Advertisement

ಹೆಣ್ಣು ಮಗು ಹೆತ್ತಿದ್ದಕ್ಕೆ ಫೋನ್ ನಲ್ಲಿ ತಲಾಖ್ ಕೊಟ್ಟ ಭೂಪ

10:53 AM Oct 21, 2019 | Team Udayavani |

ಉತ್ತರಪ್ರದೇಶ: ಹೆಣ್ಣು ಮಗು ಹೆತ್ತಿದ್ದಕ್ಕೆ ನನ್ನ ಗಂಡ ತಲಾಖ್ ನೀಡಿದ್ದಾನೆ ಎಂದು ಆರೋಪಿಸಿ ಮಹಿಳೆಯೋರ್ವರು ಸಾಂಬಾಲ್ ಪೊಲೀಸ್ ಠಾಣೆಯಲ್ಲಿ ದೂರು  ದಾಖಲಿಸಿದ್ದಾರೆ.

Advertisement

11 ವರುಷಗಳ ಹಿಂದೆ ಕಮಿಲ್ ಜೊತೆ ಮದುವೆಯಾಗಿದ್ದು, ಈಗಾಗಲೇ ನಾಲ್ಕು ಹೆಣ್ಣುಮಕ್ಕಳಿದ್ದಾರೆ. ಅಕ್ಟೋಬರ್ 11 ರಂದು ಐದನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಗಂಡನಿಗೆ ಕೂಡಲೇ  ವಿಷಯ ತಿಳಿಸಿದ್ದಾರೆ. ಅದರೇ ಮಾಹಿತಿ ತಿಳಿದು ಗಂಡ  ಫೋನ್ ನಲ್ಲೇ  ತಲಾಖ್ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಇದೀಗ ಮಹಿಳೆ ತವರು ಮನೆಯಲ್ಲಿದ್ದು, ಗಂಡನ ಮನೆಯವರೊಂದಿಗೆ ಹಲವು ವರುಷಗಳಿಂದ ವ್ಯಾಜ್ಯವಿತ್ತು ಎಂದು ಹೇಳಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 147, 452,323,504 ಮತ್ತು ಮುಸ್ಲಿಂ ಮಹಿಳಾ ಕಾಯ್ದೆ( ಮದುವೆ ಹಕ್ಕು ರಕ್ಷಣೆ) ಯಡಿಯಲ್ಲಿ ದೂರು ದಾಖಲಿಸಿಕೊಂಡು ಪೊಲೀಸರು  ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next