Advertisement

ದಿನೇಶ್‌ ಕನ್ಯಾಡಿಗೆ ನ್ಯಾಯ ಕೊಡಿ: ಎಸ್‌ಡಿಪಿಐ ನ್ಯಾಯ

02:00 PM Mar 30, 2022 | Team Udayavani |

ಮಹಾನಗರ: ‘ದಿನೇಶ್‌ ಕನ್ಯಾಡಿಗೆ ನ್ಯಾಯ ಕೊಡಿ’ ಎಂಬ ಬೇಡಿಕೆಯನ್ನು ಮುಂದಿಟ್ಟು ಎಸ್‌ಡಿಪಿಐ ವತಿಯಿಂದ ಮಂಗಳವಾರ ಬೆಳ್ತಂಗಡಿಯಿಂದ ನಗರದ ಜ್ಯೋತಿ ಜಂಕ್ಷನ್‌ ತನಕ ವಾಹನ ಜಾಥಾ ಹಾಗೂ ಅಲ್ಲಿಂದ ಕ್ಲಾಕ್‌ ಟವರ್‌ ಜಂಕ್ಷನ್‌ ತನಕ ಕಾಲ್ನಡೆ ಜಾಥಾ ನಡೆಯಿತು.

Advertisement

ಕ್ಲಾಕ್‌ ಟವರ್‌ ಜಂಕ್ಷನ್‌ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್‌ ಮೈಸೂರು, ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಅಲ್ಫೊನ್ಸ್‌ ಫ್ರಾಂಕೋ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ ಪ್ರಸಾದ್‌, ರಾಜ್ಯ ಕಾರ್ಯದರ್ಶಿ ಆನಂದ ಮಿತ್ತಬೈಲ್‌ ಮಾತನಾಡಿದರು.

ಮನವಿ

ಹಲ್ಲೆಗೊಳಗಾಗಿ ಸಾವನ್ನಪ್ಪಿದ ದಿನೇಶ್‌ ಕನ್ಯಾಡಿ ಕುಟುಂಬಕ್ಕೆ ಸರಕಾರ 2 ಎಕರೆ ಜಮೀನು ನೀಡುವುದು, 50ಲಕ್ಷ ರೂ. ಪರಿಹಾರ, ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ಉದ್ಯೋಗ ದೊರಕಿಸಿಕೊಡ ಬೇಕು ಹಾಗೂ ಈ ಪ್ರಕರಣದಲ್ಲಿ ಆರೋಪಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸ ಬೇಕೆಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಪರವಾಗಿ ಮಂಗಳೂರು ಸಹಾಯಕ ಆಯುಕ್ತರು ಮನವಿ ಸ್ವೀಕರಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಲತೀಫ್ ಪುತ್ತೂರು, ರಾಜ್ಯ ಕಾರ್ಯದರ್ಶಿಗಳಾದ ಅಪ್ಸರ್‌ ಕೊಡ್ಲಿಪೇಟೆ, ಅಶ್ರಫ್ ಮಾಚಾರ್‌, ಶಾಫಿ ಬೆಳ್ಳಾರೆ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್‌ ಸಾದಾತ್‌ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಅಕ್ಬರ್‌ ಬೆಳ್ತಂಗಡಿ, ಶಾಕಿರ್‌ ಅಳಕೆ ಮಜಲು, ಸುಹೈಲ್ ಪಳ್ನಿರ್‌, ರಾಜ್ಯ ಸಮಿತಿ ಸದಸ್ಯ ಜಲೀಲ ಕೃಷ್ಣಾಪುರ, ರಿಯಾಝ ಕಡಂಬು, ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಇಬ್ರಾಹಿಂ ಸಾಗರ್‌, ಇರ್ಷಾದ್‌ ಅಜ್ಜಿನಡ್ಕ, ಶಾಹುಲ್ ಎಸ್‌. ಎಚ್‌, ನಿಸಾರ್‌ ಕುದ್ರಡ್ಕ, ಯಾಸೀನ್‌ ಅರ್ಕುಳ, ಆಸಿಫ್ ಕೋಟೆಬಾಗಿಲು, ಇಕ್ಬಾಲ್ ಬೆಳ್ಳಾರೆ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next