Advertisement
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ 7ನೇ ಆರ್ಥಿಕ ಗಣತಿ ಕಾರ್ಯಾಚರಣೆಯ ಸಂಯೋಜನೆಗೆ ಗುರುವಾರ ನಡೆದ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರ್ಥಿಕ ಗಣತಿಯ ಕುರಿತು ತಾಲೂಕು ಮಟ್ಟದಲ್ಲಿ ಸಭೆ ಕರೆದು ಪ್ರತೀ ತಾಲೂಕು ತಹಶೀಲ್ದಾರರು, ತಾ.ಪಂ. ಅಧಿಕಾರಿಗಳು, ತಾಲೂಕು ಮಟ್ಟದ ಪೊಲೀಸ್ ಅ ಧಿಕಾರಿಗಳನ್ನು ಒಳಗೊಂಡು ಚರ್ಚಿಸಬೇಕು. ಆರ್ಥಿಕ ಗಣತಿಯ ಮುಖ್ಯ ಉದ್ದೇಶ ಏನು, ಯಾವ ಕಾರಣಕ್ಕಾಗಿ ಈ ಗಣತಿ ಮಾಡಲಾಗುತ್ತದೆ, ಮತ್ತು ಯಾವ ಪ್ರಶ್ನೆಗಳನ್ನು ಯಾಕೆ ಕೇಳಲಾಗುತ್ತದೆ ಎಂಬುದನ್ನು ಮೊದಲು ಜನರಿಗೆ ಮನವರಿಕೆ ಮಾಡಬೇಕು. ಇದೇ ಮೊದಲ ಬಾರಿಗೆ ಗಣತಿ ಕಾರ್ಯ ವನ್ನು ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳ ಲಾಗಿರುತ್ತದೆ. ಆ್ಯಪ್‌ನ ವೈಶಿಷ್ಟಗಳು ಯಾವುದು, ಅದನ್ನು ಉಪಯೋಗಿಸುವ ಕ್ರಮಗಳು ಯಾವುದು ಎಂಬ ಪ್ರತಿ ಮಾಹಿತಿ ಜನರಿಗೆ ದೊರಕಬೇಕು ಎಂದರು.
7ನೇ ಆರ್ಥಿಕ ಗಣತಿಯಲ್ಲಿ ಕಟ್ಟಡದ ವಿಧ, ಕುಟುಂಬ ವಿವರ, ಸಾಮಾಜಿಕ ಗುಂಪು ಮತ್ತು ಧರ್ಮ, ಆರ್ಥಿಕ ಚಟುವಟಿಕೆಯ ವಿಧ, ಕಾರ್ಯವಿಧಾನ ಸ್ವರೂಪ, ಮನೆಯಲ್ಲಿ ಆರ್ಥಿಕ ಚಟುವಟಿಕೆ ನಡೆಸುವ ಸದಸ್ಯರ ವಿವರ, ಹಣಕಾಸಿನ ಮೂಲ, ಹೂಡಿಕೆ, ವಾರ್ಷಿಕ ವ್ಯವಹಾರ, ಕೆಲಸಗಾರರ ಸಂಖ್ಯೆ, ಘಟಕದ ನೋಂದಣಿಯ ವಿವರ, ಉದ್ಯಮ ಮಾಲಕರ ಲಿಂಗವಾರು ಸಾಮಾಜಿಕ ಗುಂಪುವಾರು ಮಾಹಿತಿಗಳು, ಗಂಡು ಹೆಣ್ಣು ಕೆಲಸಗಾರರು, ಮಜೂರಿದಾರ ಕೆಲಸಗಾರರು, ಮಜೂರಿದಾರರಲ್ಲದ ಕೆಲಸ ಗಾರರು ಇವರ ಉದ್ದಿಮೆಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಗಳು ಈ ಗಣತಿಯಲ್ಲಿ ಸಂಗ್ರಹವಾಗುತ್ತವೆೆ. ಗಣತಿ ಸಂದರ್ಭದಲ್ಲಿ ಉತ್ತಮವಾದ ಸಹಕಾರ ನೀಡುವಂತೆ ಮಾಹಿತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.