Advertisement

High Court: ಜ್ಯೋತಿಷಿ ಕೇಸ್‌ ರದ್ದತಿಗೆ ಕೋರ್ಟ್‌ ನಕಾರ

10:05 AM Sep 04, 2024 | Team Udayavani |

ಬೆಂಗಳೂರು: ಕುಂಡಲಿ ಪೂಜೆ ನೆಪದಲ್ಲಿ ಮಹಿ ಳೆ ಯೊಂದಿಗೆ ಅಸಭ್ಯ ವರ್ತಿಸಿ ಆಕೆಯ ಗೌರವಕ್ಕೆ ಧಕ್ಕೆ ತಂದ ಆರೋಪದಲ್ಲಿ ಜ್ಯೋತಿಷಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ.

Advertisement

ಇದೇ ವೇಳೆ ಜ್ಯೋತಿಷಿ ಬಳಿಗೆ ಕರೆದುಕೊಂಡು ಹೋಗಿದ್ದಲ್ಲದೆ ಅವರ ವರ್ತನೆಯನ್ನು ಪ್ರಶ್ನಿಸದ ಮಹಿಳೆಯ ಪತಿಯ ವಿರುದ್ಧದ ಪ್ರಕರಣವನ್ನೂ ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ. ಮಹಿಳೆಯ ಪತಿ ಎಚ್‌.ಪಿ.ದೀಪ ದರ್ಶನ್‌ ಮತ್ತು ಜ್ಯೋತಿಷಿ ಮೋಹನ್‌ ದಾಸ್‌ ಅಲಿ ಯಾಸ್‌ ಶಿವರಾಮು ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ, ಅರ್ಜಿ ಯನ್ನು ವಜಾಗೊಳಿಸಿ ಆದೇಶಿಸುವ ಮೂಲಕ ಪ್ರಕರಣ ರದ್ದುಪಡಿಸಿಲು ನಿರಾಕರಿಸಿದೆ.

ಪತ್ನಿಯ ಕುಂಡಲಿ ದೋಷವನ್ನು ಸರಿಪಡಿಸಲು ಪತಿ ದೀಪ ದರ್ಶನ್‌ ಅವರು ದೂರುದಾರರಾಗಿರುವ ಪತ್ನಿಯನ್ನು ಜ್ಯೋತಿಷಿಯಾದ ಮೋಹನ್‌ ದಾಸ್‌ ಎಂಬುವರ ಬಳಿಗೆ ಕರೆದೊಯ್ದಿದ್ದರು. ಜ್ಯೋತಿಷಿಯು ಮಹಿಳೆ ದೇಹವನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಮೂಲಕ ಜ್ಯೋತಿಷಿ ಅಪರಾಧವೆಸಗಿದ್ದರೆ, ಅದನ್ನು ವಿರೋಧಿಸದಂತೆ ಎಚ್ಚರಿಕೆ ನೀಡುವ ಮೂಲಕ ಮಹಿಳೆಯ ಪತಿಯೂ ಅಪರಾಧ ಮಾಡಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ಇಬ್ಬರೂ ಅರ್ಜಿದಾರರ ವಿರುದ್ಧ ಗಂಭೀರ ಸ್ವರೂಪದ ಆರೋಪವಿದೆ.

ಈ ಮೊದಲು ದಾಖಲಿಸಿದ್ದ ಪ್ರಕರಣ ಮತ್ತು ಎರಡನೇ ಬಾರಿ ದಾಖಲಿಸಿದ್ದ ಪ್ರಕರಣದಲ್ಲಿ ಒಂದೇ ರೀತಿಯ ಆರೋಪಗಳಿದ್ದು, ಪ್ರಕರಣದ ರದ್ದುಗೊಳಿ ಸ ಬೇಕು ಎಂದು ಅರ್ಜಿದಾರರ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿತು.

ಮದುವೆ ದುರದೃಷ್ಟ : ದಂಪತಿ 2014ರಲ್ಲಿ ಮದುವೆಯಾಗಿದ್ದು ಅಂದಿನಿಂದ ಮನೆಗೆ ದುರದೃಷ್ಟವಾಗಿದೆ. ಮದುವೆಯಾದ ದಿನದಿಂದ ಅಪಹಾಸ್ಯ ಮಾಡುವುದು ಮತ್ತು ಕ್ರೌರ್ಯದಿಂದ ನಡೆಸಿಕೊಳ್ಳುತ್ತಿದ್ದರು. ಅಲ್ಲದೆ, ಈ ಸಂಬಂಧ ಜ್ಯೋತಿಷಿ ಇಲ್ಲವೇ ದೇವಮಾ ನವರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬು ದಾಗಿ ಪತಿಯ ಕುಟುಂಬದವರ ಒತ್ತಾಯ ಯಿಸಿದ್ದರು. ಅದಕ್ಕಾಗಿ ಜ್ಯೋತಿಷ್ಯಾಲ ಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆಗ ಕುಂಡಲಿಯನ್ನು ಸರಿಪಡಿಸುವು ದಕ್ಕಾಗಿ ಪೂಜೆ ಮಾಡುವ ಸೋಗಿನಲ್ಲಿ ಆಕೆ ದೇಹವನ್ನು ಅನುಚಿತವಾಗಿ ಸ್ಪರ್ಶಿಸಿ ಅಪರಾಧವೆಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಇದೇ ವೇಳೆ ಮಹಿಳೆ ತನ್ನ ಪತಿಯ ವಿರುದ್ಧವೂ ದೂರು ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.