ಬಂಟ್ವಾಳ: ಬಂಟ್ವಾಳ ತಾ.ಪಂ.ನ 2020-12ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಪ್ರತಿ ಸದಸ್ಯರಿಗೆ 5.90 ಲಕ್ಷ ರೂ. ಅನುದಾನ ಮೀಸಲಿಡಲಾಗುತ್ತಿದ್ದು, ಮೇ 28ರ ಸಂಜೆಯೊಳಗೆ ಕ್ಷೇತ್ರವಾರು ಕಾಮಗಾರಿಗಳ ಪಟ್ಟಿ ನೀಡುವಂತೆ ತಾ.ಪಂ.ಅಧ್ಯಕ್ಷ ಚಂದ್ರ ಹಾಸ ಕರ್ಕೇರ ಸದಸ್ಯರಿಗೆ ಸೂಚಿಸಿದರು.
ಬಿ.ಸಿ.ರೋಡ್‌ನಲ್ಲಿರುವ ತಾ.ಪಂ.ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ಸದಸ್ಯರ ಒಟ್ಟು ಅನು ದಾನದಲ್ಲಿ ಪ.ಜಾತಿ, ಪ.ಪಂ.ದ ಕಾಮಗಾರಿಗೆ 1.48 ಲಕ್ಷ ರೂ., ಕುಡಿಯುವ ನೀರು ಹಾಗೂ ಗ್ರಾಮೀಣ ನೈರ್ಮಲ್ಯ ಯೋಜನೆಗೆ ತಲಾ 1.11 ಲಕ್ಷ ರೂ., ರಸ್ತೆ, ಕಟ್ಟಡ, ಶಾಲೆ ಮೊದಲಾದ ಕಾಮಗಾರಿಗೆ 2.21 ಲಕ್ಷ ರೂ.ಗಳಂತೆ ವಿಭಾಗಿಸಲಾಗಿದ್ದು, ಅದರಂತೆ ಪಟ್ಟಿ ನೀಡ ಬೇಕು ಎಂದು ಸೂಚಿಸಿದರು.
ಕಳೆದ ಸಾಲಿನ ತಾ.ಪಂ.ಅನುದಾನದಲ್ಲಿ ಸುಮಾರು 90 ಲಕ್ಷ ರೂ.ಹಿಂದಕ್ಕೆ ಹೋಗಿ ರುವುದಕ್ಕೆ ಸದಸ್ಯ ಉಸ್ಮಾನ್ ಕರೋಪಾಡಿ ಆಕ್ಷೇಪ ವ್ಯಕ್ತಪಡಿಸಿದರು. ತಾ.ಪಂ.ನ ಖಜನಾಧಿಕಾರಿಯ ಕಾರ್ಯ ವೈಖರಿ ಕುರಿತು ಸದಸ್ಯ ಪ್ರಭಾಕರ ಪ್ರಭು ಆಕ್ಷೇಪ ವ್ಯಕ್ತಪಡಿಸಿ, ಪುತ್ತೂರು ತಾ.ಪಂ.ನಲ್ಲಿ ಪೂರ್ಣ ಅನುದಾನ ವ್ಯಯವಾಗಿದೆ. ನಮ್ಮಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು. ಉಪಾಧ್ಯಕ್ಷ ಅಬ್ಟಾಸ್ ಆಲಿ ಮಾತನಾಡಿ, ಮಾ. 12ಕ್ಕೆ ಕೊಟ್ಟ ಬಿಲ್ ಆಗಿಲ್ಲ, ಮಾ. 23ಕ್ಕೆ ಕೊಟ್ಟ ಬಿಲ್ ಆಗಿದೆ. ಇದು ಹೇಗೆ ಸಾಧ್ಯ ಎಂಬುದಕ್ಕೆ ಖಜನಾಧಿಕಾರಿ ಉತ್ತರ ನೀಡಲಿ ಎಂದು ತಿಳಿಸಿದಾಗ, ಅಧ್ಯಕ್ಷರು ಖಜನಾಧಿಕಾರಿಯವರನ್ನು ಕರೆಸಿದರು.
ಬಳಿಕ ಮಾತನಾಡಿದ ಖಜನಾಧಿಕಾರಿ, ಮಾ. 18ರ ವರೆಗೆ ಕೊನೆಯ ದಿನಾಂಕವಿದ್ದರೂ, ಮಾ. 21ರ ವರೆಗೂ ಬಿಲ್ ಪಾಸ್ ಮಾಡಿದ್ದೇನೆ. ಮಾ. 23ಕ್ಕೆ ಕಮೀಷನರ್ ಸೂಚನೆಯಂತೆ ನಿಲ್ಲಿಸಿದ್ದೇವೆ ಎಂದರು. ನಾವು ಒತ್ತಡದಲ್ಲಿ ಕೆಲಸ ಮಾಡಿದರೂ, ಬಿಲ್‌ಗಳು ಲ್ಯಾಪ್ಸ್ ಆಗುವುದಕ್ಕೆ ಅವಕಾಶ ನೀಡಿಲ್ಲ ಎಂದು ಎಇಇ ಯಶವಂತ ಸಾಲ್ಯಾನ್ ತಿಳಿಸಿದರು.
ಅನುದಾನ ವಾಪಸ್ ಹೋಗದಂತೆ ಕೆಲಸ ಮಾಡೋಣ ಎಂದು ಅಧ್ಯಕ್ಷರು ಹೇಳಿದರು. ಸದಸ್ಯರಾದ ರಮೇಶ್ ಕುಡೆ¾àರ್, ಯಶವಂತ ಪೊಳಲಿ, ಕೆ.ಸಂಜೀವ ಪೂಜಾರಿ ಚರ್ಚೆಯಲ್ಲಿ ಪಾಲ್ಗೊಂಡರು. ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು. ಕುಡಿಯುವ ನೀರು ವಿಭಾಗದ ಎಇಇ ಮಹೇಶ್ ಇದ್ದರು. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು.
ನೆರವು ನೀಡಲು ಸಲಹೆ
ಗ್ರಾ.ಪಂ.ನ 14ನೇ ಹಣಕಾಸಿನ ಅನುದಾನದಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ನೆರವು ನೀಡಲು ಕ್ರಮಕೈಗೊಳ್ಳುವಂತೆ ಸದಸ್ಯ ಆದಂ ಕುಂಞಿ ಸಲಹೆ ನೀಡಿದರು. ಆತ್ಮಹತ್ಯೆ ಮಾಡಿಕೊಂಡ ಯುವಕನ ರಕ್ಷಣೆಗೆ ಮುಂದಾದ ಗೂಡಿನಬಳಿಯ ಯುವಕರಿಗೆ ತಾ.ಪಂ.ನಿಂದ ಸಮ್ಮಾನ ಮಾಡು ವಂತೆ ಸದಸ್ಯೆ ನಸೀಮಾ ಬೇಗಂ ಸಲಹೆ ನೀಡಿದರು.