Advertisement
ಹೌದು. ನರಗುಂದ ತಾಲೂಕಿನ ವಾಸನ ಗ್ರಾಪಂ ವ್ಯಾಪ್ತಿಯ ಬೆಳ್ಳೇರಿ ಹೊರತಾಗಿ ವಾಸನ ಮತ್ತು ಲಖಮಾಪುರ ಗ್ರಾಮಗಳು ಈ ಬಾರಿ ನೆರೆ ಹಾವಳಿಗೆ ಜರ್ಜರಿತವಾಗಿದೆ. ಪ್ರವಾಹದ ನೀರಿನ ಮಟ್ಟ ಇಳಿದು ಬರೋಬ್ಬರಿ ಒಂದು ವಾರದ ಕಳೆದರೂ ಲಖಮಾಪುರದಲ್ಲಿ ಅಲ್ಲೊಂದು ಇಲ್ಲೊಂದು ಮನೆಯ ಗೋಡೆಗಳು ಕುಸಿಯುತ್ತಲೇ ಇವೆ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು.
Related Articles
Advertisement
ಆದರೆ, ವಾಸನದ ಜನರ ಪುನರ್ವಸತಿಗೆ ಈ ಸಮಸ್ಯೆಯಿಲ್ಲ. ಈಗಾಗಲೇ ಗ್ರಾಮದ ಹೊರವಲಯದಲ್ಲ್ಲಿ ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಿಸಲಾಗಿದೆ. ಅದೇ, ಭಾಗದಲ್ಲಿ ಉಳಿದಿರುವ ಜಾಗೆಯಲ್ಲಿ ಮತ್ತಷ್ಟು ಮನೆಗಳಿಗೆ ನಿರ್ಮಿಸಿ, ಅಗತ್ಯವಿರುವವರಿಗೆ ಹಂಚಿಕೆ ಮಾಡಿದರಾಯ್ತು ಎಂಬುದು ಸ್ಥಳೀಯ ಆಡಳಿತದ ಲೆಕ್ಕಾಚಾರ.
ಸ್ವಂತ ಮನೆಗಳತ್ತ ಸಂತ್ರಸ್ತರ ಹೆಜ್ಜೆ: ಈ ನಡುವೆ ಮಲಪ್ರಭಾ ನದಿ ಪ್ರವಾಹ ಇಳಿಯುತ್ತಿದ್ದಂತೆ ನೆರೆ ಸಂತ್ರಸ್ತರು ಮೂಲ ಮನೆಗಳತ್ತ ಮುಖ ಮಾಡುತ್ತಿದ್ದಾರೆ. ಗ್ರಾಮಕ್ಕೆ ನೀರು ನುಗ್ಗಿದಾಗ ಸ್ಥಿತಿವಂತರು ತಮ್ಮ ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಅಗತ್ಯ ವಸ್ತುಗಳು, ದವಸ- ಧಾನ್ಯ ಹಾಗೂ ದಿನಬಳಕೆ ವಸ್ತುಗಳೊಂದಿಗೆ ಊರು ತೊರೆದಿದ್ದರು. ಇದೀಗ ಅವೆಲ್ಲ ಸಾಮಗ್ರಿ ಹಾಗೂ ದಾನಿಗಳು ನೀಡಿದ ನೆರವನ್ನೂ ಹೊತ್ತು ತಮ್ಮ ಮನೆಗಳಿಗೆ ಬರುತ್ತಿದ್ದಾರೆ. ಇನ್ನೂ, ಕೆಲವರು ಐದಾರು ದಿನಗಳ ಹಿಂದೆಯೇ ಮನೆ ಸೇರಿಕೊಂಡಿದ್ದು, ಗ್ರಾಮದಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೀಗಾಗಿ ಪ್ರವಾಹ ಸಂತ್ರಸ್ತರಿಗಾಗಿ ಆರಂಭಿಸಿದ್ದ ವಾಸನದ ಪರಿಹಾರ ಕೇಂದ್ರದಲ್ಲಿ ಜನರ ಸಂಖ್ಯೆ ಇಳಿಮುಖವಾಗುತ್ತಿದೆ. ಮನೆ ಕುಸಿದು ನೆಲೆ ಕಳೆದುಕೊಂಡವರು ಮಾತ್ರ ಪರಿಹಾರ ಕೇಂದ್ರದಲ್ಲಿ ಹೊಟ್ಟೆತುಂಬಿಸಿಕೊಂಡು, ತಾಟಪಾಲ್ನಿಂದ ನಿರ್ಮಿಸಿ ಕೊಂಡಿರುವ ಟೆಂಟ್‌ಗಳಲ್ಲೇ ವಾಸ ಮುಂದುವರಿಸಿದ್ದಾರೆ.
ಲಖಮಾಪುರದ ಜನತೆಗಾಗಿ ಬೆಳ್ಳೇರಿಯ ಕೃಷಿ ಫಾರ್ಮ್ನಲ್ಲಿ ಆರಂಭಿಸಿದ್ದ ಪರಿಹಾರ ಕೇಂದ್ರದಲ್ಲಿ ಜನರ ಕೊರತೆಯಿಂದಾಗಿ ಇತ್ತೀಚೆಗೆ ಬಾಗಿಲು ಮುಚ್ಚಿದೆ. ಲಖಮಾಪುರದ ಬಹುತೇಕ ಮನೆಗಳು ಸುಸ್ಥಿತಿಯಲ್ಲಿರುವುದರಿಂದ ನೆರೆ ಸಂತ್ರಸ್ತರು ತಮ್ಮ ಮೂಲ ಮನೆಗಳಿಗೆ ಹಿಂದಿರುಗಿದ್ದಾರೆ. ನೆಲೆ ಇಲ್ಲದವರು ತಮ್ಮ ಹೊಲದಲ್ಲಿರುವ ತೋಟದ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ದಾನಿಗಳಿಂದ ಹರಿದು ಬಂದ ಅಕ್ಕಿ, ಹಿಟ್ಟು, ಮತ್ತಿತರೆ ದವಸ ಧಾನ್ಯಗಳನ್ನೇ ಬಳಸಿಕೊಂಡು ದಿನ ದೂಡುತ್ತಿದ್ದಾರೆ.
ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಚಿಂತನೆ: ಸದ್ಯ ವಾಸನ ಹಾಗೂ ಲಖಮಾಪುರದ ನೆರೆ ಸಂತ್ರಸ್ತರು ತಾಟಪತ್ರಿ ಹಾಗೂ ಪ್ಲಾಸ್ಟಿಕ್ ಚೀಲಗಳಿಂದ ಸಿದ್ಧಗೊಳಿಸಿದ ಪರದೆಯಿಂದ ತಾತ್ಕಾಲಿಕವಾಗಿ ಟೆಂಟ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಕಳೆದ 15 ದಿನಗಳಿಂದ ಗಾಳಿ, ಮಳೆ ಎನ್ನದೇ ಅದರಲ್ಲೇ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಜನರ ಮನವಿ ಮೇರೆಗೆ ವಾಸನದಲ್ಲಿ ಟಿನ್‌ಗಳಿಂದ ತಾತ್ಕಾಲಿಕ ಶೆಡ್ ನಿರ್ಮಿಸಬೇಕು ಎಂಬುದು ವಸತಿ ರಹಿತರ ಮನವಿ.
•ವೀರೇಂದ್ರ ನಾಗಲದಿನ್ನಿ