Advertisement

ಸರಕಾರ ನಡೆಸಲು ಆಗದಿದ್ರೆ ಅಧಿಕಾರ ಬಿಟ್ಟು ಕೊಡಿ: ಶೆಟ್ಟರ್‌

11:00 PM Jun 23, 2019 | Team Udayavani |

ಹುಬ್ಬಳ್ಳಿ: ಸಮ್ಮಿಶ್ರ ಸರಕಾರದಲ್ಲಿನ ಅಸ್ಥಿರತೆಯಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ. ಅಧಿಕಾರಿಗಳಲ್ಲಿ ಅಸಡ್ಡೆ ಭಾವನೆ ಮೂಡುತ್ತಿದೆ ಎಂದು ಶಾಸಕ ಜಗದೀಶ ಶೆಟ್ಟರ್‌ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ದೇವೇಗೌಡರು, ಸಿದ್ದರಾಮಯ್ಯ ಸೇರಿ ಇನ್ನಿತರ ನಾಯಕರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಇದರಿಂದ ಸರಕಾರ ಇದೆಯೋ, ಇಲ್ಲವೋ ಎಂಬ ಸಂದೇಹ ಜನರಲ್ಲಿ ಮೂಡುತ್ತಿದೆ.

ಅಸ್ಥಿರತೆ ಕಾಡುತ್ತಿದೆ. ಅಧಿಕಾರಿಗಳು ಸಹ ಸರಕಾರ ಇರುತ್ತದೋ, ಇಲ್ಲವೋ ಎಂದುಕೊಂಡು ಕೆಲಸ ಮಾಡಲು ಹಿಂಜರಿಕೆ ಮಾಡುತ್ತಿದ್ದಾರೆ. ಅವರು ಕ್ರಿಯಾಶೀಲರಾಗುತ್ತಿಲ್ಲ. ಸುಸೂತ್ರವಾಗಿ ಸರಕಾರ ನಡೆಸಲು ಆಗದಿದ್ದರೆ ಅಧಿಕಾರ ಬಿಟ್ಟು ಕೊಡಲಿ. ಬಿಜೆಪಿ ಅಧಿಕಾರ ನಡೆಸಲು ಸಿದ್ಧವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next