Advertisement

ಗಣೇಶೋತ್ಸವ ಮಾಹಿತಿ ನೀಡಿ

02:58 PM Jun 16, 2020 | Suhan S |

ಅಂಕೋಲಾ: ತಾಲೂಕಿನ ಪ್ರತಿಷ್ಠಿತ ನಾಮಧಾರಿ ಗಣೇಶೋತ್ಸವ ಸಮಿತಿಯವರು ಮುಂಬರುವ ಗಣೇಶೋತ್ಸವದ ಗಣಪತಿ ಮೂರ್ತಿ ತಯಾರಿ ಮತ್ತು ಹಬ್ಬ ಆಚರಿಸುವ ಕುರಿತಾಗಿ ಸೂಕ್ತ ಮಾಹಿತಿ ನೀಡುವಂತೆ ತಿಳಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಕೋವಿಡ್‌-19 ಇರುವ ಕಾರಣ ಸಾರ್ವಜನಿಕ ಸಭೆ ಸಮಾರಂಭ ನಿಷೇಧಿಸಲಾಗಿದ್ದು, ಗಣೇಶೋತ್ಸವ ಸಂದರ್ಭದಲ್ಲಿಯು ನೂರಾರು ಜನ ಸೇರುತ್ತಾರೆ. ಈ ಕುರಿತು ಗಣೇಶೋತ್ಸವ ಆಚರಿಸಬೇಕೊ ಬೆಡವೊ ಎನ್ನುವ ಕುರಿತು ತಕ್ಷಣ ತಿಳಿಸಬೇಕಿದೆ. ಏಕೆಂದರೆ ಹಬ್ಬ ಹತ್ತಿರ ಬರುತ್ತಿದೆ. ಎರಡು ತಿಂಗಳ ಮೊದಲೆ ಪೂರ್ವ ತಯಾರಿ ಆಗಬೇಕು. ಅಲ್ಲದೆ ಮೂರ್ತಿ ಮಾಡಬೇಕು ಎಂದು ತಹಶೀಲ್ದಾರ್‌ಗೆ ಮನವಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ತಹಶೀಲ್ದಾರ್‌ ಉದಯ ಕುಂಬಾರ, ಈ ಕುರಿತು ನಮಗೆ ಯಾವುದೇ ಆದೇಶ ಇರುವುದಿಲ್ಲ. ಮನವಿಯನ್ನು ಮೇಲಾಧಿಕಾರಿಗಳಿಗೆ ತಲುಪಿಸಿ ಅಲ್ಲಿಂದ ಬರುವ ಆದೇಶವನ್ನು ಮುಂದಿನ ದಿನದಲ್ಲಿ ತಿಳಿಸಲಾಗುವುದು ಎಂದು ಹೇಳಿದರು.

ನ್ಯಾಯವಾದಿ ಉಮೇಶ್‌ ನಾಯ್ಕ, ಸಮಿತಿ ಗೌರವಾಧ್ಯಕ್ಷ ಉಮೇಶ್‌ ನಾಯ್ಕ, ಅಧ್ಯಕ್ಷ ಏಕನಾಥ ನಾಯ್ಕ, ಕಾರ್ಯದರ್ಶಿ ಮೋಹನ್‌ ನಾಯ್ಕ, ಸಮಿತಿ ಸದ್ಯಸರಾದ ಸಂಜು ನಾಯ್ಕ, ಶಿವಾನಂದ ನಾಯ್ಕ, ಸೀತಾರಾಮ  ಮಂಜುನಾಥ ನಾಯ್ಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next