Advertisement

ಕಾಗವಾಡ-ಅಥಣಿ ಕ್ಷೇತ್ರ ಮತ್ತೆ ಕಾಂಗ್ರೆಸ್‌ಗೆ ಕೊಡಿ: ಸತೀಶ

12:59 PM Jul 29, 2019 | Suhan S |

ಅಥಣಿ: ಇಲ್ಲಿನ ಪಿಡಬ್ಲುಡಿಯ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್‌ ಮುಖಂಡರ ಹಾಗೂ ಕಾರ್ಯಕರ್ತರ ಸಮಾಲೋಚನಾ ಸಭೆ ರವಿವಾರ ನಡೆಯಿತು.

Advertisement

ಈ ವೇಳೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಕಾಗವಾಡ ಮತ್ತು ಅಥಣಿ ಮತಕ್ಷೇತ್ರಗಳ ಶಾಸಕರು ಅನರ್ಹಗೊಂಡ ಹಿನ್ನೆಲೆಯಲ್ಲಿ ಈ ಎರಡು ಮತಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ತಂದು ಕೊಡಲು ಎಲ್ಲ ಕಾರ್ಯಕರ್ತರು ಶ್ರಮಿಸಬೇಕೇಂದು ಮನವಿ ಮಾಡಿದರು.

ಆಗ ಕೆಲ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ವಾಗ್ವಾದ ನಡೆದವು. ಆಗ ಸತೀಶ ಜಾರಕಿಹೊಳಿ ಕಾರ್ಯಕರ್ತರ ಮನವೊಲಿಸಲು ಮುಂದಾದರು ಸಹ ಅವರ ಮಾತಿಗೆ ಒಪ್ಪಲಿಲ್ಲ. ಕೂಡಲೇ ಸ್ಥಳೀಯ ಮುಖಂಡತ್ವ ಮತ್ತು ಬ್ಲಾಕ್‌ ಅಧ್ಯಕ್ಷರನ್ನು ಬದಲಾಯಿಸಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು. ಆಗ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮೌನ ವಹಿಸಿದ್ದರು.

ವೋಟಿಗೆ ಮತ್ತು ಸಂಘಟನೆಗೆ ಮತ್ತು ಯಾವುದೇ ಕಾರ್ಯಕ್ಕೆ ದಲಿತರು ಬೇಕು. ಆದರೆ ನಮಗೆ ಸ್ಥಾನಮಾನ ನೀಡಲು ಏಕೆ ಹಿಂದೇಟು. ಕಳೆದ ಹಲವು ದಶಕಗಳಿಂದ ಕಾಂಗ್ರೆಸ್‌ ಪಕ್ಷದ ಬೆನ್ನೇಲಬು ಆಗಿ ನಿಂತಿರುವ ಹಾಗೂ ಕಾಂಗ್ರೆಸಿನ ವೋಟ್ ಬ್ಯಾಂಕಾಗಿರುವ ದಲಿತ ಸಮುದಾಯಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ಒಳ್ಳೆಯ ಸ್ಥಾನಮಾನ ನೀಡುವಂತೆ ಕಾರ್ಯಕರ್ತರಾದ ಮಂಜು ಹೋಳಿಕಟ್ಟಿ ಮತ್ತು ಮಾಂತೇಶ ಬಾಡಗಿ ಅವರು ಸತೀಶ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿದರು.

ಶಾಸಕ ಸ್ಥಾನದಿಂದ ಮಹೇಶ ಕುಮಟಳ್ಳಿ ಅನರ್ಹಗೊಂಡ ಹಿನ್ನೆಲೆಯಲ್ಲಿ ಅಥಣಿ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಯಿತು. ಆಗ ಕಾರ್ಯಕರ್ತರ ಮನವೊಲಿಸಲು ಮುಂದಾದ ಸತೀಶ ಜಾರಕಿಹೊಳಿ ಅವರ ಪ್ರಯತ್ನ ಫಲಿಸಲಿಲ್ಲ.

Advertisement

ಲಕ್ಷ್ತ್ರಣರಾವ ಚಿಂಗಳೆ, ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ, ಬಸವರಾಜ ಬುಟಾಳಿ, ಬಿ.ಎ. ಚವಾಣ, ಸತ್ಯಾಪ್ಪ ಬಾಗೆನ್ನವರ, ಎಸ್‌.ಎಂ. ನಾಯಿಕ, ಸುನೀಲ ಸಂಕ, ಅರ್ಷದ ಗದ್ಯಾಳ, ರಮೇಶ ಸಿಂದಗಿ, ರಮೇಶಗೌಡ ಪಾಟೀಲ, ಶಿವು ಗುಡ್ಡಾಪುರ, ಸುಂದರ ಸೌಧಾಗರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next