Advertisement

Canada ರಾಜಕೀಯ ಬಲವಂತದಿಂದ ಉಗ್ರರಿಗೆ ಜಾಗ ನೀಡಿದೆ: ಯುಸ್ ನಲ್ಲಿ ಎಸ್ ಜೈಶಂಕರ್

09:06 PM Sep 29, 2023 | Team Udayavani |

ವಾಷಿಂಗ್ಟನ್: ಹಿಂಸಾಚಾರವನ್ನು ಬಹಿರಂಗವಾಗಿ ಪ್ರತಿಪಾದಿಸುವ ಉಗ್ರಗಾಮಿಗಳ ಬಗ್ಗೆ ಕೆನಡಾವು ಅನುಮತಿಸುವ ಮನೋಭಾವ ಹೊಂದಿದೆ ಮತ್ತು ಅಂತಹವರಿಗೆ ದೇಶದಲ್ಲಿ ಕಾರ್ಯಾಚರಣೆಯ ಸ್ಥಳ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಶುಕ್ರವಾರ ಆಕ್ರೋಶ ಹೊರ ಹಾಕಿದ್ದಾರೆ.

Advertisement

ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, “ಭಯೋತ್ಪಾದಕರ ಹಿಂಸಾಚಾರವನ್ನು ಬಹಿರಂಗವಾಗಿ ಪ್ರತಿಪಾದಿಸುವ ಜನರ ಬಗ್ಗೆ ಕೆನಡಾದ ಅನುಮತಿಯ ಧೋರಣೆ ಇದೆ ಎಂದು ನಾವು ಪರಿಗಣಿಸುತ್ತೇವೆ. ರಾಜಕೀಯದ ಬಲವಂತದ ಕಾರಣ ಅವರಿಗೆ ಕೆನಡಾದಲ್ಲಿ ಕಾರ್ಯಾಚರಣೆಯ ಸ್ಥಳವನ್ನು ನೀಡಲಾಗಿದೆ” ಎಂದು ಹೇಳಿದ್ದಾರೆ.

ಕೆನಡಾವು ಜನರ ಕಳ್ಳಸಾಗಣೆ, ಪ್ರತ್ಯೇಕತಾವಾದ, ಹಿಂಸೆ ಮತ್ತು ಭಯೋತ್ಪಾದನೆಯೊಂದಿಗೆ ಬೆರೆತಿರುವ ದೇಶವಾಗಿದೆ. ಇದು ಸಮಸ್ಯೆಗಳು ಮತ್ತು ಅಲ್ಲಿ ಕಾರ್ಯಾಚರಣಾ ಸ್ಥಳವನ್ನು ಕಂಡುಕೊಂಡ ಜನರ ವಿಷಕಾರಿ ಸಂಯೋಜನೆಯಾಗಿದೆ. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳಿಗೆ ಮುಂಚೆಯೇ ಕೆನಡಾದೊಂದಿಗೆ ಭಾರತದ ಉದ್ವೇಗ ಈ ಸಮಸ್ಯೆಗಳಿಂದ ಉದ್ಭವಿಸಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕರು ರಾಯಭಾರ ಕಚೇರಿ ಅಥವಾ ದೂತಾವಾಸ ಕಚೇರಿಗಳಲ್ಲಿ ಅಸುರಕ್ಷಿತರಾಗಿದ್ದು, ಅವರು ಸಾರ್ವಜನಿಕವಾಗಿ ಭಯಭೀತರಾಗಿದ್ದಾರೆ.ಕೆನಡಾದಲ್ಲಿ ವೀಸಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ನನ್ನನ್ನು ಒತ್ತಾಯಿಸಿತು” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next