Advertisement
ಕೋಟೇಶ್ವರದಲ್ಲಿ ರವಿವಾರ ಕುಂದಾಪುರ ತಾಲೂಕು ಯುವ ಬಂಟರ ಸಂಘದದಶಮ ಸಂಭ್ರಮದ ಭಾಗವಾಗಿ ಆಯೋಜಿಸಿದ “ಭಾವೈಕ್ಯ : ಬಂಟರ ಮಹಾ ಸಮಾಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮುಂಬಯಿನ ಉದ್ಯಮಿ ಕೂಳೂರುಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಿದರು.
ದಿ| ಯಡ್ತರೆ ನರಸಿಂಹ ಶೆಟ್ಟಿ ಸಂಸ್ಮರಣ ಪ್ರಶಸ್ತಿ ಸ್ವೀಕರಿಸಿದ ಎಂಆರ್‌ಜಿ ಸಮೂಹ ಸಂಸ್ಥೆ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಬಂಟ ಸಮಾಜದವರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಆ ಋಣ ನನ್ನ ಮೇಲಿದೆ. ಅದಕ್ಕಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುತ್ತಿದ್ದೇನೆ ಎಂದರು. ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಕಾಸರಗೋಡಿನಿಂದ ಶಿರೂರುವರೆಗಿನ ಬಂಟರೆಲ್ಲರೂ ಒಂದೇ. ಅವರ ಕೀರ್ತಿ ಇನ್ನಷ್ಟು ಪಸರಿಸಲಿ ಎಂದು ಹಾರೈಸಿದರು.
Related Articles
Advertisement
ಶಾಸಕ ಗುರುರಾಜ ಗಂಟಿಹೊಳೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕೋಶಾಧಿಕಾರಿ ಉಳೂ¤ರು ಮೋಹನದಾಸ ಶೆಟ್ಟಿ, ಪುಣೆಯ ಕುಶಲ್ ಎಸ್. ಹೆಗ್ಡೆ, ಬಂಟರ ಯಾನೆ ನಾಡವರ ಸಂಘದ ಮಾಜಿ ಸಂಚಾಲಕ ಡಾ| ವೈ.ಎಸ್. ಹೆಗ್ಡೆ, ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಸಹ ಸಂಚಾಲಕ ಅಶೋಕ ಶೆಟ್ಟಿ ಸಂಸಾಡಿ, ಸಂಘಗಳ ಅಧ್ಯಕ್ಷರಾದ ಪುಣೆಯ ಸಂತೋಷ ವಿ. ಶೆಟ್ಟಿ, ಗಣೇಶ ಹೆಗ್ಡೆ, ಬೆಂಗಳೂರಿನ ಮುರಳೀಧರ ಹೆಗ್ಡೆ, ಎ.ಜೆ. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ, ಕುಶಲ ಹೆಗ್ಡೆ ಟ್ರಸ್ಟ್‌ನ ಉದಯ ಕುಮಾರ್ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ, ಉದ್ಯಮಿಗಳಾದ ಆನಗಳ್ಳಿ ಕರುಣಾಕರ ಹೆಗ್ಡೆ, ಚಂದ್ರ ಶೆಟ್ಟಿ ಕುಂದಾಪುರ, ವಿಜಯ ಕುಮಾರ್ ಶೆಟ್ಟಿ, ಕೃಷ್ಣ ಪ್ರಸಾದ್ ಅಡ್ಯಂತಾಯ, ಇಂಬು ರತ್ನಾಕರ ಶೆಟ್ಟಿ, ಗೋಪಾಲ ಶೆಟ್ಟಿ ಮೂರೂರು, ಕಮಲ ಕಿಶೋರ ಹೆಗ್ಡೆ, ವತ್ಸಲಾ ದಯಾನಂದ ಶೆಟ್ಟಿ, ವಿನಯ ಆಸ್ಪತ್ರೆಯ ಡಾ| ರಂಜಿತ್ ಕುಮಾರ್ ಶೆಟ್ಟಿ, ನಗು ಗ್ರೂಪ್‌ನ ಕುಶಲ ಶೆಟ್ಟಿ, ಸಿಎಗಳಾದ ಜಯರಾಮ ಶೆಟ್ಟಿ, ದಯಾ ಶರಣ್ ಶೆಟ್ಟಿ, ಸುಧಾಕರ ಹೆಗ್ಡೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಡಾ| ತಲ್ಲೂರು ಶಿವರಾಮ ಶೆಟ್ಟಿ, ಯುವ ಬಂಟರ ಸಂಘದ ಗೌರವಾಧ್ಯಕ್ಷ ಬಿ. ಉದಯ ಕುಮಾರ್ ಶೆಟ್ಟಿ, ಬಿ. ವಿನಯ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಸ್ವಾಗತಿಸಿ, ಪ್ರ. ಸಂಚಾಲಕ ಪ್ರತಾಪ್‌ಚಂದ್ರ ಶೆಟ್ಟಿ ಹಳ್ನಾಡು ಪ್ರಸ್ತಾವಿಸಿದರು. ಡಾ| ಚೇತನ್ ಶೆಟ್ಟಿ ಕೋವಾಡಿ, ಆರ್‌ಜೆ ನಯನಾ ನಿರೂಪಿಸಿ, ಅಕ್ಷಯ್ ಹೆಗ್ಡೆ ವಂದಿಸಿದರು.