Advertisement

ಒಬ್ಬರಿಗೆ ಯಜಮಾನಿಕೆ ಕೊಡಿ: ಬಾಬುರಾವ್‌ ಚಿಂಚನಸೂರ

10:34 AM Feb 05, 2018 | Team Udayavani |

ಶಹಾಬಾದ: ಕೋಲಿ ಸಮಾಜವನ್ನು ಎಸ್‌ ಟಿಗೆ ಸೇರಿಸುವುದಾಗಿ ಬಹಳಷ್ಟು ನಾಯಕರು ಮುಂದೆ ಬಂದು ದಾರಿ ತಪ್ಪಿಸುತ್ತಿದ್ದಾರೆ. ಇಂಥವರಿಂದ ಎಚ್ಚರಿಕೆಯಿಂದ ಇರಬೇಕು. ಸಮಾಜವನ್ನು ಎಸ್‌ಟಿಗೆ ಸೇರಿಸುವುದಕ್ಕೆ ಒಬ್ಬರಿಗೆ ಯಜಮಾನಿಕೆ ಕೊಡಿ ಎಂದು ಗಡಿನಾಡ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಹೇಳಿದರು.

Advertisement

ಗ್ರಾಮೀಣ ಕೋಲಿ ಸಮಾಜದ ವತಿಯಿಂದ ನಗರದ ಪಾರ್ವತಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವದಲ್ಲಿ ಅವರು ಮಾತನಾಡಿದರು. ರಾಜ್ಯ ಸರಕಾರದ ಒಪ್ಪಿಗೆ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಕೇಂದ್ರದಿಂದ ಕಡತ ನೂರು ಬಾರಿ ಹಿಂದಕ್ಕೆ ಬಂದರೂ ನೂರು ಬಾರಿ ಮತ್ತೆ ಮತ್ತೆ ಕಳುಹಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅಗತ್ಯವಿದ್ದಲ್ಲಿ ರಾಷ್ಟ್ರಪತಿ ಅವರನ್ನು ಭೇಟಿಯಾಗುವುದಾಗಿ ಹೇಳಿದರು. 

ಶಾಸಕ ಜಿ.ರಾಮಕೃಷ್ಣ ಮಾತನಾಡಿ, ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕೋಲಿ ಸಮಾಜಕ್ಕೆ 20 ಸಮುದಾಯ ಭವನ ನೀಡಲಾಗಿದೆ ಎಂದು ಹೇಳಿದರು. ತೊನಸನಳ್ಳಿ (ಎಸ್‌) ಅಲ್ಲಮ ಪ್ರಭು ಸಂಸ್ಥಾನ ಪೀಠದ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವನ ನೀಡಿದರು. 

ಸ್ನೇಹ ವಾಹಿನಿ ಕಾರ್ಯಾಧ್ಯಕ್ಷ ಡಾ| ಮಲ್ಲಿಕಾರ್ಜುನ ಮುಕ್ಕಾ, ಉಪನ್ಯಾಸಕ ಡಾ| ಮಲ್ಲಿನಾಥ ತಳವಾರ ಉಪನ್ಯಾಸ ನೀಡಿದರು, ಹೈ.ಕ. ಕೋಲಿ ಸಮಾಜದ ಅಧ್ಯಕ್ಷ ಬಸವರಾಜ ಬೂದಿಹಾಳ, ಯಾದಗಿರಿ ಜಿಲ್ಲಾ ಅಧ್ಯಕ್ಷ ಉಮೇಶ ಮುದ್ನಾಳ, ಜಿಲ್ಲಾ ಟೋಕರೆ ಕೋಳಿ ಸಮಾಜದ ಅಧ್ಯಕ್ಷ ಬಸವರಾಜ ಹರವಾಳ, ಈಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ, ತಮ್ಮಣ್ಣ ಡಿಗ್ಗಿ, ನಗರಸಭೆ ಮಾಜಿ ಅಧ್ಯಕ್ಷ ಶರಣಪ್ಪ ಹದನೂರ ಮಾತನಾಡಿದರು.

ಡಿಸಿಸಿ ಕಾರ್ಯದರ್ಶಿ ಶ್ಯಾಮ ನಾಟೀಕಾರ, ಬಿಜೆಪಿ ಮುಖಂಡ ನೀಲಕಂಠ ಪಾಟೀಲ, ನಗರಸಭೆ ಅಧ್ಯಕ್ಷೆ ಗೀತಾ ಎಸ್‌. ಬೊಗುಂಡಿ, ವೀರಶೈವ ಸಮಾಜದ ಅಧ್ಯಕ್ಷ ಅನೀಲ ಮರಗೋಳ, ನಿವೃತ್ತ ಡಿವೈಎಸ್‌ಪಿ ಸಿದ್ರಾಮಪ್ಪ ಸಣ್ಣೂರಕರ್‌, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಡಾ| ಅಹ್ಮದ್‌ ಪಟೇಲ್‌, ಸದಸ್ಯರಾದ ಸಾಬಣ್ಣ ಬೆಳಗುಂಪಿ, ಸೂರ್ಯಕಾಂತ ಕೋಬಾಳ, ತಾಪಂ ಸದಸ್ಯ ಮಲ್ಲಣ್ಣ ಸಣಮೋ, ಅಂಜನಕುಮಾರ ಜೀವಣಗಿ, ಸುರೇಶ ಮೆಂಗನ್‌, ನಾಗರಾಜ
ಮೇಲಗಿರಿ, ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೇಗನೂರ, ಜೆಡಿಎಸ್‌ ಕಾರ್ಯದರ್ಶಿ ಲೋಹಿತ ಕಟ್ಟಿ,  ಯವಾದಿಗಳಾದ
ರಘುವೀರಸಿಂಗ್‌ ಠಾಕೂರ, ಭೀಮಾಶಂಕರ ದಂಡಗುಲಕರ್‌, ಸಮಾಜದ ತಾಲೂಕ ಯುವ ಅಧ್ಯಕ್ಷ ಶಿವುಕುಮಾರ ಸುಣಗಾರ, ಸಾಬಣ್ಣ ಜಾಲಗಾರ ಪಾಲ್ಗೊಂಡಿದ್ದರು. ನಿಂಗಣ್ಣ ಹುಳಗೋಳ ಅಧ್ಯಕ್ಷತೆ ವಹಿಸಿದ್ದರು. ಸಿದ್ದಲಿಂಗಪ್ಪ ಖಣದಾಳ ಸ್ವಾಗತಿಸಿದರು. ಅಂಬರೀಷ ಪಾಟೀಲ ನಿರೂಪಿಸಿದರು. ಶಿವುಕುಮಾರ ತಳವಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next