ಉಪ್ಪಿನಂಗಡಿ: ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಿ ಜನ ಸಾಮಾನ್ಯರು ನೆಮ್ಮದಿಯ ಬದುಕು ನಡೆಸಲು ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಬೇಕು. ಆಗ ಪಕ್ಷ ಬೆಳೆಯಲು ಸಾಧ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಇಲ್ಲಿನ ಗಾಣಿಗರ ಸಮುದಾಯ ಭವನದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ಗೆಲುವಿನ ಪ್ರಯುಕ್ತ ಕಾರ್ಯಕರ್ತರಿಗೆ ಆಯೋಜಿಸಿದ್ದ ಅಭಿನಂದನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನ 22 ಗ್ರಾಮಗಳ ಪೈಕಿ 20 ಪಂಚಾಯತ್ ಬಿಜೆಪಿ ತೆಕ್ಕೆಗೆ ಬರಲು ಪಕ್ಷದ ಕಾರ್ಯಕರ್ತರ ಶ್ರಮ ಹಾಗೂ ಮತದಾರರ ಅರ್ಶಿವಾದ ಕಾರಣ ಎಂದರು. ನೆರೆಯ ತಾಲೂಕುಗಳಲ್ಲೂ ಬಿಜೆಪಿ ಯಶಸ್ಸು ಗಳಿಸಿದೆ ಎಂದರು.
ಜಿ.ಪಂ. ಸದಸ್ಯೆ ಶಯನಾ ಜಯಾನಂದ ತ್ಯಾಗ ಮನೋಭಾವದಿಂದಾಗಿ ಪಕ್ಷವು ರಾಷ್ಟ್ರೀಯ ಪಕ್ಷವಾಗಿ ಬೆಳೆದು ನಿಲ್ಲಲು ಸಾಧ್ಯವಾಗಿದೆ. ಅದರಂತೆ ಅಭಿವೃದ್ಧಿಯಲ್ಲಿ ರಸ್ತೆ, ನೀರು, ವಿದ್ಯುತ್ ವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗಿದೆ ಎಂದರು. ಕಾರ್ಯಕರ್ತರು ಯಾವುದೇ ಅಪೇಕ್ಷೆ ಇಲ್ಲದೆ ಪಕ್ಷದ ಸಿದ್ಧಾಂತವನ್ನು ಒಪ್ಪಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾ.ಪಂ. ಸದಸ್ಯರಾದ ಸುಜಾತಾ ಕೃಷ್ಣ ಶುಭ ಹಾರೈಸಿದರು. ಸಾಜ ರಾಧಾಕೃಷ್ಣ ಆಳ್ವ ಅವರು ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಸದಸ್ಯ ಮುಕುಂದ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ, ಉಪಾಧ್ಯಕ್ಷ ವಿನಾಯಕ ಪೈ, ಪ್ರಮುಖರಾದ ಉಷಾ ನಾಯ್ಕ, ಲೋಕೇಶ್ ಪೂಜಾರಿ, ಧನಂಜಯ್ ಕುಮಾರ್, ರುಕ್ಮಿಣಿ, ಸುರೇಶ್ ಅತ್ರಮಜಲು, ವನಿತಾ, ಶೋಭಾ, ಜಯಂತಿ ರಂಗಾಜೆ, ಆರ್. ಸಿ. ನಾರಾಯಣ, ಪುರುಷೋತ್ತಮ ಮುಂಗ್ಲಿಮನೆ, ಸಿ.ಎ ಬ್ಯಾಂಕ್ ಅಧ್ಯಕ್ಷ ಕೆ.ವಿ. ಪ್ರಸಾದ್, ಉಪಾಧ್ಯಕ್ಷ ಸುನಿಲ್ ದಡ್ಡು, ಪ್ರಮುಖರಾದ ಜಗದೀಶ ಶೆಟ್ಟಿ, ರಾಮ, ಯೋಗಿಶ ಶೆಣೈ, ರಾಮಚಂದ್ರ ಮಣಿಯಾಣಿ, ಪ್ರಸಾದ್ ಭಂಡಾರಿ, ಸದಾನಂದ ಪೂಜಾರಿ ನೆಕ್ಕಿಲಾಡಿ, ಪ್ರಶಾಂತ್, ಯು.ಜಿ. ರಾಧ, ದಯಾನಂದ, ರಮೇಶ್ ಭಂಡಾರಿ, ಯೋಗೀಶ ಗೌಡ ನೂಜಿ, ಯತೀಶ್ ಶೆಟ್ಟಿ, ನಂದಾವರ ಉಮೇಶ್ ಶೆಣೈ, ಕೆ. ಗಣೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಆನಂದ ಕುಂಟಿನಿ ಸ್ವಾಗತಿಸಿ ಆದೇಶ್ ಶೆಟ್ಟಿ ವಂದಿಸಿದರು. ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಒಲಿದು ಬಂದ ಉಪಾಧ್ಯಕ್ಷತೆ
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮತದ ಕೊರತೆ ಬಂದಾಗ ಯಾವುದೇ ಷರತ್ತು ವಿಧಿಸದೆ ತಾನು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುದಾಗಿ ಹೇಳಿದ ವಿನಾಯಕ ಪೈ ಅವರಿಗೆ ಉಪಾಧ್ಯಕ್ಷ ಹುದ್ದೆ ಒಲಿದು ಬಂದಿದೆ ಎಂದು ಶಾಸಕರು ಬಣ್ಣಿಸಿದರು.