Advertisement

ಮನಸ್ಸನ್ನೂ ಬುದ್ದಿಯ ಹತೋಟಿಗೆ ಕೊಡಿ

12:39 AM Aug 12, 2019 | sudhir |

ಕಾರಣವಿಲ್ಲದೆ ಕೆಲವೊಮ್ಮೆ ಖುಷಿಗಳು ನಮ್ಮ ಬೊಗಸೆಯೊಳಕ್ಕೆ ಬಂದು ಬೀಳುತ್ತವೆ. ಇನ್ನು ನಿರೀಕ್ಷಿಸಿದ ನೋವು ಮನದಲ್ಲಿ ಮಡುಗಟ್ಟಿ ಸಂತೋಷವನ್ನು ಆಸ್ವಾದಿಸುವುದಕ್ಕೂ ಬಿಡುವುದಿಲ್ಲ. ನಮ್ಮೊಳಗಿನ ಪ್ರತಿ ಭಾವಗಳಿಗೂ ಜೀವ ನೀಡುವವರು ನಾವೇ. ನಮ್ಮ ಮೆದುಳನ್ನು ನಿಯಂತ್ರಿಸಿದ ಮೇಲೆ ನಮ್ಮ ಮನಸ್ಸಿನ ಭಾವನೆಗಳು ಉಸಿರಾಡುತ್ತವೆ. ಇದು ಸಂದರ್ಭ ಸೃಷ್ಟಿಸುವಲ್ಲಿ ಕೆಲಸ ಮಾಡುತ್ತವೆ. ಆದ್ದರಿಂದ ಮನಸ್ಸಿನ ಹತೋಟಿಯೇ ನಾವು ಎಷ್ಟರ ಮಟ್ಟಿಗೆ ಔನ್ನತ್ಯಕ್ಕೇರುತ್ತೇವೆ ಅಥವಾ ಪಾತಾಳಕ್ಕಿಳಿಯುತ್ತೇವೆಯೋ ಎಂಬುದನ್ನು ನಿರ್ಧರಿಸುವ ಬಹುಮುಖ್ಯ ಅಂಶ.

Advertisement

ಹಾಗಾದರೆ ಮನಸ್ಸಿನ ನಿಯಂತ್ರಣ ಹೇಗೆ?. ಇದು ಎಲ್ಲರಲ್ಲಿಯೂ ಅನೇಕ ಸಂದರ್ಭಗಳಲ್ಲಿ ಹುಟ್ಟುವ ಪ್ರಶ್ನೆ. ಕೆಲವೊಮ್ಮೆ ಪರಿಸ್ಥಿತಿಗಳ ಆಳಕ್ಕೆ ಕಟ್ಟುಬಿದ್ದು, ಒತ್ತಡಗಳ ಕಾರಣದಿಂದ ನಾವು ನಮ್ಮ ಬುದ್ಧಿಗೆ ಕೆಲಸ ಕೊಡುವುದನ್ನು ನಿಲ್ಲಿಸಿ ಬಿಡುತ್ತೇವೆ. ಮನಸ್ಸಿನ ಮಾತಿಗೆ ಕಿವಿಯಾಗಿ ಪರಿಸ್ಥಿತಿಯ ಅಡಿಯಾಳಾಗುವುದೂ ಸರ್ವೇ ಸಾಮಾನ್ಯ. ಹೀಗಾದಾಗೆಲ್ಲಾ ನಮ್ಮ ಮೇಲಿನ ನಿಯಂತ್ರಣದ ಹಿಡಿತದಿಂದ ಹೊರಕ್ಕೆ ಹೋಗಿರುತ್ತೇವೆ. ಎಮೋಷನ್‌, ಸೆಂಟಿಮೆಂಟ್ ಇತ್ಯಾದಿಗಳ ಸುಳಿಯಲ್ಲಿ ಸಿಲುಕಿ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವುದೂ ನಡೆದು ಹೋಗುತ್ತದೆ. ಹೀಗಾದಾಗ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದಾದರೂ ಹೇಗೆ ಎನ್ನುವ ಗೊಂದಲದಲ್ಲಿಯೇ ಬದುಕು ಸಾಗಿಸುವ ಬದಲು, ಬುದ್ಧಿಯನ್ನು ಒರೆಗೆ ಹಚ್ಚುವ ಕೆಲಸ ಮಾಡಿದೆವು ಎಂದಾದಲ್ಲಿ ಎಲ್ಲವನ್ನೂ ನಮ್ಮ ಹಿಡಿತದಲ್ಲಿಯೇ ಇರಿಸಿಕೊಳ್ಳುವಲ್ಲಿ ನಾವು ಗೆದ್ದು ಬಿಡುತ್ತೇವೆ. ಯಾವುದು ಸರಿ. ಹೇಗಿರಬಾರದು, ಯಾರನ್ನು ಹೇಗೆ ಸತ್ಕರಿಸಬೇಕು, ಎಂಥವರನ್ನು ತಿರಸ್ಕರಿಸಬೇಕು ಎನ್ನುವುದರ ಜತೆಗೆ ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಬೇಕು ಬೇಡಗಳನ್ನು ನಿರ್ಧರಿಸುವ ಗುಣವನ್ನು ನಾವು ಕಲಿತು ಬಿಟ್ಟೆವು ಎಂದಾದಲ್ಲಿ ಮನಸ್ಸು ಮುಕ್ಕಾಲು ಪಾಲು ನಮ್ಮ ನಿಯಂತ್ರಣಕ್ಕೆ ಬಂದಿದೆ ಎಂದೇ ಅರ್ಥ. ಹೌದು ಕೆಲವೊಮ್ಮೆ ಅಗತ್ಯಕ್ಕೆ ಮೀರಿದ ಆಸೆಗಳು, ಅತಿಯಾದ ನಂಬಿಕೆಗಳೂ ನಮ್ಮನ್ನು ಅವಾಂತರಕ್ಕೆ ತಳ್ಳಿ ಬಿಡುವುದುಂಟು. ಅನಂತರದ ಬದುಕಿನಲ್ಲಿ ಆತ್ಮವಿಶ್ವಾಸ, ಜೀವನ ಪ್ರೀತಿಯನ್ನೇ ಬಲಿಕೊಟ್ಟು ಬದುಕಬೇಕಾಗಿ ಬರುತ್ತದೆ. ಇದಕ್ಕೆ ಇನ್ನೊಬ್ಬರನ್ನು ದೂರಿ ಪ್ರಯೋಜನವಿಲ್ಲ. ಬದಲಾಗಿ ನಮ್ಮ ಯೋಚನೆ, ನಂಬಿಕೆಗಳನ್ನು ನಾವು ಸರಿಯಾದ ರೀತಿಯಲ್ಲಿ ನಾವು ಉಪಯೋಗಿಸಿಲ್ಲ ಎಂಬುದೇ ನಮ್ಮ ದುರಂತಕ್ಕೆ ಕಾರಣ

Advertisement

Udayavani is now on Telegram. Click here to join our channel and stay updated with the latest news.

Next