ್ತಿ, ಮಣಿಗಳು ಪುಸ್ತಕದ ಮೇಲ್ಭಾಗಕ್ಕೆ ಬರುವಂತೆ ಖಚಿತಪಡಿಸಿಕೊಳ್ಳಿ. ನಂತರ ಗ್ಲಾಸಿನ ಅಂಚುಗಳನ್ನು ನಿಮ್ಮ ಹೆಬ್ಬೆಟ್ಟು ಮತ್ತು ಮಣಿಯ ನಡುವೆ ಬರುವಂತೆ ಇಟ್ಟರೆ ಅವು ಎರಡರ ನಡುವೆ ಸಿಕ್ಕಿಕೊಳ್ಳುತ್ತದೆ. ಈಗ ನೀವು ಪುಸ್ತಕವನ್ನು ಉಲ್ಟಾ ಮಾಡಿದರೆ ಗ್ಲಾಸುಗಳು ಕೆಳಗೆ ಬೀಳುವುದಿಲ್ಲ (ಎರಡನೇ ಚಿತ್ರವನ್ನು ಗಮನಿಸಿ). ಇದಕ್ಕೆ ಹಗುರವಾದ ಪ್ಲಾಸ್ಟಿಕ್‌ ಗ್ಲಾಸುಗಳನ್ನು ಉಪಯೋಗಿಸಿ.

ಇಲ್ಲೊಂದು ಎಚ್ಚರಿಕೆ ಇದೆ. ಪಾಲಿಸದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಏನೆಂದರೆ, ಹೆಬ್ಬೆರಳನ್ನು ಪುಸ್ತಕಕ್ಕೆ ಒತ್ತಿ ಹಿಡಿದುಕೊಳ್ಳುವುದು ಕಡ್ಡಾಯ. ಸಡಿಲ ಬಿಟ್ಟಲ್ಲಿ ಗ್ಲಾಸುಗಳು ಕೆಳಗೆ ಬೀಳುತ್ತವೆ.

ಉದಯ್‌ ಜಾದೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next