Advertisement

ಸಮಯಕ್ಕೆ ಮಹತ್ವ ನೀಡಿ: ಶಿರೂರ

04:54 PM Apr 18, 2018 | |

ಇಳಕಲ್ಲ: ವಿದ್ಯಾರ್ಥಿ ಜೀವನದಲ್ಲಿ ಮರಳಿ ಬರಲಾರದು ಸಮಯವೊಂದೆ ಅದಕ್ಕಾಗಿ ಮೊದಲು ಸಮಯಕ್ಕೆ ಮಹತ್ವ ನೀಡಬೇಕು. ಅಂದರೆ ಮಾತ್ರ ನೀವು ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಜಮಖಂಡಿ ತಾಲೂಕಿನ ಹುನೂರ ಸರಕಾರಿ ಪ್ರಥಮ
ದರ್ಜೆ ಕಾಲೇಜಿನ ಪ್ರಾಚಾರ್ಯೆ ಸುನಂದಾ ಶಿರೂರ ಹೇಳಿದರು.

Advertisement

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2017-18ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಮುಕ್ತಾಯ ಸಮಾರಂಭ ಹಾಗೂ ಪದವಿ ತರಗತಿಗಳ ಅಂತಿಮ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಾವು ಯಾವುದೇ ಪರಿಸರಕ್ಕೆ ಹೊಂದಿಕೊಂಡಾಗ ಅದನ್ನು ಬಿಡಬೇಕಾದರೆ ಬಹಳ ಕಷ್ಟವೆನಿಸುವುದು. ಅಂತಹ ಒಂದು ಭಾವನಾತ್ಮಕ ಸಂಬಂಧ ಬೆಳೆಯುವುದು. ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಮಹಾವಿದ್ಯಾಲಯಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಯಾರದೋ ಒತ್ತಡಕ್ಕೊಳಗಾಗಿ ನಿಮ್ಮ ಜೀವನದ ಗುರಿಯನ್ನು ಬದಲಿಸಿಕೊಳ್ಳದೆ, ನಿಮ್ಮ ಮುಂದಿನ ಜೀವನವನ್ನು ನೀವೇ ರೂಪಿಸಿಕೊಳ್ಳುವಂತ ಸ್ವತಂತ್ರ ವಿಚಾರ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. 

ಪ್ರಾಚಾರ್ಯ ನಾಗರಾಜ ಮುದಗಲ್ಲ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಹೊಂದಿರುವ ಸಮಾನ ಮನಸ್ಕ ಗುಣಗಳನ್ನು ಹೊಂದಿರುವಂತವರ ಗೆಳೆತನ ಮಾಡಿ ಸಮಾಜದಲ್ಲಿ ಗೌರವಯುತ ಸ್ಥಾನದಲ್ಲಿ ಗುರುತಿಸುವಂತವರಾಗಿರಿ ಎಂದರು. ಇದೇ ಸಂದರ್ಭದಲ್ಲಿ 2017-18ನೇ ಸಾಲಿನ ಕಬಡ್ಡಿ ಹಾಗೂ ಖೋಖೋ ಪಂದ್ಯಗಳಲ್ಲಿ ಯುನಿವರ್ಸಿಟಿ ಬ್ಲೂಗಳಾದ ವಿದ್ಯಾರ್ಥಿಗಳನ್ನು
ಸನ್ಮಾನಿಸಲಾಯಿತು. ನಾಗರತ್ನ, ಸಂಗಮೇಶ, ವಿದ್ಯಾಶ್ರೀ ಹಾಗೂ ನಜೀದಾಬೇಗಂ ಅನಿಸಿಕೆ ವ್ಯಕ್ತಪಡಿಸಿದರು. ಕೃಷ್ಣ ಹೊನ್ನಳ್ಳಿ, ನಜೀದಾಬೇಗಂ ಉಪಸ್ಥಿತರಿದ್ದರು.

ದೈಹಿಕ ಸಂಯೋಜಕ ನೀಲಪ್ಪ ಕುರಿ ಸ್ವಾಗತಿಸಿದರು. ಡಾ.ಲಿಂಗಪ್ಪ ಗಗ್ಗರಿ ವರದಿ ವಾಚನ ಓದಿದರು. ಐಕ್ಯುಎಸಿ ಸಂಯೋಜಕಿ ವಿದ್ಯಾವತಿ ಗೋಟೂರ ವಂದಿಸಿದರು. ಎಂ.ಬಿ. ಒಂಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next