Advertisement

ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ ಪರಿಹಾರ ನೀಡಿ

02:36 PM Feb 15, 2022 | Team Udayavani |

ಲಿಂಗಸುಗೂರು: ಇತ್ತೀಚೆಗೆ ಹಾವೇರಿ ಜಿಲ್ಲೆ ಶಿಗ್ಗಾವಿಯ ಆಶಾ ಕಾರ್ಯಕರ್ತೆಯ ಪತಿಯು ವ್ಯಾಕ್ಸಿನ್‌ ಕ್ಯಾರಿಯರ್‌ ತರುವ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದು, ನೊಂದ ಆಶಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಆಶಾ ಕಾರ್ಯಕರ್ತೆಯರಿಗೆ ತಮ್ಮದಲ್ಲದ ಮತ್ತು ಯಾವುದೇ ಇಲಾಖೆಯೇತರ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ವಹಿಸಬಾರದು. ವ್ಯಾಕ್ಸಿನ್‌ ಕ್ಯಾರಿಯರ್‌ ತಲುಪಿಸುವ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡ ಆಶಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಈ ಪ್ರಕರಣದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಿ, ವ್ಯಾಕ್ಸಿನ್‌ ಕ್ಯಾರಿಯರ್‌ ತರಲು ಒತ್ತಡ ಹೇರಿ ಈ ಘಟನೆಗೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಿ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕೃತ ಜ್ಞಾಪನಾ ಪತ್ರ, ನಡಾವಳಿಗಳನ್ನು ಜಿಲ್ಲೆಯ ಪ್ರತಿ ಪಿಎಚ್‌ ಸಿಗಳಲ್ಲಿ ಜಾರಿಗೆ ತರುವಂತೆ ಆಗ್ರಹಿಸಿದರು.

ಆಶಾ ಸಂಘದ ತಾಲೂಕು ಗೌರವ ಅಧ್ಯಕ್ಷ ಶರಣಪ್ಪ ಉದಾºಳ, ತಾಲೂಕು ಅಧ್ಯಕ್ಷ ನಗುಮಿ, ದೇವಮ್ಮ ಮಸ್ಕಿ, ಮಹಾಂತಮ್ಮ ಮಸ್ಕಿ, ಶೋಭ ಸಂತೆಕೆಲ್ಲೂರು, ಶೈಲಜಾ ಮುದ್ಗಲ್‌, ಗಂಗಮ್ಮ, ಉದಾಸಮ್ಮ ಮಾಕಪುರ, ನಾಗರತ್ನ ಮಾಕಪುರ, ನಾಗಮ್ಮ ಸಜ್ಜಲಗುಡ್ಡು, ಶೋಭ ಈಚನಾಳ, ಜಯಮ್ಮ ಈಚನಾಳ, ನಾಗಮ್ಮ ಈಚನಾಳ, ಶಾಂತ ಹಟ್ಟಿ, ಬಸಮ್ಮ ಹಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next