ಮಂಗಳೂರು : ಸಂಸದರಾಗಿ ನಳಿನ್ ಕುಮಾರ್ ಕಟೀಲು 10 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಮತ್ತು ಸಾಧನೆಗಳ ಬಗ್ಗೆ ರಿಪೋರ್ಟ್ ಕಾರ್ಡ್ ನೀಡಲಿ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಳಿನ್ ಅವರು ಸಂಸದನಾಗಿ ಅಭಿವೃದ್ಧಿ ಯೋಜನೆಗಳನ್ನು ತಂದಿಲ್ಲ ಎಂದು ಟೀಕಿಸಿದರು.
ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್ ಯುವಕ, ಹಿಂದೂ ಸಂಸ್ಕೃತಿ, ಸಂಪ್ರ ದಾಯಕ್ಕೆ ಬದ್ಧನಾಗಿರುವ, ಜಾತ್ಯತೀತ ತತ್ವದಲ್ಲಿ ನಂಬಿಕೆ ಇರಿಸಿಕೊಂಡು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಮಿಥುನ್ ರೈ ಅವರನ್ನು ಒಗ್ಗಟ್ಟಿನಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಜನತೆ ಅವಕಾಶ ಮಾಡಿಕೊಡ ಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದರು.
ಮಿಥುನ್ ರೈ ಅವರಿಗೆ ಅವಕಾಶ ಮಾಡಿಕೊಡಿ ಎಂದು ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರಲ್ಲೂ ವಿನಂತಿ ಮಾಡಿ ಕೊಳ್ಳುತ್ತಿದ್ದೇನೆ ಎಂದರು.
ಹರೀಶ್ ಕುಮಾರ್, ಮೊದಿನ್ ಬಾವಾ, ಶಶಿಧರ ಹೆಗ್ಡೆ, ಎ.ಸಿ. ವಿನಯರಾಜ್, ಮಹಾಬಲ ಮಾರ್ಲ, ಪುರುಷೋತ್ತಮ ಚಿತ್ರಾಪುರ, ಪ್ರಸಾದ್‌ರಾಜ್ ಕಾಂಚನ್, ಎ.ಸಿ. ಭಂಡಾರಿ, ಕೋಡಿಜಾಲ್ ಇಬ್ರಾಹಿಂ ಇದ್ದರು.
ಐಟಿಯವರಿಂದ ನೋಟಿಸ್; ಉತ್ತರಿಸುತ್ತೇವೆ
ಐಟಿ ದಾಳಿಯ ಬಗ್ಗೆ ಪ್ರತಿಭಟನೆಗೆ ಐಟಿ ಇಲಾಖೆಯಿಂದ ನೋಟಿಸ್ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು, ಸಿಎಂ ಸೇರಿದಂತೆ ಕೆಲವು ಮಂದಿಗೆ ನೋಟಿಸ್ ಬಂದಿದೆ. ಉತ್ತರ ನೀಡುತ್ತೇವೆ. ನಾವು ಐಟಿ ಇಲಾಖೆ ವಿರುದ್ಧ ಪ್ರತಿಭಟನೆ ಮಾಡಿಲ್ಲ. ಅಧಿಕಾರದ ದುರುಪಯೋಗ ಆಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಅಲ್ಲಿಗೆ ಹೋಗಿದ್ದೆವು. ಕಚೇರಿ ಆವರಣ ಪ್ರವೇಶಿಸಿಲ್ಲ ಎಂದರು.