Advertisement

Road rage case: ರೋಡ್‌ ರೇಜ್‌ ಕೇಸ್‌ ಬಗ್ಗೆ ದೂರು ನೀಡಿ; ಕಮಿಷನರ್‌

11:20 AM Sep 18, 2024 | Team Udayavani |

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ರೋಡ್‌ ರೇಜ್‌ ಪ್ರಕರಣಗಳನ್ನು ನಗರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಸಂತ್ರಸ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವುದರ ಜತೆಗೆ ಪೊಲೀಸ್‌ ಠಾಣೆ ಅಥವಾ ಪೊಲೀಸ್‌ ಸಹಾ ಯವಾಣಿ 112ಗೆ ಕರೆ ಮಾಡಿದಾಗ ತಕ್ಷಣ ಸ್ಪಂದಿಸ ಲಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಯಲ್ಲಿ ವಾಹನ ಅಡಡ್ಡಗಟ್ಟಿ ಹÇÉೆ ನಡೆಸಿ ಸಂದರ್ಭದಲ್ಲಿ ಸಂಯಮ ಕಳೆದು ಕೊಳ್ಳದೇ ಪೊಲೀಸರಿಗೆ ದೂರು ನೀಡಿ. ಸಂಚಾರ ನಿಯಮಗಳನ್ನು ಪಾಲಿಸುವುದು ಸಹ ಸಾರ್ವಜನಿಕರ ಕರ್ತವ್ಯ. ಸಂಚಾರದ ವೇಳೆ ವ್ಯತ್ಯಯಗಳಾದಾಗ ಸಂಯಮ ಕಳೆದುಕೊಳ್ಳುವುದರ ಬದಲು ಬಗೆಹರಿಸಿ ಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದು ಅವರು ತಿಳಿದ್ದಾರೆ.

ಕಾರಾಗೃಹದ ಅಧಿಕಾರಿಗಳ ವಿರುದ್ಧ ಕೇಸ್‌:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳ ಬಳಿ ಮೊಬೈಲ್‌ ಹಾಗೂ ಇತರೆ ಎಲೆಕ್ಟ್ರಾನಿಕ್‌ ಉಪಕರಣಗಳು ಪತ್ತೆಯಾದ ಕುರಿತು ಜೈಲಾಧಿ ಕಾರಿಗಳು, ಭದ್ರತಾ ಸಿಬ್ಬಂದಿ, ಸಂಬಂಧಪಟ್ಟ ಬ್ಯಾರಕ್‌ನಲ್ಲಿರುವ ಕೈದಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದರು. ಶನಿವಾರ ಆಗ್ನೇಯ ವಿಭಾಗದ ಪೊಲೀಸರ ತಂಡ ದಾಳಿ ನಡೆಸಿದಾಗ ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳು ಪತ್ತೆಯಾಗಿವೆ. ತನಿಖೆ ಆರಂಭಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next