Advertisement
ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿದ ವಿಜಯ ಮಲ್ಯ ಅವರನ್ನು ಭಾರತ ಕ್ಕೆ ಗಡಿಪಾರು ಮಾಡುವ ಬಗೆ ಗಿನ ಪ್ರಕರಣದ ವಿಚಾರಣೆ ವೇಳೆ ಮಲ್ಯ ಪರ ನ್ಯಾಯವಾದಿ “ಭಾರತದ ಜೈಲುಗಳಲ್ಲಿ ಪ್ರಾಕೃತಿಕವಾಗಿ ಬೆಳಕು ಮತ್ತು ಗಾಳಿ ಸಂಚಾರ ಇರುವುದಿಲ್ಲ’ ಎಂದು ವಾದಿಸಿದರು. ಈ ಹಿನ್ನೆಲೆಯಲ್ಲಿ ಜಡ್ಜ್ ಎಮ್ಮಾ ಆರ್ಬತ್ನಾಟ್, ಆರ್ಥರ್ ರೋಡ್‌ನ ಜೈಲಿನ ಬ್ಯಾರೆಕ್ ಸಂಖ್ಯೆ 12ರ ವಿಡಿಯೋ ಚಿತ್ರೀ ಕರಣ ನಡೆಸುವಂತೆ ಆದೇಶಿಸಿದರು. ಮುಂ ದಿನ ವಿಚಾರಣೆ ಸೆ.12ರಂದು ನಡೆಯಲಿದೆ.
ಸಾಲ ಪಾವತಿಗೆ ಸಿದ್ಧ: ವಿಚಾರಣೆ ಆರಂಭಕ್ಕೆ ಮುನ್ನ ಪತ್ರಕರ್ತರ ಜತೆಗೆ ಮಾತನಾಡಿದ್ದ ಮಲ್ಯ “ನನ್ನ ವಿರುದ್ಧ ಇರುವ ಆರೋಪಗಳೆಲ್ಲ ಸುಳ್ಳು. ಬ್ಯಾಂಕ್‌ಗಳಿಗೆ ಬಾಕಿ ಮೊತ್ತ ಪಾವತಿ ಮಾಡಲು ಸಿದ್ಧನಿದ್ದೇನೆ. ಅದಕ್ಕಾಗಿ 14 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಮಾರಲು ಸಿದ್ಧ’ ಎಂದು ಹೇಳಿದ್ದರು. ಆರ್ಥರ್ ರಸ್ತೆ ಜೈಲು ಅತ್ಯುತ್ತಮ ಕಾರಾಗೃಹ
ಗಡೀಪಾರು ಬಳಿಕ ಮಲ್ಯ ಅವರನ್ನು ಇರಿಸಲು ಉದ್ದೇಶಿಸಲಾಗಿರುವ ಮುಂ ಬೈನ ಆರ್ಥರ್ ರಸ್ತೆ ಜೈಲು ದೇಶದಲ್ಲೇ ಅತ್ಯುತ್ತಮ ಕಾರಾಗೃಹ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. ಯುಕೆ ಕೋರ್ಟ್ ನಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯಿ ಸಿರುವ ಇಲಾಖೆ, ಇತರೆ ದೇಶಗಳಂತೆ ಭಾರತದ ಜೈಲುಗಳೂ ಚೆನ್ನಾಗಿವೆ. ಇಲ್ಲಿ ಕೈದಿಗಳ ಹಕ್ಕುಗಳನ್ನು ರಕ್ಷಿಸಲಾಗುತ್ತಿದೆ. ಜೈಲಿನಲ್ಲಿ ಜೀವಕ್ಕೆ ಅಪಾಯವಿದೆ ಎಂಬ ಮಲ್ಯ ಅವರ ವಾದವು ದಾರಿತಪ್ಪಿಸು ವಂಥದ್ದು ಎಂದೂ ಹೇಳಿದೆ.