Advertisement
ಶನಿವಾರ ಬೆಂಗಳೂರಿನಲ್ಲಿ ನಡೆದ ಜಿಎಸ್‌ಟಿ ಸಮಿತಿಯ 4ನೇ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ವ್ಯವಸ್ಥೆಗೆ ಜನರು ಹೊಂದಿಕೊಳ್ಳುತ್ತಿದ್ದಾರೆ. ಜನ ಸೇರಿ ವ್ಯಾಪಾರ-ವ್ಯವಹಾರ ದೂರುಗಳ ಸಂಖ್ಯೆಯೂ ಕಡಿಮೆಯಾಗಿದೆ. ಜಿಎಸ್‌ಟಿಯಡಿ ತೆರಿಗೆ ಪ್ರಮಾಣ ಇಳಿಕೆಯ ಲಾಭ ಗ್ರಾಹಕರಿಗೆ ಸಿಗಬೇಕು. ಉತ್ಪಾದಕರು ಹಾಗೂ ಡೀಲರ್‌ಗಳು ತೆರಿಗೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ವಂಚಿಸುವುದು ಕಂಡುಬಂದರೆ, ರಾಜ್ಯ ಜಿಎಸ್‌ಟಿ ಪರಿಶೀಲನಾ ಸಮಿ ತಿಗೆ ದೂರು ನೀಡಬಹುದು. ಆ ಮೂಲಕ ಕ್ರಮ ತೆಗೆದು ಕೊಳ್ಳಲಾಗುತ್ತದೆ ಎಂದು ಹೇಳಿದರು.
Related Articles
Advertisement
ದೇಶದ ಎಲ್ಲ ರಾಜ್ಯಗಳ ಜಿಎಸ್‌ಟಿ ಸರಾಸರಿ ತೆರಿಗೆ ಕೊರತೆ ಆದಾಯ ಇಳಿಕೆಯಾಗಿದೆ. 2016-17ನೇ ಸಾಲಿನಲ್ಲಿ ಕೇಂದ್ರ, ರಾಜ್ಯಗಳ ಎಲ್ಲ ತೆರಿಗೆಗಳಿಂದ ಒಟ್ಟು 8.8 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. 2017-18ನೇ ಸಾಲಿನಲ್ಲಿ ಜಿಎಸ್‌ಟಿಯಿಂದ ಶೇ.14ರಷ್ಟು ಪ್ರಗತಿ ನಿರೀಕ್ಷಿಸಿದ್ದೇವೆ. 11.5 ಲಕ್ಷ ಕೋಟಿ ರೂಪಾಯಿ ತೆರಿಗೆ ಬರಬೇಕಿದ್ದು, ತಿಂಗಳಿಗೆ 96 ಸಾವಿರ ಕೋಟಿ ರೂ.ತೆರಿಗೆ ಸಂಗ್ರಹಿಸಬೇಕಿದೆ. ಪ್ರಸ್ತುತ 92 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹಿಸುತ್ತಿದ್ದೇವೆ ಎಂದು ಸುಶೀಲ್ ಕುಮಾರ್ ಮೋದಿ ಹೇಳಿದರು.
ತಜ್ಞ ಎಂಜಿನಿಯರ್‌ಗಾಗಿ ಮನವಿ: ಜಿಎಸ್‌ಟಿ ನೆಟ್‌ವರ್ಕ್ ಸುಧಾರಿಸುವ ನಿಟ್ಟಿನಲ್ಲಿ ನುರಿತ ಮತ್ತು ಅನುಭವಿ ಎಂಜಿನಿಯರ್‌ಗಳನ್ನು ಒದಗಿಸುವಂತೆ ಇನ್ಫೋಸಿಸ್‌ಗೆ ಮನವಿ ಮಾಡಿದ್ದೇವೆ. ನೆಟ್‌ವರ್ಕ್ ಸುಧಾರಣೆಗೆ 100 ಎಂಜಿನಿಯರ್‌ಗಳನ್ನು ನೇಮಿಸಲಾಗಿದೆ. 30 ರಾಜ್ಯಗಳ ನುರಿತ ಅನುಭವಿ ಎಂಜಿನಿಯರ್‌ಗಳು ಒಟ್ಟಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಲಾಭ ನಿಯಂತ್ರಣ ಪ್ರಾಧಿಕಾರಕ್ಕೇ ಅಧಿಕಾರ
ಜಿಎಸ್‌ಟಿ ಮಂಡಳಿಯ 23ನೇ ಸಭೆಯಲ್ಲಿ ಸುಮಾರು 200ಕ್ಕೂ ಅಧಿಕ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗಿತ್ತು. ಇದಾದ ಬಳಿಕ ಕೇಂದ್ರ ಸಚಿವ ಸಂಪುಟ ಸಭೆ ಲಾಭ ನಿಯಂತ್ರಣ ಪ್ರಾಧಿಕಾರ ರಚನೆಗೆ ಅಸ್ತು ನೀಡಿದೆ. ವಸ್ತುವಿನ ತೆರಿಗೆ ಇಳಿಕೆ ಮಾಡಿದ್ದರೂ ಕಡಿಮೆಯಾದ ಬೆಲೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೇ ಇರುವು ದಾಗಿದೆ. ಈ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಭಾರೀ ಮೊತ್ತದ ದಂಡ, ಜಿಎಸ್‌ಟಿಯಡಿ ನೀಡಲಾದ ಅನುಮತಿಯನ್ನೇ ರದ್ದು ಮಾಡಬಹುದಾಗಿದೆ.