Advertisement

ತೊಗರಿಗೆ ಸೂಕ್ತ ಬೆಂಬಲ ಬೆಲೆ ನೀಡಿ

11:57 AM Jan 01, 2018 | Team Udayavani |

ಚಿಂಚೋಳಿ: ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ತೊಗರಿಗೆ
ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ ಮುಖಾಂತರ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

Advertisement

ಜಿಲ್ಲಾ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ವಿದೇಶಿ ರಾಷ್ಟ್ರಗಳಿಂದ ಬೇಳೆ ಕಾಳು ಆಮದಿನಿಂದಾಗಿ 2015-16ರಲ್ಲಿ 67ಲಕ್ಷ ಟನ್‌ ಮತ್ತು 2016-17ನೇ ಸಾಲಿನಲ್ಲಿ 57ಲಕ್ಷ ಟನ್‌, 2017-18ನೇ ಸಾಲಿನಲ್ಲಿ 18 ಲಕ್ಷ ಟನ್‌ ಬೇಳೆ ಕಾಳು ಆಮದು ಮಾಡಿಕೊಂಡಿರುವುದರಿಂದ ತೊಗರಿ ಬೆಲೆ ಕುಸಿತಕ್ಕೆ ಕಾರಣವಾಗಿದೆ. ದೇಶದಲ್ಲಿ ಇರುವ ಬಲಿಷ್ಠ ಕಂಪನಿಗಳ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷ ರಾಜ್ಯದಲ್ಲಿ 12ಲಕ್ಷ ಟನ್‌ ತೊಗರಿ ಬೆಳೆಯಲಾಗಿತ್ತು. ಈ ವರ್ಷ 7ಲಕ್ಷ ಟನ್‌ ತೊಗರಿ ಬೆಳೆಯುವ ನಿರೀಕ್ಷೆ ಇದೆ. ಬೆಲೆ ಕುಸಿತದಿಂದ ತೊಗರಿಯನ್ನು ರೈತರು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ.
ಸ್ವಾಮಿನಾಥನ್‌ ವರದಿಯಂತೆ ಸರಕಾರ ರೈತರ ತೊಗರಿ ಬೆಂಬಲ ಬೆಲೆ 7500ರೂ. ನಿಗದಿಪಡಿಸಬೇಕು ಕೃಷಿ ಸಚಿವರನ್ನು ಒತ್ತಾಯಿಸಿದರು.

ರೈತ ಮುಖಂಡ ಮಾರುತಿ ಗಂಜಿಗಿರಿ ಮಾತನಾಡಿ, ಕೇಂದ್ರ ಸರಕಾರ 6800ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಇದಕ್ಕೆ ರಾಜ್ಯ ಸರಕಾರ 450 ರೂ.ಸಹಾಯ ಧನ ನೀಡಬೇಕು .ಪ್ರತಿಯೊಂದು ಗ್ರಾಪಂ ಕೇಂದ್ರಗಳಲ್ಲಿ ತೊಗರಿ ಮಾರಾಟ ಕೇಂದ್ರ ಪ್ರಾರಂಭಿಸಬೇಕು. ಪ್ರತಿ ಕ್ವಿಂಟಲ್‌ಗೆ 7500ರೂ. ನಿಗದಿಪಡಿಸಬೇಕು. ಕಬ್ಬಿಗೆ 3600ರೂ. ಬೆಲೆ ನಿಗದಿಪಡಿಸಬೇಕು ಮತ್ತು ಪ್ರತಿ ಟನ್‌ಗೆ 2500ರೂ.ನೀಡಬೇಕೆಂದು ಅಗ್ರಹಿಸಿದರು.

ಪರಮೇಶ್ವರ ಕಾಂತಾ ಮಾತನಾಡಿ, ಅರಣ್ಯ ಭೂಮಿ ಮಂಜೂರಾತಿಗೆ ಅರಣ್ಯ ಹಕ್ಕಿನ 2006ರ ಅಡಿಯಲ್ಲಿ ಸಾಗುವಳಿದಾರರಿಂದ ಅರ್ಜಿ ಕರೆಯಬೇಕು. ಗೈರಾಣಿ ಜಮೀನು ಹಕ್ಕು ಪತ್ರ ಕೊಡಬೇಕೆಂದು ಸರಕಾರಕ್ಕೆ
ಒತ್ತಾಯಿಸಿದರು. 

Advertisement

ಚಿಂತಕುಂಟಿ ರೈತ ಮುಖಂಡ ಭರತ ಬುಳ್ಳ, ದೇವೇಂದ್ರಪ್ಪ ಪಾಟೀಲ ಕೊರವಿ, ಪ್ರದೀಪ ತಿರಲಾಪುರ, ಸಿದ್ದಲಿಂಗಯ್ಯ
ಸ್ವಾಮಿ ಎಂಪಳ್ಳಿ, ಗೌರಿಶಂಕರ ಕಿಣ್ಣಿ, ತಾರಾಚಂದ, ಸಂತೋಷ ರಾಠೊಡ್‌, ಗೌರಿಶಂಕರ ರಟಕಲ್‌, ರಾಘವೇಂದ್ರ
ಜಿಳ್ಳೆ, ಅನೀಲಕುಮಾರ ಕುಳಗೇರಿ, ಚಂದ್ರಶೇಖರ ಚೌಕಾ, ನಾಗಣ್ಣ ರಾಮಾ, ಕಾಶಿನಾಥ ಚೌಕಾ, ಪರಮೇಶ್ವರ ಕಾಂತಾ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಎಪಿಎಂಸಿ ಕಾರ್ಯದರ್ಶಿ ಮಹಾದೇವಿ ಪಾಟೀಲರಿಗೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next