ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಭೇಟಿ ಕುರಿತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಚಳ್ಳಕೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡಕ, ಟೋಪಿ, ಸಫಾರಿ ಹಾಕಿಕೊಂಡಿದ್ದಾರೆ.ಸುಪಾರಿನೋ ಸಫಾರಿನೋ, ಪಾಪ ಹುಲಿ ಬೇಟೆಯಾಡಲು ಹೋಗಿದ್ದಾರೆ ಎಂದು ಮೋದಿ ವೇಷಭೂಷಣದ ಬಗ್ಗೆ ವ್ಯಂಗ್ಯವಾಡಿ ಬಳಿಕ ಹುಲಿ ನೊಡೋಕೆ, ವೀಕ್ಷಣೆಗೆ ಹೋಗಿದ್ದಾರೆಂದರು.
ಹುಲಿ, ಚಿರತೆ ದಾಳಿಗೆ ಬಲಿಯಾದ ಕುಟುಂಬದ ಭೇಟಿ ಇಲ್ಲ.ಪ್ರಧಾನಿ ಮೋದಿ ಹುಲಿ ಸಂರಕ್ಷಣೆ ಮಾಡಲು ಬಂದಿದ್ದಾರೆ.ವನ್ಯ ಜೀವಿಗಳನ್ನೂ ನಾವು ಕಾಪಾಡಬೇಕು. ವನ್ಯಜೀವಿಗಳ ಮೇಲಿನ ಕಾಳಜಿ ಜನರ ಮೇಲೆಕಿಲ್ಲ.ವನ್ಯಜೀವಿ ದಾಳಿಗೊಳಗಾದವರ ಬಗ್ಗೆ ಸಿಎಂ, ಪಿಎಂ ಅನುಕಂಪದ ಮಾತಾಡಿಲ್ಲ. ಉತ್ತರ ಕರ್ನಾಟಕದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟವಿದೆ. ಈ ಬಗ್ಗೆ ಈವರೆಗೆ ಪ್ರಧಾನಿ ಚರ್ಚೆ ಮಾಡಿಲ್ಲ.ಹುಲಿ ಸಂರಕ್ಷಣೆ, ಅಭಯಾರಣ್ಯ ವಿಸ್ತರಣೆ ಬಗ್ಗೆ ಹೇಳ್ತಾರೆ ಎಂದರು.
ಪಟ್ಟಣವೇ ನೋಡದೆ ಪ್ರಾಣಿಗಳ ಜತೆಯೇ ಅನೇಕರ ಬದುಕು ಇದೆ. ಅಂಥವರನ್ನ ಒಕ್ಕಲೆಬ್ಬಿಸಿದರೆ ಅವರೆಲ್ಲ ಎಲ್ಲಿಗೆ ಹೋಗಬೇಕು.ವನ್ಯಜೀವಿ ಸಂರಕ್ಷಕ ಎಂಬಂತೆ ಮಾನವ ಸಂರಕ್ಷಕ ಆಗಬೇಕಲ್ಲವೇ? ಧರ್ಮದ ಹೆಸರಲ್ಲಿ ಅಮಾಯಕರ ಬಲಿ ತೆಗೆದುಕೊಂಡಿದ್ದಾರೆ. ಈಗ ರಾಜ್ಯ, ದೇಶ ಕಟ್ಟುತ್ತೇವೆ ಅನ್ನುತ್ತಿದ್ದಾರೆ ಎಂದು ಕಿಡಿ ಕಾರಿದರು.
ಮನುಷ್ಯನ ಜೀವಕ್ಕೆ ಇವರ ಬಳಿ ಬೆಲೆ ಇಲ್ಲ, ಪ್ರಾಣಿಗೆ ಬೆಲೆ ಇದೆಯಲ್ವವೇ? ಎರಡೂ ಇರಬೇಕು, ಅದು ಇವರಲ್ಲಿ ನನಗೆ ಕಾಣುತ್ತಿಲ್ಲ ಎಂದರು.
ಕಾಂಗ್ರೆಸ್, ಬಿಜೆಪಿ ನಡುವೆ ಒಳ ಒಪ್ಪಂದ ಇದೆ. ಶಿಕಾರಿಪುರದ ಕಾಂಗ್ರೆಸ್ ಕಾರ್ಯಕರ್ತರೇ ಹೇಳಿದ್ದಾರೆ ಎಂದರು.
ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ನೀಡುತ್ತೇವೆ.ಕುಟುಂಬದವರು ಯಾರೂ ಸ್ಪರ್ದೆ ಮಾಡುವುದಿಲ್ಲ.ಸಮರ್ಥ ಕಾರ್ಯಕರ್ತರಿರುವಾಗ ನಾವೇಕೆ ತಲೆಕೊಡಬೇಕು.ಗೊಂದಲವನ್ನು ಸರಿ ಮಾಡುತ್ತೇವೆ ಎಂದರು.