ಆನೇಕಲ್: ಧರ್ಮ, ಸಂಸ್ಕೃತಿ ಜೊತೆಗೆ ಮೌಲ್ಯಯುತ ಶಿಕ್ಷಣ ನೀಡುವಂಥ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕಿದೆ ಎಂದು ಪುರಸಭಾ ಅಧ್ಯಕ್ಷ ಪಿ.ಶಂಕರ್ ಕುಮಾರ್ ತಿಳಿದರು. ಪಟ್ಟಣದ ಗಜಶಿಲಾ ಗಂಗೋತ್ರಿ ವಿದ್ಯಾಶಾಲೆ 11ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸರಸ್ವತಿ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರುಕುಲ ಪದ್ಧತಿ ಮಾದರಿ: ದೊಡ್ಡ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಮಕ್ಕಳಿಗೆ ಸರಿಯಾದ ಪಾಠ ಪ್ರವಚನ ನೀಡದೆ ಇದ್ದರೆ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಿಲ್ಲ. ಗಜಶಿಲಾ ಗಂಗೋತ್ರಿ ಶಾಲೆಯಲ್ಲಿ ಮಕ್ಕಳಿಗೆ ಶಿವಶಂಕರಯ್ಯ ನವರು ಗುರುಕುಲದ ಪದ್ಧತಿಯಲ್ಲಿ ಪಾಠ ಕೊಡುತ್ತಿದ್ದು ನಮ್ಮ ಧರ್ಮ ಸಂಸ್ಕೃತಿ ಬೆಳೆಸುತ್ತಿರುವುದು ಪಟ್ಟಣಕ್ಕೆ ಮಾದರಿ ಎಂದು ಹೇಳಿದರು.
ಶ್ರದ್ಧೆ, ಏಕಾಗ್ರತೆ ಮೈಗೂಡಿಸಿಕೊಳ್ಳಿ: ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಮುಖ್ಯ ಭಾಷಣಕಾರ ಎ.ಪಿ.ಗುಂಡಪ್ಪಮಾತನಾಡಿ, ಕುಟುಂಬ ಹಾಗೂ ಶಾಲೆ ನಡುವೆ ಹೊಂದಾಣಿಕೆ ಇದ್ದರೆ ಮಾತ್ರ ಮಗು ಕಲಿಕೆಗೆ ಪೂರಕವಾತಾವರಣ ಸೃಷ್ಟಿಯಾಗಲು ಸಹಕಾರಿ. ಭಕ್ತಿ, ಶ್ರದ್ಧೆ, ಏಕಾಗ್ರತೆಯನ್ನು ವಿದ್ಯಾರ್ಥಿ ಜೀವನದಲ್ಲಿ ಮೈಗೂಡಿಸಿಕೊಂಡಾಗ ಕಲಿಕೆಯಾಗುತ್ತದೆ.
ಪ್ರಸ್ತುತ ದಿನಗಳಲ್ಲಿ ಮಕ್ಕಳ ಮೇಲೆ ಪುಸ್ತಕ ಹೊರೆ ಹೊರುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ನೀಡುವ ಶಿಕ್ಷಣದ ಜೊತೆಯಲ್ಲಿ ಮೌಲ್ಯಯುತ ಶಿಕ್ಷಣ ಕಡೆ ಆದ್ಯತೆ ನೀಡಿದಾಗ ಮಾತ್ರ ಉತ್ತಮ ಪ್ರಜೆಯನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಶಿವಶಂಕರಯ್ಯ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಪ್ರಜಾ ವಿಮೋಚನಾ ಚಳವಳಿ-ಸ್ವಾಭಿಮಾನ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಕೆ. ಚಂದ್ರಶೇಖರ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹದೇವಯ್ಯ, ಶಿಕ್ಷಕರಾದ ವೀರಭದ್ರಪ್ಪ, ರಾಘವೇಂದ್ರ, ಸಿಪಿಎಂ (ಐ) ಮಾದೇಶ್, ನಿವೃತ್ತ ಶಿಕ್ಷಕರಾದ ಚಂದ್ರಶೇಖರ್, ಕೆ.ಮಾದಯ್ಯ, ಸಂಸ್ಥೆ ಅಧ್ಯಕ್ಷ ವಿಶ್ವನಾಥ್, ಸ್ಫೂರ್ತಿ ಕಾಲೇಜಿನ ಕಾರ್ಯದರ್ಶಿ ವಿನಯ್,ನವೋದಯ ಇಟೆಕ್ ಶಾಲೆ ಸಂಸ್ಥಾಪಕ ಪ್ರಹ್ಲಾದ್, ಕ್ರೇಂಬಿಡ್ಜ್ ಶಾಲೆ ಕಾಳೀನಾಥ್, ಶಾಂತಿನಿಕೇತನ ಶಾಲೆ ಕಾರ್ಯದರ್ಶಿ ಎ.ವಿ.ರಂಗರಾಜು, ಸಂತ ಜೋಸೆಫ್ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ, ಗೆರಟಿಗನ ಬೆಲೆ ಭದ್ರಯ್ಯ, ರೇಣುಕಾರಾಧ್ಯ ಇದ್ದರು. ಇದೇ ವೇಳೆ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು ರಂಜಿಸಿದರು.
ಬಹುಮಾನ ವಿತರಣೆ: ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸ್ಫೂರ್ತಿ
ಕಾಲೇಜಿನ ಕಾರ್ಯದರ್ಶಿ ವಿನಯ್, ನವೋದಯ ಇಟೆಕ್ ಶಾಲೆ ಸಂಸ್ಥಾಪಕ ಪ್ರಹ್ಲಾದ್, ನಿವೃತ್ತ ಮುಖ್ಯಶಿಕ್ಷಕರಾದ ಕೆ.
ಮಾದಯ್ಯ, ಎಂ. ಚಂದ್ರಶೇಖರ್, ಕ್ರೇಂಬಿಡ್ಜ್ ಶಾಲೆ ಕಾಳೀನಾಥ್, ಬಹುಮಾನ ವಿತರಿಸಿದರು. ಮಿಮಿಕ್ರಿ ಕಲಾವಿದ ಶಂಕರ್, ಚುಟುಕು ಶಂಕರ್ ಕಾರ್ಯಕ್ರಮ ನಡೆಸಿಕೊಟ್ಟರು.