Advertisement
ಪೋಲಿಯೋ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರವು ಈ ವಿಭಿನ್ನ ಯೋಜನೆ ಸಿದ್ಧ ಪಡಿಸಿದೆ. ಕುಂಬಳೆಯ ಅಕ್ಯೂರ್ ಡಯಾಗ್ನಿಸ್ಟಿಕ್ ಲ್ಯಾಬ್ ಬಂಗಾರದ ನಾಣ್ಯದ ಪ್ರಾಯೋಜಕತ್ವ ವಹಿಸಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯ 5 ವರ್ಷ ಪ್ರಾಯಕ್ಕಿಂತ ಕೆಳಗಿನ ವಯೋಮಾನದ 4,511 ಮಂದಿ ಮಕ್ಕಳಿಗೆ ಬಿಂದು ಔಷಧ ನೀಡುವ ನಿಟ್ಟಿನಲ್ಲಿ 23 ವಾರ್ಡ್ ಗಳಲ್ಲಿ 40 ಬೂತ್‌ಗಳು, 2 ಮೊಬೈಲ್ ಬೂತ್‌ಗಳು ಸಿದ್ಧಗೊಂಡಿವೆ. ಬೆಳಗ್ಗೆ 8ರಿಂದ ಸಂಜೆ 5 ಗಂಟೆ ವರೆಗೆ ಔಷಧ ವಿತರಿಸಲಾಗುವುದು.
ಈ ಸಂಬಂಧ ನಡೆದ ಸಮಾರಂಭದಲ್ಲಿ ವೈದ್ಯಾಧಿಕಾರಿ ಡಾ| ಕೆ. ದಿವಾಕರ ರೈ ಕೂಪನ್ ಬಿಡುಗಡೆಗೊಳಿಸಿದರು. ಪಿಎಚ್‌ಎಲ್ ಸೂಪರ್‌ವೈಸರ್ ಜೈನಮ್ಮ ಥೋಮಸ್ ಅವರು ಮೊದಲ ಕೂಪನ್ ಪಡೆದುಕೊಂಡರು.