Advertisement

ಪ್ಲಾಸ್ಟಿಕ್‌ ತಂದರೆ ಅಕ್ಕಿ ಉಚಿತ!

04:47 PM Dec 04, 2019 | Team Udayavani |

ಬನಹಟ್ಟಿ: ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಲು ಸರಕಾರ ಏನೆಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಅಂತೆಯೇ ಬನಹಟ್ಟಿ ನಗರವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸಲು ಸ್ಥಳೀಯ ಅನ್ನಪೂರ್ಣೇಶ್ವರಿ ಹೋಟೆಲ್‌ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಹೋಟೆಲ್‌ನ ಮಲ್ಲಯ್ಯ ಬಸಲಿಂಗಯ್ಯ ಕಲ್ಯಾಣಿ ಒಂದು ಕೇಜಿ ಪ್ಲಾಸ್ಟಿಕ್‌ ತಂದರೆ ಒಂದು ಕೇಜಿ ಅಕ್ಕಿ ಉಚಿತಎಂದು ಘೋಷಣೆ ಮಾಡುವ ಮೂಲಕ ಪ್ಲಾಸ್ಟಿಕ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Advertisement

ಪರಿಸರಕ್ಕೆ ಮಾರಕ ಎನಿಸಿದ ಪ್ಲಾಸ್ಟಿಕ್‌ ಬಳಕೆಯನ್ನು ಕೇಂದ್ರ ಸರ್ಕಾರ ಅಕ್ಟೋಬರ್‌ 2 ರಂದೇ ನಿಷೇಧಿಸಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ಲಾಸ್ಟಿಕ್‌ ಆಯ್ದು ಸ್ವಚ್ಛಗೊಳಿಸಿದ ಚಿತ್ರದೊಂದಿಗೆ ಹೊಟೇಲ್‌ಗೆ ಬರುವವರಿಗೆ ಸೋಮವಾರದಿಂದಗುರುವಾರದವರೆಗೆ ಉಚಿತವಾಗಿ1ಕೇಜಿ ಅಕ್ಕಿ ನೀಡುತ್ತಿದ್ದಾರೆ.

ಬಾಳೆ ಎಲೆಯಲ್ಲಿ ಪಾರ್ಸಲ್‌: ನಮ್ಮ ಹೋಟೆಲ್‌ನಿಂದ ಪಾರ್ಸೆಲ್‌ ತೆಗೆದುಕೊಂಡು ಹೋಗುವವರಿಗೆ ಬಾಳೆ ಎಲೆಯಲ್ಲೇ ಊಟ ಕಟ್ಟಿ ಕೊಡುತ್ತಿದ್ದೇವೆ. ಸಾಂಬಾರ್‌ನಂತಹ ಪದಾರ್ಥಗಳನ್ನು ರಟ್ಟಿನ ಡಬ್ಬದಲ್ಲಿ ಹಾಕಿ ಕೊಡುತ್ತೇವೆ ಎನ್ನುತ್ತಾರೆ ಮಲ್ಲಯ್ಯ. ಬನಹಟ್ಟಿ ಸೇರಿದಂತೆ ಅಥಣಿ, ಜಮಖಂಡಿ, ಗಲಗಲಿ ಹೀಗೆ 6 ಕಡೆಗಳಲ್ಲಿ ಹೊಟೇಲ್‌ಗ‌ಳಿದ್ದು, ಎಲ್ಲ ಕಡೆಗಳಲ್ಲಿಯೂ ಇಂತಹ ಅಭಿಯಾನ ನಡೆಸುವ ಮೂಲಕ ಬಂದ ಪ್ಲಾಸ್ಟಿಕ್‌ ಗಳನ್ನು ನಗರಸಭೆ ಸುಪರ್ದಿಗೆ ನೀಡಲಾಗುತ್ತಿದೆ ಎಂದು ದಾನಯ್ಯ ಕಲ್ಯಾಣಿ ತಿಳಿಸಿದರು.

 

-ಕಿರಣ ಶ್ರೀಶೈಲ ಆಳಗಿ

Advertisement
Advertisement

Udayavani is now on Telegram. Click here to join our channel and stay updated with the latest news.

Next