Advertisement

ರಾಷ್ಟ್ರೀಯ ಹಬ್ಬಕ್ಕೆ ಬಾರದ ಅಧಿಕಾರಿಗೆ ನೋಟಿಸ್‌ ನೀಡಿ

11:49 AM Aug 04, 2019 | Team Udayavani |

ಮೂಡಲಗಿ: ಸ್ವಾತಂತ್ರೋತ್ಸವ, ಪ್ರಜಾರಾಜ್ಯೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಇನ್ನಿತರ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಹಾಗೂ ಸರಕಾರದಿಂದ ಜರುಗುವ ಮಹಾತ್ಮರ ಜಯಂತಿಗಳಲ್ಲಿ ಭಾಗವಹಿಸದ ಇಲಾಖೆ ಅಧಿಕಾರಿಗಳಿಗೆ ನೋಟಿಸ್‌ ನೀಡಿ ಕ್ರಮ ಜರುಗಿಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಎಸ್‌.ಆರ್‌. ಸೋನವಾಲ್ಕರ ಆಗ್ರಹಿಸಿದರು.

Advertisement

ಪುರಸಭೆ ಭವನದಲ್ಲಿ ಸ್ವಾತಂತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾರ್ಯಕ್ರಮಗಳು ಕೆಲವು ಮುಖಂಡರಿಗೆ, ಪುರಸಭೆ ಮತ್ತು ಶಿಕ್ಷಣ ಇಲಾಖೆಗೆ ಹಾಗೂ ಪತ್ರಕರ್ತರಿಗೆ ಮಾತ್ರ ಶಿಮೀತವಾಗಿವೆ. ಇಂತಹ ಕಾರ್ಯಕ್ರಮಗಳಿಗೆ ಮತ್ತು ಪೂರ್ವಭಾವಿ ಸಭೆಗಳಿಗೆ ಭಾಗವಹಿಸದ ಪೊಲೀಸ್‌, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪಶು ಇಲಾಖೆ, ಸಂಘ-ಸಂಸ್ಥೆಗಳಿಗೆ ಪೂರ್ವಭಾವಿಯಾಗಿ ಮಾಹಿತಿ ನೀಡಿ ಭಾಗವಹಿಸುವಂತೆ ಕ್ರಮ ಕೈಕೊಳ್ಳಬೇಕೆಂದು ತಹಶೀಲ್ದಾರರಿಗೆ ಒತ್ತಾಯಿಸಿದರು.

ತಹಶೀಲ್ದಾರ್‌ ಮುರಳಿಧರ ತಳ್ಳಿಕೇರಿ ಮಾತನಾಡಿ, ಕ್ರೀಡಾಕೂಟದಲ್ಲಿ ವಿಜಯ ಶಾಲಿಯಾದ ಪ್ರತಿಭೆಗಳಿಗೆ ಕಂದಾಯ ಇಲಾಖೆ ಮತ್ತು ಪುರಸಭೆಯಿಂದ ಸತ್ಕರಿಸುವುದಾಗಿ ಹೇಳಿದರು. ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗುಳಖೋಡ ಮಾತನಾಡಿ, ಹಿಂದಿನ ವರ್ಷದ ನಡಾವಳಿಗಳನ್ನು ಓದಿದರು. ಪದ್ಧತಿಯಂತೆ ಪ್ರಭಾತಪೇರಿ, ಸಾರ್ವಜನಿಕ ಸಮಾರಂಭದಲ್ಲಿ ತಹಶೀಲ್ದಾರರು ಸಂದೇಶ ವಾಚನ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಗಣ್ಯರಾದ ಎಸ್‌.ಆರ್‌. ಸೋನವಾಲ್ಕರ ಸ್ವಾತಂತ್ರೋತ್ಸವ ಕುರಿತು ಮಾತನಾಡಲು ತೀರ್ಮಾನಿಸಲಾಯಿತು. ಎಸ್‌.ಎ. ನಾಡಗೌಡರ, ಎಸ್‌.ಎಸ್‌. ಯಲಿಗಾರ, ಎಸ್‌.ಜಿ. ಗೋಡಿಗೌಡರ, ಕೆ.ಟಿ. ಗಾಣಿಗೇರ ಮತ್ತು ವಿವಿಧ ಶಾಲೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next