ಬಾಗಲಕೋಟೆ: ಜಿಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಿದರಿಂದ ನೀರಿಲ್ಲದೇ ಹಳ್ಳ, ಕೊಳ್ಳ, ನದಿಗಳು ಒಣಗಿ ಹೋಗಿವೆ. ಜನ-ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವಂತಾಗಿದೆ. ಟ್ಯಾಂಕರ್, ಬೊರವೆಲ್ ಮೂಲಕ ಕುಡಿಯುವ ನೀರು ಪೂರೈಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳು, ಸಿಬ್ಬಂದಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಬೀಳಗಿ ಶಾಸಕ ಮುರಗೇಶ ನಿರಾಣಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಬೀಳಗಿ ವಿಧಾನಸಭೆ ಕ್ಷೇತ್ರದ ತಾಲೂಕು ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮತನಾಡಿದರು.
ಕ್ಷೇತ್ರದ ಸಾರ್ವಜನಿಕರು ನಿತ್ಯ ನನಗೆ ಕರೆ ಮಾಡಿ ಗ್ರಾಮಗಳ ವಾಸ್ತವ ಸ್ಥಿತಿ ಹೇಳಿ ಕಣ್ಣೀರಿಡುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿದೆ. ಆದರೆ, ಪಿಡಿಒಗಳು ಯಾವುದೇ ಸಮಸ್ಯೆ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಅದು ಸರಿಯಲ್ಲ. ಪ್ರತಿ ಹಳ್ಳಿಗಳಿಗೆ
ಭೇಟಿ ನೀಡಿ ಪರಿಸ್ಥಿತಿ ಬಗೆಹರಿಸಬೇಕು. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮ, ಹಳ್ಳಿಗಳಿಗೆ ನೀರು ಪೂರೈಕೆ ಮಾಡುವಲ್ಲಿ ಬೊರವೆಲ್ ಕೆಟ್ಟುಹೋದಲ್ಲಿ ಅಥವಾ ಟ್ಯಾಂಕರ್ ಮೂಲಕ ನೀರು ಪೂರೈಸುವಲ್ಲಿ ತೊಂದರೆಯಾದಲ್ಲಿ ನನ್ನ ಗಮನಕ್ಕೆ ತರಬೇಕು. ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳ ಪಟ್ಟಿ ಮಾಡಿ ಶಾಶ್ವತ ನೀರು ಪೂರೈಕೆಯ ಯೋಜನೆ ರೂಪಿಸುವಲ್ಲಿ ಡಿಪಿಆರ್ ಸಿದ್ದಪಡಿಸಬೆಕು ಎಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ವೈ. ಬಸರಿಗಿಡದ, ಎಂ.ಕೆ. ತೊದಲಬಾಗಿ, ಬೀಳಗಿಯ ಭೀಮಪ್ಪ ತಾಳಿ, ಜಿಪಂ ಇಂಜಿನಿಯರಿಂಗ್ ವಿಭಾಗದ ಮಹೇಶ ಕಕರಡ್ಡಿ ಉಪಸ್ಥಿತರಿದ್ದರು.