ಕಲಬುರಗಿ: ಹಾಲು ಸಂಪೂರ್ಣ ಆಹಾರ. ಅನೇಕ ಪೌಷ್ಟಿಕ ಗುಣ ಹೊಂದಿದೆ. ಮೂಢನಂಬಿಕೆ, ಅವೈಜ್ಞಾನಿಕತೆ ಪರಿಣಾಮವಾಗಿ ಹಾಲನ್ನು ನಾಗರಪಂಚಮಿ ದಿನದಂದು ಹುತ್ತಕ್ಕೆ, ಇಲ್ಲವೇ ಕಲ್ಲಿನ ನಾಗರಕ್ಕೆ ಸುರಿದು ನೆಲದ ಪಾಲು ಮಾಡುತ್ತಿರುವುದನ್ನು ನಿಲ್ಲಿಸಿ ಎಂದು ಸಾರಂಗಮಠದ ಜಗದ್ಗುರು ಪೂಜ್ಯ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ನುಡಿದರು.
ಬಸವ ಪಂಚಮಿ ಅಂಗವಾಗಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ನಗರದ ಅಂಧಮಕ್ಕಳ ಸರ್ಕಾರಿ ಶಾಲಾ ಆವರಣದಲ್ಲಿ ಮಕ್ಕಳಿಗೆ ಹಾಲು, ಹಣ್ಣು ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ವಚನಗಳಲ್ಲಿ ಅಡಗಿರುವ ವೈಚಾರಿಕತೆಯನ್ನು ನಿಜಜೀವನದಲ್ಲಿ ಅಳವಡಿಸಿಕೊಂಡು ಮನೆ ಹಾಗೂ ಮನಗಳನ್ನು ಶುದ್ದಗೊಳಿಸಬೇಕೆಂದು ಹೇಳಿದರು.
ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಚವದಾಪೂರ ಹಿರೇಮಠದ ಪೂಜ್ಯ ರಾಜಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಹಾಗರಗುಂಡಗಿ ಶ್ರೀಮಠದ ಪೂಜ್ಯ ಶಿವಾನಂದ ಸ್ವಾಮೀಜಿ, ಫಿರೋಜಾಬಾದ ಶ್ರೀಗಳು, ಮೇಯರ್ ಶರಣಕುಮಾರ ಮೋದಿ, ಜಿ.ಪಂ. ಉಪಾಧ್ಯಕ್ಷೆ ಶೋಭಾ ಸಿರಸಗಿ, ಪಾಲಿಕೆ ಪ್ರತಿಪಕ್ಷ ನಾಯಕ ಆರ್.ಎಸ್.ಪಾಟೀಲ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಆನಂದ ಪಾಟೀಲ ಜವಳಿ, ಕಲ್ಯಾಣಪ್ಪ ಪಾಟೀಲ ಮಳಖೇಡ, ಮಲ್ಲಣ್ಣ ನಾಗರಾಳ, ಶರಣಪ್ಪ ನಿರಗುಡಿ, ನಾಟಕ ನಿರ್ದೇಶಕ ಬಿ.ಸಂದೀಪ,
ಪರಮೇಶ್ವರ ಶೆಟಕಾರ, ಡಾ| ಬಾಬುರಾವ್ ಶೇರಿಕಾರ, ಶ್ರೀಕಾಂತ ಪಾಟೀಲ ತಿಳಗೂಳ, ಡಾ| ನಾಗರತ್ನಾ ದೇಶಮಾನೆ ಹಾಗೂ ಇತರರಿದ್ದರು.