Advertisement

ಮಕ್ಕಳ ಸದೃಢ ಆರೋಗ್ಯಕ್ಕೆ ಪೌಷ್ಟಿಕ ಆಹಾರ ನೀಡಿ

04:05 PM Nov 19, 2022 | Team Udayavani |

ದೊಡ್ಡಬಳ್ಳಾಪುರ: ಇಲ್ಲಿನ ಲಯನ್ಸ್‌ ಕ್ಲಬ್‌ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಲಯನ್ಸ್‌ ಮಕ್ಕಳ ಸ್ಪರ್ಧೆ(ಆರೋಗ್ಯವಂತ ಮಗು ಆಯ್ಕೆ)ಮತ್ತು ಡಯಾಲಿಸಿಸ್‌ ಮಾಸಾಚರಣೆ ಕಾರ್ಯಕ್ರಮ ನಗರದ ಎಪಿಎಂಸಿ ಸಮೀಪದ ಲಯನ್ಸ್‌ ಕಟ್ಟಡದಲ್ಲಿ ನಡೆಯಿತು.

Advertisement

ಈ ವೇಳೆ ಮಕ್ಕಳ ತಜ್ಞೆ ಡಾ.ಪದ್ಮ ಪ್ರಕಾಶ್‌ ಮಾತನಾಡಿ, ಮಕ್ಕಳು ದೈಹಿಕವಾಗಿಯಷ್ಟೇ ಅಲ್ಲದೇ ಮಾನಸಿಕವಾಗಿಯೂ ಸದೃಢರಾಗಿರಬೇಕಿದೆ. ಈ ದಿಸೆಯಲ್ಲಿ ಮಕ್ಕಳಿಗೆ‌ ಪೌಷ್ಟಿಕ ಆಹಾರ ನೀಡುವುದು, ಅವರ ಚಟುವಟಿಕೆಗಳನ್ನು ಗಮನಿಸಿ, ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ವೈದ್ಯರ ಬಳಿ ಸಲಹೆ ಪಡೆಯಬೇಕಿದೆ ಎಂದು ತಿಳಿಸಿದರು.

ಪೋಷಕರ ಕಾಳಜಿ ಮುಖ್ಯ: ಲಯನ್ಸ್‌ ಕ್ಲಬ್‌ ಅಧ್ಯಕ್ಷ ಎಸ್‌.ಪ್ರಕಾಶ್‌ ಮಾತನಾಡಿ, ಲಯನ್ಸ್‌ ಕ್ಲಬ್‌ ವತಿಯಿಂದ ಪ್ರತಿವರ್ಷ ಆರೋಗ್ಯಕರ ಮಕ್ಕಳ ಸ್ಪರ್ಧೆಗಳನ್ನು ಏರ್ಪಡಿಲಾಗುತ್ತಿದ್ದು, ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಎಲ್ಲಾ ಮಕ್ಕಳು ಸಹ ಚೂಟಿ ಉಳ್ಳವರೇ. ಆದರೆ ಅವರ ಚಟುವಟಿಕೆ, ಕ್ರಿಯಾಶೀಲತೆ, ಆರೋಗ್ಯದ ಬಗ್ಗೆ ಪೋಷಕರ ಕಾಳಜಿ ಮುಖ್ಯವಾಗಿದೆ. ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ ಎಂದರು.

ಬಹುಮಾನ ಪಡೆದ ಮಕ್ಕಳು: ಒಂದು ವರ್ಷ, ಎರಡು ವರ್ಷ ಹಾಗೂ ಮೂರು ವರ್ಷ ಈ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಿತು. ವೈದ್ಯರಾದ ಡಾ.ಪದ್ಮಪ್ರಕಾಶ್‌, ಡಾ.ಚರಣ್‌, ಡಾ. ಇಂದಿರಾ ಶ್ಯಾಮ ಪ್ರಸಾದ್‌ ತೀರ್ಪುಗಾರರಾಗಿದ್ದರು.

ಮೂರು ವಿಭಾಗಗಳಲ್ಲಿ 2022ನೇ ಲಯನ್ಸ್‌ ಅತ್ಯುತ್ತಮ ಮಗು ಪ್ರಶಸ್ತಿಯನ್ನು ಅವಳಿ ಮಕ್ಕಳಾದ ದೃತಿ.ಪಿ ಹಾಗೂ ದ್ವಿತಿ.ಪಿ ಪಡೆದರು. 1 ವರ್ಷದವರೆಗಿನ ಮಕ್ಕಳ ವಿಭಾಗದಲ್ಲಿ ರುತ್ವ.ಪಿ(ಪ್ರಥಮ), ಪೂರ್ವಿಕಾ(ದ್ವಿತೀಯ), ದಯಾಶಂಕರ್‌ (ತೃತೀಯ), 2ವರ್ಷದ ಮಕ್ಕಳ ವಿಭಾಗದಲ್ಲಿ ಹನ್ರಿತಾ.ಪಿ.ಗೌಡ (ಪ್ರಥಮ), ಅನುಷ್ಕಾ.ಡಿ. (ದ್ವಿತೀಯ), ಸುಘೋಷ್‌.ಎಂ.ಎಸ್‌ (ತೃತೀಯ), 3 ವರ್ಷದ ಮಕ್ಕಳ ವಿಭಾಗದಲ್ಲಿ ಸಾಯಿಸತ್ಯ (ಪ್ರಥಮ), ಸಾಯಿಶ್ರೀ (ದ್ವಿತೀಯ), ರಾಜೇಶ್ವರಿ (ತೃತೀಯ)ಬಹುಮಾನಗಳನ್ನು ಪಡೆದರು.

Advertisement

ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್‌ ಅಧ್ಯಕ್ಷ ಹುಲಿಕಲ್‌ ನಟರಾಜ್‌, ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಡಿ.ಕೆ.ಸೋಮಶೇಖರ್‌ ಖಜಾಂಚಿ ಆರ್‌.ಎಸ್‌. ಮಂಜುನಾಥ್‌, ಸಹ ಕಾರ್ಯದರ್ಶಿ ರೇಖಾ ವೆಂಕಟೇಶ್‌, ಲಯನ್ಸ್‌ ಚಾರಿಟೀಸ್‌ ಟ್ರಸ್ಟ್‌ ಸಹ ಕಾರ್ಯದರ್ಶಿ ಪಿ.ಸಿ.ವೆಂಕಟೇಶ್‌, ಖಜಾಂಚಿ ಡಿ.ಎಸ್‌.ಸಿದ್ದಣ್ಣ, ಲಯನ್‌ ಎಸ್‌.ನಟರಾಜ್‌, ಲಯನ್‌ ಮೋಹನ್‌ ಕುಮಾರ್‌, ಲಯನ್‌ ರಾಜಶೇಖರ್‌, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ. ಶ್ರೀಕಾಂತ ಹಾಗೂಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next