Advertisement

ಗ್ರಾಮಾಂತರ ಠಾಣೆಗೆ ಜಾಗ ನೀಡಿ

04:48 PM Jul 17, 2020 | Suhan S |

ಮುಳಬಾಗಿಲು: ತಾಲೂಕು ಆಡಳಿತ ಮೂರು ವರ್ಷಗಳಿಂದ ಗ್ರಾಮಾಂತರ ಠಾಣೆ ನೂತನ ಕಟ್ಟಡಕ್ಕೆ ಜಮೀನು ಮಂಜೂರು ಮಾಡದೇ ಮೀನಮೇಷ ಎಣಿಸುತ್ತಿದೆ ಎಂದು ಬಿಎಸ್‌ಪಿ ತಾಲೂಕು ಅಧ್ಯಕ್ಷ ಸಂಗಸಂದ್ರ ವಿಜಯಕುಮಾರ್‌ ಆರೋಪಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ 186 ಗ್ರಾಮಗಳಲ್ಲಿ ಜನರ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಮುಳಬಾಗಿಲು ಠಾಣೆಯನ್ನು ನಗರ ಠಾಣೆಯಾಗಿ, ಗ್ರಾಮಾಂತರ ಠಾಣೆ ಮಂಜೂರು ಮಾಡಿ ಅದಕ್ಕೆ ಮೂಲ ಸೌಕರ್ಯ ಒದಗಿಸಲು 4 ವರ್ಷಗಳ ಹಿಂದೆಯೇ ಕೋಟ್ಯಂತರ ರೂ. ಮಂಜೂರು ಮಾಡಿದೆ ಎಂದು ಹೇಳಿದರು.

ಅಂತೆಯೇ, 2016ರ ಅಕ್ಟೋಬರ್‌ನಲ್ಲಿ ಅಗತ್ಯ ಸಿಬ್ಬಂದಿ ನೇಮಿಸಿ ಗ್ರಾಮಾಂತರ ಠಾಣೆ ಕಾರ್ಯಾರಂಭಿಸಿದ್ದು, ನಂತರ 2017ರ ಆಗಸ್ಟ್‌ 16 ರಂದು ಪೊಲೀಸ್‌ ಇಲಾಖೆ ನರಸಿಂಹತೀರ್ಥದ ಶ್ರೀಪಾದರಾಜ ಮಠದ ಕಟ್ಟಡವೊಂದನ್ನು ಮಾಸಿಕ 27 ಸಾವಿರ ರೂ.ಗೆ ಬಾಡಿಗೆಗೆ ಪಡೆದುಕೊಂಡು ಠಾಣೆ ಆರಂಭಿಸಿ ಜನರ ದೂರು ಬಗೆ ಹರಿಸಲಾಗುತ್ತಿದೆ ಎಂದು ತಿಳಿಸಿದರು. ಈ ನಡುವೆ ಠಾಣಾ ಕಟ್ಟಡನಿರ್ಮಾಣಕ್ಕೆ ಅಗತ್ಯವುಳ್ಳ ಜಮೀನು ಮಂಜೂರಾತಿಗಾಗಿ ಮೂರು ವರ್ಷಗಳಿಂದ ಪೊಲೀಸ್‌ ಅಧಿಕಾರಿಗಳು ತಹಶೀಲ್ದಾರ್‌ ಕಚೇರಿಗೆ ಅರ್ಜಿ ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಮೀನು ಮಂಜೂರು ಮಾಡದೇ ಇದ್ದರೇ, ಬಿಎಸ್ಪಿಯಿಂದ ತಹಶೀಲ್ದಾರ್‌ ಕಚೇರಿ ಎದುರು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next