Advertisement

‘ತಂಬಾಕು ಸೇವನೆ ತ್ಯಜಿಸಿ, ಉತ್ತಮ ಬದುಕು ಕಟ್ಟಿಕೊಳ್ಳಿ’

12:57 PM Jun 02, 2019 | Team Udayavani |

ಮಡಿಕೇರಿ : ತಂಬಾಕು ಸೇವನೆ ತ್ಯಜಿಸಿ ಉತ್ತಮ ಬದುಕನ್ನು ಕಟ್ಟಿಕೊ ಳ್ಳುವಂತೆ ಜಿಲ್ಲಾ ಪ್ರಧಾನ ಮತ್ತು ಸೆಷನ್‌ ನ್ಯಾಯಾಧೀಶರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ಕರೆ ನೀಡಿದ್ದಾರೆ.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಜನ ಜಾಗೃತಿ ಜಾಥವು ನಗರದಲ್ಲಿ ಶುಕ್ರವಾರ ನಡೆಯಿತು.

ಜಾಥಾಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು ತಂಬಾಕು ಸೇವ ನೆಯಿಂದ ಕ್ಯಾನ್ಸರ್‌ ಸೇರಿದಂತೆ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಆದ್ದ ರಿಂದ ತಂಬಾಕಿನಿಂದ ದೂರವಿರಬೇಕು. ತಂಬಾಕು ಬೇಕೋ, ಜೀವನ ಬೇಕೋ ಎಂಬುದನ್ನು ನಿರ್ಧರಿಸಬೇಕು ಎಂದು ಅವರು ಹೇಳಿದರು.

ಧೂಮಪಾನವು ಕೇವಲ ಆರೋಗ್ಯ ಹಾಳು ಮಾಡುವುದು ಮಾತ್ರವಲ್ಲದೆ, ಕುಟುಂಬದವರನ್ನು ಸಹ ಬೀದಿಪಾಲು ಮಾಡುತ್ತದೆ ಎಂದರು.

ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ ಕೋಟ್ಪಾ-2003; ತಂಬಾಕು ಉತ್ಪನ್ನಗಳ ಉದ್ದಿಮೆದಾರರು, ಮಾರಾಟ ಮಾಡುವಾಗ ವ್ಯಾಪಾರಸ್ಥರು, ಸಾರ್ವಜನಿಕರು ಕಡ್ಡಾಯವಾಗಿ ಕೋಟ್ಪಾ ಕಾಯಿದೆಯ 2003ರ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ ಎಂದರು.

Advertisement

ಬೀಡಿ, ಸಿಗರೇಟ್, ಗುಟ್ಕಾ ಹನ್ಸ್‌, ಇತರೆ ತಂಬಾಕು ಉತ್ಪನ್ನಗಳ ಸೇವನೆಯನ್ನು ಬಿಡಲು ಜಿಲ್ಲಾ ಆಸ್ಪತ್ರೆಯ ರೂಮ್‌ ನಂ 14 ರಲ್ಲಿ ಇರುವ ತಂಬಾಕು ವ್ಯಸನಮುಕ್ತ ಕೇಂದ್ರಕ್ಕೆ ಭೇಟಿ ಮಾಡಿ ಉಚಿತ ಆಪ್ತ ಸಮಾಲೋಚನೆ ಹಾಗೂ ಎನ್‌ಆರ್‌ಟಿ ಚಿಕಿತ್ಸೆ ಪಡೆಯುವಂತಾಗಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾಂಕ್ರಾಮಿಕ ರೋಗಗಳ ನಿಯಂತ್ರ ಣಾಧಿಕಾರಿ ಡಾ|ಎಂ.ಶಿವಕುಮಾರ್‌, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ | ಎ.ಸಿ.ಶಿವ ಕುಮಾರ್‌, ಎಂಟ ಮಾಲಜಿಸ್ಟ್‌ ಮಂಜು ನಾಥ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್‌, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ಆಶಾ ಕಾರ್ಯಕರ್ತರು, ಎಎನ್‌ಎಂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಾಥ ಸಂದರ್ಭದಲ್ಲಿ ತಂಬಾಕು ಸೇವನೆ ಬೇಡ, ತಂಬಾಕಿನ ಬಗ್ಗೆ ಜಾಗೃತಿ ವಹಿಸಿ ಎಂಬ ಘೋಷಣೆ ಕೇಳಿ ಬಂದಿತು. ಜಾಥವು ನಗರದ ಬಾಲಭವನದಿಂದ ಹೊರಟು ಸ್ಕ್ವಾಡ್ರನ್‌ ಲೀಡರ್‌ ಅಜ್ಜಮಾಡ ದೇವಯ್ಯ ವೃತ್ತದ ಮಾರ್ಗ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ಕೆ.ಎಸ್‌.ತಿಮ್ಮಯ್ಯ ವೃತ್ತದ ಮೂಲಕ ಜಿಲ್ಲಾ ಆಸ್ಪತ್ರೆಗೆ ತೆರಳಿತು.

ಜಾಥ ಚಾಲನೆಗೂ ಮೊದಲು ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಸಹಿ ಸಂಗ್ರಹ ಆಂದೋಲನ ನಡೆಯಿತು.

ಹಾಗೆಯೇ ಗುಲಾಬಿ ಹೂ ನೀಡುವ ಮೂಲಕ ಜನರಲ್ಲಿ ತಂಬಾಕಿನಿಂದ ಉಂಟಾಗುವ ರೋಗಗಳ ಬಗ್ಗೆ ಮಾಹಿತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next