Advertisement

ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಜಿ.ಎಲ್.ಹೆಗಡೆ ನೇಮಕ

07:24 PM Jan 12, 2022 | Team Udayavani |

ಬೆಂಗಳೂರು :ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕರನ್ನಾಗಿ ಹಿರಿಯ ಅರ್ಥಧಾರಿ, ಸಾಹಿತಿ ಡಾ.ಜಿ.ಎಲ್ . ಹೆಗಡೆ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

Advertisement

ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಜಿ.ಎಲ್.ಹೆಗಡೆ ಯಕ್ಷಗಾನ ಸಂಶೋಧನಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಯಕ್ಷಗಾನ ವರ್ಣವೈಭವ, ಶೇಣಿ ರಾಮಾಯಣ, ಶೇಣಿ ಭಾರತ, ನಮ್ಮ ಚಿಟ್ಟಾಣಿ ಸೇರಿದಂತೆ ಹಲವು ಪುಸ್ತಕಗಳ ಲೇಖಕರಾಗಿರುವ ಡಾ.ಹೆಗಡೆ ಆಟ ಹಾಗೂ ಕೂಟ ಎರಡರಲ್ಲೂ ಸೈ ಎನಿಸಿಕೊಂಡವರು.

ಯಕ್ಷಗಾನ ವೇಷಧಾರಿಯಾಗಷ್ಟೇ ಅಲ್ಲ, ದಕ್ಷಿಣೋತ್ತರ ಕನ್ನಡದ ಪ್ರಸಿದ್ಧ ಯಕ್ಷಗಾನ ತಾಳಮದ್ದಳೆ ಅರ್ಥಧಾರಿಯಾಗಿಯೂ ಹೆಸರು ಪಡೆದಿದ್ದಾರೆ.ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎ.ಹೆಗಡೆ ನಿಧನ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಜಿ.ಎಲ್.ಹೆಗಡೆ ಅವರನ್ನು ನೇಮಕ ಮಾಡಿ ಕನ್ನಡ ಹಾಗೂ ಸಂಸ್ಕ್ರತಿ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next