Advertisement

ಶ್ರೀರಂಗಪಟ್ಟಣದ ದಸರಾಗೂ ಪ್ರಾಮುಖ್ಯತೆ ನೀಡಿ

05:15 PM Oct 05, 2019 | Team Udayavani |

ಶ್ರೀರಂಗಪಟ್ಟಣ: ಮೈಸೂರು ದಸರಾ ನಡೆಯುವವರೆಗೂ ಪಟ್ಟಣದಲ್ಲಿ ಶಾಶ್ವತವಾಗಿ ದಸರಾ ಆಚರಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌ ಅಶೋಕ್‌ ಹೇಳಿದರು.

Advertisement

ಪಟ್ಟಣದಲ್ಲಿ ನಡೆಯುತ್ತಿರುವ ದಸರಾ ಅಂಗವಾಗಿ ಶ್ರೀರಂಗ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರವಾಸಿ ತಾಣ ಅಭಿವೃದ್ಧಿಗೆ ಕ್ರಮ: ಶ್ರೀರಂಗಪಟ್ಟಣದಲ್ಲಿ ವಿವಿಧ ದೇವಾಲಯ, ಪ್ರವಾಸಿ ತಾಣಗಳು ಸೇರಿದಂತೆ ಸಾಂಸ್ಕೃತಿಕವಾದ ಸ್ಥಳಗಳವೆ. ಸರ್ಕಾರದಿಂದ ಇವುಗಳ ಅಭಿವೃದ್ಧಿಪಡಿಸಿದರೆ, ಇಲ್ಲಿನ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಜತೆಗೆ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಿ ದೇಶ ವಿದೇಶದಲ್ಲಿ ಹೆಸರುಗಳಿಸುತ್ತದೆ. ವಿಶ್ವ ಪ್ರಸಿದ್ಧ ಕೆಆರ್‌ಎಸ್‌ನಲ್ಲಿ ದಸರಾ ಕಾರ್ಯಕ್ರಮದಲ್ಲಿ ನಡೆಸುವಂತೆ ನಿರಂತರ ದೋಣಿ ವಿಹಾರ ನಡೆಯಬೇಕು. ಇದರಿಂದ ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗುವಂತೆ ಪ್ರವಾಸೋದ್ಯಮ ಸಚಿವರ ಸಿ.ಟಿ. ರವಿ ಅವರಿಗೆ ಹೇಳಿದ್ದೇನೆ ಎಂದರು.

ವೋಟು ಕೇಳ್ಳೋಕೆ ಬಂದಿಲ್ಲ: ದಸರಾ ಆಚರಣೆಗೆ ಸರ್ಕಾರದ ಪರವಾಗಿ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಬಂದಿದ್ದೇನೆ. ನಾನು ಇಲ್ಲಿಯವನೇ, ಹೊರಗಿನವನಲ್ಲ.ನಾನು ವೋಟು ಕೇಳ್ಳೋಕೆ ಇಲ್ಲಿಗೆ ಬಂದಿಲ್ಲ. ಅಭಿವೃದ್ಧಿ ಕೆಲಸಕ್ಕೆ ಬಂದಿದ್ದೇನೆ. ಹೊಸದಾಗಿ ಬಂದಿಲ್ಲ. 10 ವರ್ಷಗಳ ಹಿಂದೆಯೇ ಇಲ್ಲಿ ಕೆಲಸ ಮಾಡಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ನನ್ನನ್ನು ಇಲ್ಲಿಗೆ ಉಸ್ತುವಾರಿ ಮಾಡಿದ್ದರು. ಆಗಲೇ ಇಲ್ಲಿ ಜನರ ಮುಖಗಳನ್ನು ಗುರುತು ಮಾಡಬಲ್ಲೆ. ಅಂಬರೀಶ್‌ ನನಗೆ ಸ್ನೇಹಿತರು. ಅವರು ಇರಬೇಕಿತ್ತು. ಅವರು ಒರಟಾಗಿ ಮಾತನಾಡಿದರೂ ಮೃದು ಹೃದಯಿ. ಅಂತಹ ಅಂಬರೀಶ್‌ ಈಗ ಇರಬೇಕಿತ್ತು ಎಂದು ಸ್ಮರಿಸಿದರು. ಆದರೂ ಅವರ ಪತ್ನಿ ಜಿಲ್ಲೆಯ ಸಂಸದೆ ಸುಮಲತಾ ಕೂಡ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್‌ ಮಾತನಾಡಿ, ಪಟ್ಟಣದಲ್ಲಿ 1610ರಲ್ಲಿ ದಸರಾ ಆರಂಭವಾಗಿದೆ. ವರ್ಷದಿಂದ ವರ್ಷಕ್ಕೆ ಮೆರಗು ಪಡೆಯುತ್ತಿದೆ. ಯುವ ದಸರಾ, ಫ‌ಲ ಪುಷ್ಪ ಪ್ರದರ್ಶನ, ಯೋಗ ದಸರಾ, ಕ್ರೀಡಾ ದಸರಾ ಸೇರಿ 25 ದಸರಾ ಚಟುವಟಿಕೆಗಳು ನಡೆಯುತ್ತಿವೆ ಎಂದರು.

Advertisement

ಅಪರಧಿಕಾರಿ ಟಿ. ಯೋಗೇಶ್‌, ಉಪವಿಭಾಗಾಧಿಕಾರಿ ಶೈಲಜಾ, ಜಿಪಂ ಸಿಇಒ ಯಾಕ್ಕೀಗೌಡ, ಎಸ್ಪಿ ಪರಶುರಾಂ, ಜ್ಯೋತಿಷಿ ಡಾ.ಭಾನುಪ್ರಕಾಶ್‌ ಶರ್ಮಾ, ಜಿಪಂ ಸದಸ್ಯ ಎಂ.ಸಿ. ಮರಿಯಪ್ಪ, ಪ್ರಭಾವತಿ, ತಾಪಂ ಅಧ್ಯಕ್ಷೆ ಮಂಜುಳಾ ಬಸವರಾಜು, ತಾಪಂ ಸದಸ್ಯ ದೇವರಾಜು, ವಿಜಯಲಕ್ಷ್ಮೀ, ಬಿಜೆಪಿ ಮುಖಂಡ ಕೆ. ಬಲರಾಂ, ಸಮಿತಿ ಸದಸ್ಯ ಟಿ.ಶ್ರೀಧರ್‌, ಡಿಎಫ್ಒ ಶಿವರಾಜು, ತಹಶೀಲ್ದಾರ್‌ ನಾಗೇಶ್‌, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next