Advertisement

ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ: ನ್ಯಾ|ಶಾಮಪ್ರಸಾದ

12:56 PM Aug 29, 2022 | Team Udayavani |

ಸೇಡಂ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯದ ಕಟ್ಟಡದ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಹಾಗೂ ತ್ವರಿತವಾಗಿ ಪೂರ್ಣಗೊಳಿಸುವಂತೆ ಹೈಕೋರ್ಟ್‌ ನ್ಯಾಯಮೂರ್ತಿ ಬಿ.ಎಂ.ಶಾಮಪ್ರಸಾದ ಹೇಳಿದರು.

Advertisement

ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯದ ಕಟ್ಟಡದ ಮೇಲಾºಗದಲ್ಲಿ ನಿರ್ಮಾಣಗೊಳ್ಳುತ್ತಿರುವ 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಮೊದಲ ಮಹಡಿ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ವಕೀಲರು ನಿರಂತರ ಅಧ್ಯಯನಶೀಲರಾಗಬೇಕು. ಕಕ್ಷಿದಾರರ ಪರವಾಗಿ ಆಳವಾದ ಅಧ್ಯಯನ ನಡೆಸಿ ವಾದ ಮಂಡಿಸುತಿದ್ದಾರೆ ಎನ್ನುವ ಭಾವನೆ ನ್ಯಾಯಾಧೀಶರಿಗೆ ಮೂಡಬೇಕು. ಈ ರೀತಿಯ ಅಧ್ಯಯನವನ್ನು ವಕೀಲರು ಮೈಗೂಡಿಸಿಕೊಳ್ಳಬೇಕು. ಈ ಹಿಂದೆ ನ್ಯಾಯಾಲಕ್ಕೆ ಹೋಗುವ ವಕೀಲರನ್ನು ಅತ್ಯಂತ ಗೌರವದಿಂದ ಕಾಣುತಿದ್ದರು. ಇತ್ತೀಚಿನ ವಕೀಲರಲ್ಲಿ ಅಧ್ಯಯನದ ಕೊರತೆ ಕಂಡು ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಹೈಕೋರ್ಟ್‌ ನ್ಯಾಯಮೂರ್ತಿ ಅಶೋಕ ಕಿಣಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು. ಅಲ್ಲದೆ ಈ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಭಾಗವಹಿಸಬೇಕು. ಪರಿಕ್ಷಾರ್ಥಿಗಳ ಅನುಕೂಲಕ್ಕಾಗಿ ತರಬೇತಿ ಕೇಂದ್ರಗಳನ್ನು ತೆರೆಯಬೇಕು ಎಂದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಬಿ.ಪಾಟೀಲ್‌, 4ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಕರಣ ಗುಜ್ಜರ, ಸಹಾಯಕ ಆಯುಕ್ತ ಎಂ. ಕಾರ್ತಿಕ, ವಕೀಲರ ಸಂಘದ ಅಧ್ಯಕ್ಷ ಸತೀಶ ಪಾಟೀಲ ತರನಳ್ಳಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಆಡಕಿ ವೇದಿಕೆಯಲ್ಲಿದ್ದರು. ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ಜಗನ್ನಾಥ ಹಲಿಂಗೆ, ಇಇ ಕೃಷ್ಣ ಅಗ್ನಿಹೋತ್ರಿ, ವಕೀಲರಾದ ಎಸ್‌.ಕೆ.ದೇಶಪಾಂಡೆ, ಸಾಯಿರೆಡ್ಡಿ, ಬಸವರಾಜ ತಡಕಲ್‌, ಜಗನ್ನಾಥ ತರನಳ್ಳಿ, ಮಲ್ಲಣ್ಣಗೌಡ ಬೆನಕನಹಳ್ಳಿ, ಮಹೇಂದ್ರರೆಡ್ಡಿ, ಅನಂತಯ್ಯ ಮುಸ್ತಾಜರ, ಭೀಮರಾವ ದಂಡೋತಿ, ಅಶೋಕ ಬಂದಗಿ, ಸಂಗಮೇಶ ಮರಗೋಳ, ಶಿವಾನಂದಸ್ವಾಮಿ, ಎಸ್‌.ಎಸ್‌. ಅಪ್ಪಾಜಿ, ಶಿವಲೀಲಾ ಅಪ್ಪಾಜಿ, ಮಹಾನಂದ, ಮಹಾದೇವಿ ಅವಂಟಿ, ಚಂದ್ರಕಲಾ ಇಂಜಳ್ಳಿಕರ್‌, ರಾಘವೇಂದ್ರ ಮುಸ್ತಾಜರ, ರಾಜೇಂದ್ರ ಮುನ್ನೂರ, ವಿಜಯಕಮಾರ ಮಿಸ್ಕಿನ್‌, ಚಾಂದಪಾಶ ಬುರಗಪಲ್ಲಿ, ನಾಗೇಶ ಮಿಟ್ಟಿ, ಶಾಂತಯ್ಯಸ್ವಾಮಿ ಬಟಗೇರಾ, ಹಣಮಂತ ರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next