ಸಕಲೇಶಪುರ: ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಸದ್ಯದಲ್ಲೆ ವಿಸ್ಟಾಡೋಮ್ (ಗಾಜಿನ ಚಾವಣಿ) ಅಳವಡಿಸಲಾಗುವುದು ಎಂಬಮಾಹಿತಿ ಕೇಳಿ ಬಂದಿದ್ದು, ಇದು ರೈಲುಪ್ರಯಾಣಿಕರಿಗೆ, ಪ್ರಕೃತಿ ಪ್ರಿಯರಿಗೆ ಸಂತೋಷದ ಸುದ್ದಿಯಾಗಿದೆ.
ಬೆಂಗಳೂರು-ಮಂಗಳೂರು ನಡುವೆಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರಪಾಲಿಗೆ ಸ್ವರ್ಗ. ಕಳೆದ ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಚಾವಣಿ, ಕಿಟಕಿಗಳನ್ನು ಅಳವಡಿಸುವಂತೆ ಸಾಕಷ್ಟು ಮನವಿ ಪ್ರಕೃತಿ ಪ್ರಿಯರಿಂದ ಕೇಳಿ ಬರುತ್ತಿತ್ತು.ಹಲವು ಮಂದಿ ಶಿರಾಡಿ ಘಾಟಿಯ ಸೌಂದರ್ಯ ಸವಿಯಲೆಂದೇ ಬೆಂಗಳೂರು- ಮಂಗಳೂರು ನಡುವಿನ ರೈಲಿನಲ್ಲಿ ಸಂಚರಿಸುತ್ತಿದ್ದರು. ಆದರೆ, ರೈಲಿನ ಕಿಟಕಿಗಳು ಚಿಕ್ಕದಾಗಿರುವುದರಿಂದ
ಪೃಕೃತಿಯನ್ನು ಪೂರ್ಣ ಪ್ರಮಾಣದಲ್ಲಿ ನೋಡಲು ಸಿಗುತ್ತಿರಲಿಲ್ಲ. ಇದನ್ನು ಮನಗಂಡ ರೈಲ್ವೆ ಇಲಾಖೆ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಸದ್ಯದಲ್ಲೇ ವಿಸ್ಟಾಡೋಮ್ (ಗಾಜಿನ ಚಾವಣಿ) ಅಳವಡಿಸಲು ನಿರ್ಧರಿಸಿದೆ. ಈ ಕುರಿತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸದಸ್ಯ ಪಿ.ಸಿ.ಮೋಹನ್ ಟ್ವೀಟ್‌ಮೂಲಕ ಮಾಹಿತಿ ನೀಡಿದ್ದಾರೆ.ಪ್ರಾಕೃತಿಕ ಸೌಂದರ್ಯ: ಪಶ್ಚಿಮ ಘಟ್ಟವನ್ನುಸೀಳಿಕೊಂಡು ಹೋಗುವ ಈ ರೈಲುಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ. ಈ ಬೋಗಿ ಅಳವಡಿಸಿದ್ದೇ ಆದಲ್ಲಿ, ಸಕಲೇಶಪುರ ಹಾಗೂ ಸುಬ್ರಮಣ್ಯ ರೋಡ್ ನಿಲ್ದಾಣದವರೆಗಿನ 55 ಕಿ.ಮೀ. ಉದ್ದದ ಹಚ್ಚ ಹಸಿರಿನಿಂದ ಕೂಡಿದ ಅರಣ್ಯ, ಜಲಪಾತ, ಸುರಂಗ, ಸೇತುವೆಗಳ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು.
ಸೌಲಭ್ಯಗಳು: ವಿಸ್ಟಾಡೋಮ್ ಕೋಚ್‌ಅನ್ನು ಹಾಲಿ ಇರುವ ಎಂಜಿನ್‌ಅಳವಡಿಸಲಾಗುತ್ತದೆ. ಒಂದುಬೋಗಿಯಲ್ಲಿ 40 ಒರಗಿಕೊಳ್ಳುವ ಆಸನಗಳಿದ್ದು, ಇವುಗಳು 360 ಡಿಗ್ರಿಯಲ್ಲಿ ಸುತ್ತುತ್ತವೆ. ಇದರಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ ಮೈಕ್ರೋ ಓವೆನ್, ಸಣ್ಣ ಫ್ರಿಡ್ಜ್, ಎ.ಸಿ ಸೌಲಭ್ಯ ಇರಲಿದೆ ಎಂದು ಹೇಳಲಾಗುತ್ತಿದೆ.
ವಿಸ್ಟಾಡೋಮ್ ಬೋಗಿಗಳನ್ನು ಎಲ್ಲಾ ರೈಲುಗಳಿಗೆಅಳವಡಿಸಲಾಗುತ್ತದೆಯೇ ಅಥವಾ ಒಂದೇ ರೈಲಿಗೆ ಅಳವಡಿಸಲಾಗುತ್ತದೆಯೇ ಎಂಬುದರ ಕುರಿತುಮಾಹಿತಿ ಇಲ್ಲ. ಕೇವಲ ಒಂದೆರಡು ಬೋಗಿಗಳನ್ನುವಿಸ್ಟಾಡೋಮ್ ಮಾಡುವ ಬದಲು ಸಂಪೂರ್ಣರೈಲನ್ನು ವಿಸ್ಟಾಡೋಮ್ ಮಾಡಿದರೆ ಪ್ರಕೃತಿಪ್ರಿಯರಿಗೆ, ಕರಾವಳಿಗೆ ಪ್ರವಾಸಕ್ಕೆ ಹೋಗುವವರುರೈಲಿನಲ್ಲೇ ಪ್ರಯಾಣಿಸುವುದರಲ್ಲಿ ಯಾವುದೇಅನುಮಾನವಿಲ್ಲ. ಈ ಮಾರ್ಗದಲ್ಲಿ ಹಗಲುವೇಳೆಯಲ್ಲಿ ಸಂಚರಿಸುವ ಎಲ್ಲಾ ರೈಲುಗಳನ್ನುವಿಸ್ಟಾಡೋಮ್ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.
ಈ ರೈಲಿನ ಜೊತೆಗೆ ಊಟಿ, ಕಣ್ಣೂರು ನಡುವೆ ಸಂಚರಿಸುವ ರೈಲಿನಂತೆ ಇಲ್ಲೂ ಸಕಲೇಶಪುರ -ಸುಬ್ರಹ್ಮಣ್ಯ, ಸುಬ್ರಹ್ಮಣ್ಯ – ಸಕಲೇಶಪುರದ ನಡುವೆ ಸಂಚಾರ ಆರಂಭಿಸಿದ್ರೆ ಪ್ರವಾಸೋದ್ಯಮದ ಚೇತರಿಕೆಗೆ ಸಹಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಗೋಪಾಲಯ್ಯ, ಸಂಸದ ಪ್ರಜ್ವಲ್ ರೇವಣ್ಣ ಇತ್ತ ಗಮನ ಹರಿಸಬೇಕಾಗಿದೆ.
ಸುಧೀರ್ ಎಸ್.ಎಲ್.